Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಯಿಂಟ್ಸ್‌ ಟೇಬಲ್‌ನಲ್ಲಿ ತಳ ತಲುಪಿದ ರಾಜಸ್ಥಾನ್‌ ರಾಯಲ್ಸ್‌: ಪ್ಲೇ ಆಫ್ ಕನಸು ಭಗ್ನ

RR GONE

ಐಪಿಎಲ್ 13 ಆವೃತ್ತಿಯಲ್ಲಿ ಭಾರೀ ಏರಿಳಿತ ಕಂಡು ಕೊನೆಯಲ್ಲಿ ಬಲಿಷ್ಠ ತಂಡಗಳನ್ನೇ ಮಣಿಸಿ ಇನ್ನೇನು ಸ್ಥಿರವಾಗಿ ನಿಲ್ಲಬೇಕು ಎನ್ನುವಷ್ಟರಲ್ಲಿ ರಾಜಸ್ಥಾನ್ ರಾಯಲ್ಸ್‌ ಗೆಲ್ಲಲೇಬೇಕಾದ ಪಂದ್ಯ ಕೈ ಚೆಲ್ಲಿ ಟೂರ್ನಿಯಿಂದ ಹೊರಬಿದ್ದಿದೆ.

ದುಬೈನಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ದುಬಾರಿಯಾಗಿ, ಬ್ಯಾಟಿಂಗ್‌ನಲ್ಲಿ ಸಂಪೂರ್ಣ ಎಡವಿದ ಸ್ಟೀವನ್ ಸ್ಮಿತ್ ಬಳಗ 60ರನ್‌ಗಳ ಹೀನಾಯ ಸೋಲು ಕಾಣುವ ಮೂಲಕ ಪ್ಲೇ ಆಫ್ ತಲುಪುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

ಆಡಿರುವ 14 ಪಂದ್ಯಗಳಲ್ಲಿ ಆರು ಗೆಲುವು ಮತ್ತು ಎಂಟು ಪಂದ್ಯಗಳ ಸೋಲು ಕಂಡಿರುವ ರಾಜಸ್ಥಾನ್ ರಾಯಲ್ಸ್‌ , ಕಿಂಗ್ಸ್‌ ಇಲೆವೆನ್ ಪಂಜಾಬ್ , ಚೆನ್ನೈ ಸೂಪರ್‌ಕಿಂಗ್‌ನಷ್ಟೇ ಸಮನಾದ ಅಂಕ(12) ಹೊಂದಿದ್ದರೂ, ಕಳಪೆ ನೆಟ್‌ ರನ್‌ರೇಟ್(-0.569) ಪರಿಣಾಮ ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ತಂಡವಾಗಿ ತನ್ನ ಅಭಿಯಾನವನ್ನು ಮುಗಿಸಿದೆ. ಈ ಮೂಲಕ ಮಾಜಿ ಚಾಂಪಿಯನ್ ತಂಡವೊಂದು ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನ ತಲುಪಿ ಟೂರ್ನಿ ಮುಗಿಸಿದ್ದು ಇದೇ ಮೊದಲು.

ಸತತ ಮೂರು ಪಂದ್ಯ ಗೆಲುವು ಕಂಡ ಸಿಎಸ್‌ಕೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎಂಟನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಜಿಗಿದು ಟೂರ್ನಿಯಿಂದ ಹೊರಬಿದ್ದಿತು. ಇದರ ನಂತರ ಕಿಂಗ್ಸ್‌ ಇಲೆವೆನ್ ಪಂಜಾಬ್ ಬಳಿಕ, ಇದೀಗ ರಾಜಸ್ಥಾನ್ ರಾಯಲ್ಸ್‌ ಲೀಗ್‌ನಲ್ಲಿ ಹೋರಾಟ ಮುಗಿಸಿದ ಮೂರನೇ ತಂಡವಾಗಿದೆ.

ಈಗಾಗಲೇ ಮುಂಬೈ ಪ್ಲೇ ಆಫ್ ತಲುಪಿದ ಮೊದಲ ತಂಡವಾಗಿದ್ದು, ಉಳಿದ ಮೂರು ಸ್ಥಾನಗಳಿಗೆ ಆರ್‌ಸಿಬಿ, ಡೆಲ್ಲಿ, ಕೆಕೆಆರ್ ಹಾಗೂ ಹೈದ್ರಾಬಾದ್ ಪೈಪೋಟಿ ನಡೆಸುತ್ತಿವೆ.

Story first published: Monday, November 2, 2020, 9:58 [IST]
Other articles published on Nov 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+