
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿಯ ಈಗಿನ ಬ್ಯಾಟಿಂಗ್ ಶೈಲಿಯ ಬಗ್ಗೆ ಅಪಸ್ವರಗಳ ಕೇಳಿ ಬರಬಹುದು. ಆದರೆ ವಿಕೆಟ್ ಕೀಪಿಂಗ್ ಕೌಶಲ್ಯದ ಬಗ್ಗೆ ಸಾಧ್ಯವೇ ಇಲ್ಲ. ಇದನ್ನು ಧೋನಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲೂ ಸಾಬೀತುಪಡಿಸಿದ್ದಾರೆ. ವಿಕೆಟ್‌ನ ಹಿಂದೆ ಧೋನಿ ಮತ್ತೆ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ 10 ರನ್‌ಗ ಅಂತರದಿಂದ ಸೋಲು ಕಂಡಿದೆ. ಬ್ಯಾಟಿಂಗ್‌ನಲ್ಲಿ ಧೋನಿ ನೀರಸ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಆದರೆ ಸಿಎಸ್‌ಕೆ ಫೀಲ್ಡಿಂಗ್ ಸಂದರ್ಭದಲ್ಲಿ ಧೋನಿ ವಿಕೆಟ್ ಹಿಂದೆ ಪಡೆದ ಅದ್ಭುತ ಕ್ಯಾಚ್ ಧೋನಿಯ ವಿಕೆಟ್ ಕೀಪಿಂಗ್ ಕೌಶಲ್ಯದ ಬಗ್ಗೆ ಮತ್ತೆ ಮಾತನಾಡುವಂತೆ ಮಾಡಿದೆ.
ಕೊಲ್ಕತಾ ನೈಟ್ ರೈಡರ್ಸ್ ವಿರುದ್ದದ ಪಂದ್ಯದಲ್ಲಿ ಧೋನಿ ನಾಲ್ಕು ಕ್ಯಾಚ್ ಹಾಗೂ ಒಂದು ರನ್‌ಔಟ್್ಗೆ ಕಾರಣರಾದರು. ಈ ಮೂಲಕ ದೊಡ್ಡ ಮೊತ್ತ ಗಳಿಸುವ ಸಾಧ್ಯತೆಯಿದ್ದ ಕೆಕೆಆರ್ ತಂಡವನ್ನು 167 ರನ್‌ಗಳಿಗೆ ಕಟ್ಟಿಹಾಕಲು ಕಾರಣರಾದರು. ಈ ಮೂಲಕ ವಿಕೆಟ್‌ನ ಹಿಂದೆ ತಾನಿನ್ನೂ ಬಲಿಷ್ಠ ಎಂಬುದನ್ನು ಧೋನಿ ಸಾಭೀತುಪಡಿಸಿದರು.
ಧೋನಿಯ ಮೊದಲ ಮೂರು ಕ್ಯಾಚ್‌ಗಳು ಸಾಮಾನ್ಯ ಕ್ಯಾಚ್‌ಗಳು ಆಗಿದ್ದವು. ಆದರೆ ಮಾಹಿ ಪಡೆದ ನಾಲ್ಕನೇ ಕ್ಯಾಚ್ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿತ್ತು. ಅನುಭವಿ ಬೌಲರ್ ಡ್ವೇಯ್ನ್ ಬ್ರಾವೋ ಎಸೆದ ಅಂತಿಮ ಓವರ್‌ನಲ್ಲಿ ಕೊಲ್ಕತಾ ವೇಗಿ ಶಿವಮ್ ಮಾವಿ ನೀಡಿದ ಕ್ಯಾಚನ್ನು ಅದ್ಭುತ ರೀತಿಯಲ್ಲಿ ಪಡೆಯುವ ಮೂಲಕ ಧೋನಿ ಗಮನ ಸೆಳೆದರು.
ಇನ್ನಿಂಗ್ಸ್‌ನ ಕೊನೆಯ ಓವರ್ ಆಗಿದ್ದ ಹಿನ್ನೆಲೆಯಲ್ಲಿ ರನ್‌ಗಾಗಿ ಓಡುವ ಸಾಧ್ಯತೆಯಿರುವ ಕಾರಣ ಧೋನಿ ಎಂದಿನಂತೆ ಬಲಗೈ ಗ್ಲೌಸ್ ಬಿಚ್ಚಿಟ್ಟು ಕೀಪಿಂಗ್‌ಗೆ ಸಿದ್ಧರಾಗಿದ್ದರು. ಬ್ರಾವೋ ಆಫ್ ಸ್ಟಂಪ್‌ನಿಂದ ಆಚೆಗೆ ಎಸೆದ ಎಸೆತವನ್ನು ತಳ್ಳುವ ಯತ್ನ ನಡೆಸಿದ ಶಿವಂ ಮಾವಿ ಬ್ಯಾಟನ್ನು ವಂಚಿಸಿದ ಚೆಂಡು ಬ್ಯಾಟ್‌ನ ಎಡ್ಜ್‌ಗೆ ಸವರಿ ಕೀಪರ್ ಬಳಿ ಧಾವಿಸಿತು. ಈ ಸಂದರ್ಭದಲ್ಲಿ ನೆಗೆದು ಕ್ಯಾಚ್ ಹಿಡಿಯುವ ಪ್ರಯತ್ನದಲ್ಲಿ ಧೋನಿ ಕೈಯಿಂದ ಚಿಮ್ಮಿದ ಚೆಂಡು ಮತ್ತಷ್ಟು ದೂರ ತಳ್ಳಲ್ಪಟ್ಟಿತು. ಈ ಸಂದರ್ಭದಲ್ಲಿ ಸಮಯ ಪ್ರಜ್ಞೆ ಮೆರೆದ ಧೋನಿ ಮತ್ತೊಂದು ಪ್ರಯತ್ನದಲ್ಲಿ ಹಾರಿ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು.
ಧೋನಿ ಇದಕ್ಕೂ ಮುನ್ನ ಆರಂಭಿಕ ಆಟಗಾರ ಶುಬ್ಮನ್ ಗಿಲ್, ಇಯಾನ್ ಮಾರ್ಗನ್ ಹಾಗೂ ಆಂಡ್ರೆ ರಸೆಲ್ ಕ್ಯಾಚ್ ಪಡೆದು ತಂಡಕ್ಕೆ ಬ್ರೇಕ್ ನೀಡುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಕೆಕೆಆರ್ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿಯೂ ಧೋನಿ ರನ್‌ಔಟ್‌ಗೆ ಕಾರಣರಾದರು. ಕ್ರೀಸ್‌ಗೆ ಆಗಷ್ಟೇ ಆಗಮಿಸಿದ್ದ ವರುಣ್ ಚಕ್ರವರ್ತಿ ಕೊನೆಯ ಎಸೆತದಲ್ಲಿ ಎರಡು ರನ್ ಕದಿಯುವ ಯತ್ನ ನಡೆಸಿದ್ದರು. ಆದರೆ ಈ ಸಂರ್ಭದಲ್ಲಿ ಅಲರ್ಟ್ ಆದ ಧೋನಿ ರನ್‌ಔಟ್ ಮಾಡುವಲ್ಲಿ ಸಫಲರಾದರು. ಈ ಮೂಲಕ ಕೆಕೆಆರ್ ಆಲೌಟ್ ಆಗಲು ಧೋನಿ ಕಾರಣರಾದರು.