'ನಿಮಗೆ ಶಾರ್ಜಾವೊಂದೇ ಗತಿ': ಸತತ ಸೋಲಿನ ಬಳಿಕ ಟ್ರೋಲ್ ಆದ ರಾಜಸ್ಥಾನ ರಾಯಲ್ಸ್
ಈ ಬಾರಿಯ ಐಪಿಎಲ್ ಆವೃತ್ತಿಯ ಮೊದಲ ಎರಡು ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದಿದ್ದ ರಾಜಸ್ಥಾನ ರಾಯಲ್ಸ್ ತಂಡ ನಂತರ ಸತತ ಸೋಲುಗಳಿಂದ ಕಂಗೆಟ್ಟಿದೆ. ಶಾರ್ಜಾದಲ್ಲಿ ನಡೆದಿದ್ದ ಎರಡೂ ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡ 200ಕ್ಕೂ ಹೆಚ್ಚು ರನ್ ಗಳಿಸಿತ್ತು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 216/7 ರನ್ ಗಳಿಸಿದ್ದರೆ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನೀಡಿದ್ದ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ 226 ರನ್ ಗಳಿಸುವ ಮೂಲಕ ಸೋಲಿನ ಕಹಿ ತೋರಿಸಿತ್ತು. ಮುಖ್ಯವಾಗಿ ಆರ್ಆರ್ ತಂಡದ ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅಬ್ಬರದ ಪ್ರದರ್ಶನ ತೋರಿದ್ದರು.
ಆರಂಭದಲ್ಲಿ ಅಂಕಪಟ್ಟಿಯ ಮೊದಲ ಸ್ಥಾನದಲ್ಲಿದ್ದ ರಾಜಸ್ಥಾನ ರಾಯಲ್ಸ್ ತಂಡ, ಈ ಬಾರಿ ತೀವ್ರ ಪೈಪೋಟಿ ನೀಡಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಶಾರ್ಜಾದಿಂದ ಬೇರೆ ಸ್ಥಳಕ್ಕೆ ತೆರಳಿದ ಬಳಿಕ ರಾಜಸ್ಥಾನ ರಾಯಲ್ಸ್ ಸತತ ಸೋಲುಗಳನ್ನು ಕಂಡಿದೆ. ಅಬುದಾಬಿಯಲ್ಲಿ ಎರಡು ಹಾಗೂ ದುಬೈನಲ್ಲಿ ಒಂದು ಪಂದ್ಯವನ್ನು ಆಡಿದ್ದು, ಮೂರರಲ್ಲಿಯೂ ಆರ್‌ಆರ್ ಹೀನಾಯ ಪ್ರದರ್ಶನ ತೋರಿಸಿದೆ.
ಹ್ಯಾಟ್ರಿಕ್ ಸೋಲುಗಳ ಮೂಲಕ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದೆ. ಈ ಮೂರೂ ಪಂದ್ಯಗಳಲ್ಲಿ ಮೊದಲ ಏಳು ಓವರ್‌ಗಳಲ್ಲಿಯೇ ಮೇಲಿನ ಕ್ರಮಾಂಕದ ಪ್ರಮುಖ ಬ್ಯಾಟ್ಸ್‌ಮನ್‌ಗಳ ವಿಕೆಟ್ ಕಳೆದುಕೊಂಡಿದೆ. ಮುಂದೆ ಓದಿ...

ಪ್ರಮುಖರ ವೈಫಲ್ಯ
ಶಾರ್ಜಾದಲ್ಲಿ ಅಬ್ಬರಿಸಿದ್ದ ಆರ್ಆರ್ ಬ್ಯಾಟ್ಸ್‌ಮನ್‌ಗಳು ಅಬುದಾಬಿ ಮತ್ತು ದುಬೈನಲ್ಲಿ ತೀರಾ ಮಂಕಾಗಿದ್ದಾರೆ. ಅದರಲ್ಲಿಯೂ ಮೊದಲ ಎರಡು ಪಂದ್ಯಗಳಲ್ಲಿ ಅರ್ಧ ಶತಕ ಗಳಿಸಿದ್ದ ನಾಯಕ ಸ್ಟೀವ್ ಸ್ಮಿತ್ ಮತ್ತು ಸಂಜು ಸ್ಯಾಮ್ಸನ್ ಸತತ ವೈಫಲ್ಯ ಅನುಭವಿಸಿದ್ದಾರೆ.

ಮಿಂಚಿದ ಬಟ್ಲರ್
ಸ್ಟೀವ್ ಸ್ಮಿತ್ ಕೊನೆಯ ಮೂರು ಪಂದ್ಯಗಳಲ್ಲಿ 3, 5 ಮತ್ತು 6 ರನ್ ಗಳಿಸಿದ್ದರೆ, ಸಂಜು ಸ್ಯಾಮ್ಸನ್ 8, 4, ಮತ್ತು 0 ಸ್ಕೋರ್ ಮೂಲಕ ವೈಫಲ್ಯ ಕಂಡಿದ್ದಾರೆ. ಜೋಸ್ ಬಟ್ಲರ್ ಹೊರುಪಡಿಸಿದರೆ ಮೇಲಿನ ಕ್ರಮಾಂಕದ ಯಾವ ಆಟಗಾರರೂ ಕೊಂಚವೂ ಪ್ರತಿರೋಧದ ಪ್ರದರ್ಶನ ತೋರಿಸಿಲ್ಲ.
ಭಾರತದ ಯುವ ವೇಗಿ ಕಾರ್ತಿಕ್ ತ್ಯಾಗಿ ಬಗ್ಗೆ ಬೆನ್ ಸ್ಟೋಕ್ಸ್ ಟ್ವೀಟ್

ಫ್ಲಾಟ್ ಟ್ರ್ಯಾಕ್‌ನಲ್ಲಿ ಮಾತ್ರ ಆಡುವವರು
ಇದರ ಬಳಿಕ ಸ್ಟೀವ್ ಸ್ಮಿತ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡ ತೀವ್ರ ಟೀಕೆಗೆ ಗುರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಸ್ಟೀವ್ ಸ್ಮಿತ್ ಮತ್ತು ಸಂಜು ಸ್ಯಾಮ್ಸನ್ ಇಬ್ಬರೂ ಫ್ಲಾಟ್ ಟ್ರ್ಯಾಕ್ ಬುಲ್ಲೀಸ್ ಎಂದು ಲೇವಡಿ ಮಾಡಲಾಗಿದೆ.

ಉಳಿದ ಪಂದ್ಯಗಳನ್ನು ಶಾರ್ಜಾದಲ್ಲಿ ನಡೆಸಿ
ಐಪಿಎಲ್ ಆಡಳಿತ ಸಮಿತಿಯು ರಾಜಸ್ಥಾನ ರಾಯಲ್ಸ್ ತಂಡದ ಮುಂದಿನ ಪಂದ್ಯಗಳನ್ನು ಶಾರ್ಜಾದಲ್ಲಿಯೇ ಆಯೋಜನೆ ಮಾಡಲಿ. ಅಲ್ಲಿನ ಫ್ಲಾಟ್ ಪಿಚ್‌ಗಳು ಹಾಗೂ ಪುಟ್ಟದಾದ ಮೈದಾನದಲ್ಲಿ ಮಾತ್ರವೇ ಅವರಿಗೆ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸುವುದು ಸಾಧ್ಯ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಗೌತಮ್ ಗಂಭೀರ್ ವಿರುದ್ಧವೂ ಟೀಕೆ
ಎರಡು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಸಂಜು ಸ್ಯಾಮ್ಸನ್ ಅವರನ್ನು ವ್ಯಾಪಕವಾಗಿ ಪ್ರಶಂಸೆ ಮಾಡಲಾಗಿತ್ತು. ಆದರೆ ಬೌನ್ಸ್ ಹಾಗೂ ತಿರುವು ಪಡೆಯುವ ಪಿಚ್‌ಗಳಲ್ಲಿ ಬೌಲರ್‌ಗಳನ್ನು ಎದುರಿಸಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಲಾಗುತ್ತಿದೆ. ಭಾರತ ರಾಷ್ಟ್ರೀಯ ತಂಡದಲ್ಲಿ ಸ್ಥಾನಪಡೆಯಲು ಸಂಜು ಸ್ಯಾಮ್ಸನ್‌ಗೆ ಅರ್ಹತೆ ಇದೆ ಎಂದು ಅವರನ್ನು ಬೆಂಬಲಿಸಿದ್ದ ಗೌತಮ್ ಗಂಭೀರ್ ಅವರನ್ನು ಕೂಡ ಟ್ರೋಲ್ ಮಾಡಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications