ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಜಾರಿದ ಸಿಎಸ್‌ಕೆ: ಟ್ರೋಲ್ ಮೂಲಕ ಕಾಲೆಳೆದ ನೆಟ್ಟಿಗರು

ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು ಸೋಲಿಸುವ ಮೂಲಕ ಭರ್ಜರಿಯಾಗಿ ಅಭಿಯಾನವನ್ನು ಆರಂಭಿಸಿತು. ಆದರೆ ಈ ಖುಷು ಚೆನ್ನೈ ಪಾಲಿಗೆ ಹೆಚ್ಚು ದಿನ ಉಳಿಯಲಿಲ್ಲ. ಮುಂದಿನ ಎರಡು ಪಂದ್ಯಗಳಲ್ಲೂ ಸತತವಾಗಿ ಸೋತಿರುವ ಧೋನಿ ಪಡೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.
ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟೂರ್ನಿಯಲ್ಲಿ ಮೊದಲ ಗೆಲುವನ್ನು ಸಾಧಿಸಿತು. ಈ ಗೆಲುವಿನ ಮೂಲಕ ಹೈದರಾಬಾದ್ ಅಂಕಪಟ್ಟಿಯಲ್ಲಿ ಮುನ್ನಡೆಯನ್ನು ಪಡೆದುಕೊಂಡಿತು. ಹೀಗಾಗಿ 7ನೇ ಸ್ಥಾನದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊನೆಯ ಸ್ಥಾನಕ್ಕೆ ಜಾರಿದೆ.
ಸಿಕ್ಕಾಪಟ್ಟೆ ಟ್ರೋಲ್
ಪ್ರತಿ ಬಾರಿಯೂ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡುವ ಸಿಎಸ್‌ಕೆ ತಂಡ ಈ ಬಾರಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಆದರೆ ನೆಟ್ಟಿಗರು ಮಾತ್ರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಥಿತಿಯನ್ನು ಕಂಡು ಕಾಲೆಳೆಯುತ್ತಾ ಟ್ರೋಲ್ ಮಾಡುತ್ತಿದ್ದಾರೆ.
ನಿತ್ಯವೂ ಐಪಿಎಲ್ ಟ್ರೆಂಡಿಂಗ್
ಪ್ರತಿ ಐಪಿಎಲ್ ಪಂದ್ಯದ ಬಳಿಕವೂ ಟ್ವಿಟ್ಟರ್‌ನಲ್ಲಿ ಐಪಿಎಲ್ ಪಂದ್ಯದ ಕೆಲ ವಿಚಾರಗಳು ಭಾರೀ ಟ್ರೆಂಡಿಂಗ್‌ನಲ್ಲಿರುತ್ತದೆ. ಈ ಬಾರಿಯಂತೂ ನಿತ್ಯವೂ ಟ್ವಿಟ್ಟರ್ ಟ್ರೆಂಡಿಂಗ್ ಪಟ್ಟಿಯಲ್ಲಿ ಐಪಿಎಲ್ ಸುದ್ದಿಗಳು ಹೆಚ್ಚು ಸದ್ದು ಮಾಡುತ್ತಿವೆ. ಪಂದ್ಯದ ಘಟನೆಗಳನ್ನು ಇಟ್ಟುಕೊಂಡು ಕಾಲೆಳೆಯುತ್ತಾ ಹೆಚ್ಚಿನ ಚರ್ಚೆಗೆ ಕಾರಣವಾಗುತ್ತಿದೆ.
ಹೆಚ್ಚಾಗಿ ಕಾಲೆಳೆಸಿಕೊಂಡ ಚೆನ್ನೈ
ಆದರೆ ಚೆನ್ನೈ ಸೂಪರ್ ಕಿಂಗ್ಸ್ ಮಾತ್ರ ಈ ವಿಚಾರದಲ್ಲಿ ಸ್ವಲ್ಪ ಹೆಚ್ಚಾಗೇ ಟ್ರೋಲ್‌ಗೆ ಗುರಿಯಾಗಿದೆ. ಸ್ವತಃ ಚೆನ್ನೈ ಅಭಿಮಾನಿಗಳು ಕೂಡ ತಮ್ಮ ತಂಡದ ಪರಿಸ್ಥಿತಿಯನ್ನು ತಮಾಷೆಯಾಗಿ ಟ್ರೋಲ್ ಮಾಡಿಕೊಂಡ ರಂಜಿಸುತ್ತಿದ್ದಾರೆ. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಕೂಡ ಬರುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications