Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

1,2,3,5,6,7,8,9 ರನ್ ಗಳಿಸಿ ಟ್ರೋಲ್ ಆದ ರಾಜಸ್ಥಾನ್ ರಾಯಲ್ಸ್‌ ಪ್ಲೇಯರ್ಸ್

Ipl 2020: Fans Troll Rajasthan Royals Players After They Scored Single Digit Runs

ರಾಜಸ್ಥಾನ್ ರಾಯಲ್ಸ್‌ ತಂಡದ ಪ್ರದರ್ಶನ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್‌ಗೆ ಗುರಿಯಾಗಿದೆ. ಇದಕ್ಕೆ ಕಾರಣ ರಾಜಸ್ಥಾನ್ ರಾಯಲ್ಸ್‌ ಆಟಗಾರರು ಗಳಿಸಿರುವ ರನ್.

ಹೌದು, ಕಿಂಗ್ಸ್‌ ಇಲೆವೆನ್ ಪಂಜಾಬ್ ವಿರುದ್ಧ 224ರನ್‌ಗಳ ಬೃಹತ್ ಗುರಿಯನ್ನು ಇನ್ನೂ ಮೂರು ಎಸೆತ ಬಾಕಿ ಇರುವಂತೆಯೇ ಗೆದ್ದು ಐಪಿಎಲ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದ ರಾಜಸ್ಥಾನ್ ರಾಯಲ್ಸ್‌ ಕೆಕೆಆರ್‌ ಯುವ ಪಡೆ ವಿರುದ್ಧ ಮುಗ್ಗರಿಸಿದೆ. ಅದರಲ್ಲೂ ಅನೇಕ ಬ್ಯಾಟ್ಸ್‌ಮನ್‌ಗಳು ತೀರಾ ಕಳಪೆ ಪ್ರದರ್ಶನ ತೋರಿದ್ದಾರೆ.

ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದ ಸ್ವೀವ್ ಸ್ಮಿತ್ ಪಡೆ ಕೆಕೆಆರ್ ನೀಡಿದ 175 ರನ್ ಗುರಿಯನ್ನು ಬೆನ್ನತ್ತಲಾಗದೇ 137ರನ್‌ಗಳಿಗೆ ಇನ್ನಿಂಗ್ಸ್‌ ಮುಗಿಸಿತು. ಆರ್‌ಆರ್ ಪ್ರಮುಖ ಬ್ಯಾಟ್ಸ್‌ಮನ್‌ಗಳೇ ಕೈ ಕೊಟ್ಟ ಪರಿಣಾಮ ಕೆಕೆಆರ್‌ಗೆ 37 ರನ್‌ಗಳಿಂದ ಜಯ ದಾಖಲಿಸಿತು.

ಈ ಪಂದ್ಯದ ಬಳಿಕ ರಾಜಸ್ಥಾನ್ ರಾಯಲ್ಸ್‌ ಸ್ಕೋರ್‌ಕಾರ್ಡ್‌ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲಿಗರಿಗೆ ಆಹಾರವಾಗಿದೆ. ಏಕೆಂದರೆ ಆರ್‌ಆರ್‌ ಬ್ಯಾಟ್ಸ್‌ಮನ್‌ಗಳಿಸಿದ 1,2,3,5,6,7,8,9 ರನ್.

ಹೌದು ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್‌ಗಳ ಪ್ರದರ್ಶನ ಯಾವ ಮಟ್ಟಿಗೆ ಇತ್ತು ಅನ್ನೋದಕ್ಕೇ ಈ ಸಂಖ್ಯೆಗಳೇ ಉದಾಹರಣೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ಆಟಗಾರರಾದ ರಿಯಾನ್ ಪರಾಗ್ 1 , ಉತ್ತಪ್ಪ 2 , ಸ್ಮಿತ್ 3 , ಶ್ರೇಯಸ್ ಗೋಪಾಲ್ 5 , ಆರ್ಚರ್ 6 , ರಜಪೂತ್ 7 * , ಸ್ಯಾಮೃನ್ 8 , ಉನಾದ್ಕಟ್‌ 9 ರನ್ ಗಳಿಸಿದ್ದಾರೆ.

ಈ ಸೀರಿಯಲ್ ನಂಬರ್‌ಗಳನ್ನು ಕಂಡ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ರಾಜಸ್ಥಾನ್ ಆಟಗಾರರನ್ನು ಟ್ರೋಲ್ ಮಾಡಿದ್ದಾರೆ.

Story first published: Tuesday, October 6, 2020, 16:05 [IST]
Other articles published on Oct 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+