Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೆನ್ನೈ ಸೂಪರ್ ಕಿಂಗ್ಸ್ ಪರ ಆಡೋದು ನನ್ನ ಅದೃಷ್ಟ: ಶೇನ್ ವಾಟ್ಸನ್

IPL 2020: Fortunate to play for CSK, says Shane Watson

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡೋದು ಅದೃಷ್ಟ ಎಂದು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಶೇನ್ ವಾಟ್ಸನ್ ಹೇಳಿದ್ದಾರೆ. ಎಂಎಸ್ ಧೋನಿ ಮುಂದಾಳತ್ವದ ಸಿಎಸ್‌ಕೆಯಲ್ಲಿ ಆಡೋದು ಒಂದು ಅದ್ಭುತ ಅನುಭವ. ಫ್ರಾಂಚೈಸಿ ಎಲ್ಲರನ್ನೂ ಬಹಳ ಚೆನ್ನಾಗಿ ನೋಡಿಕೊಳ್ಳುತ್ತದೆ ಎಂದು ವಾಟ್ಸನ್ ಅಭಿಪ್ರಾಯಿಸಿದ್ದಾರೆ.

2019ರ ಸೀಸನ್‌ನ ಆರಂಭದಲ್ಲಿ ತಾನು ಕಡಿಮೆ ರನ್‌ ಗಳಿಸಿದರೂ ಸಿಎಸ್‌ಕೆ ತನ್ನ ಬೆಂಬಲಕ್ಕೆ ನಿಂತಿತು ಎಂದು ಶೇನ್ ವಾಟ್ಸನ್ ಸ್ಮರಿಸಿಕೊಂಡಿದ್ದಾರೆ. ಕಳೆದ ಸೀಸನ್‌ನಲ್ಲಿ ವಾಟ್ಸನ್ 398 ರನ್ ಗಳಿಸಿದ್ದರು. ಆದರೆ ಟೂರ್ನಿ ಆರಂಭದಲ್ಲಿ ವಾಟ್ಸನ್ ನೀರಸ ಪ್ರದರ್ಶನ ನೀಡಿದ್ದರು. ಆರಂಭಿಕ 10 ಇನ್ನಿಂಗ್ಸ್‌ಗಳಲ್ಲಿ ವಾಟ್ಸನ್ ಗಮನಾರ್ಹ ಪ್ರದರ್ಶನ ನೀಡಿರಲಿಲ್ಲ.

ಹಿಂದಿನ ಸೀಸನ್‌ನಲ್ಲಿ ಟೂರ್ನಿಯ ಕೊನೇ ಕ್ಷಣದಲ್ಲಿ ಮಾತ್ರ ವಾಟ್ಸನ್ ಅದ್ಭುತ ಆಟ ನೀಡಿದ್ದರು. ಸನ್ ರೈಡರ್ಸ್ ಹೈದರಾಬಾದ್ ವಿರುದ್ಧ 53 ಎಸೆತಗಳಲ್ಲಿ 96 ರನ್ ಸಿಡಿಸಿದ್ದರು. ಅಲ್ಲದೆ ಕ್ವಾಲಿಫೈಯರ್ 2 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 32 ಎಸೆತಗಳಲ್ಲಿ ಅರ್ಧ ಶತಕ ಚಚ್ಚಿದ್ದರು. ಅಷ್ಟೇ ಅಲ್ಲ, ಮುಂಬೈ ವಿರುದ್ಧದ ಫೈನಲ್‌ನಲ್ಲೂ 59 ಎಸೆತಗಳಲ್ಲಿ 80 ರನ್ ಕೊಡುಗೆ ನೀಡಿದ್ದರು. ಆದರೆ ಸಿಎಸ್‌ಕೆ ಕೇವಲ 1 ರನ್‌ನಿಂದ ಸೋತು 4ನೇ ಟ್ರೋಫಿಯ ದಾಖಲೆಯನ್ನು ಕೈ ತಪ್ಪಿಸಿಕೊಂಡಿತ್ತು.

ಯೂಟ್ಯೂಬ್ ಸಂವಾದದಲ್ಲಿ ಮಾತನಾಡಿದ ವಾಟ್ಸನ್, 'ಬೇರೆ ಟೀಮಿನಲ್ಲಿದ್ದರೆ ನನ್ನ ನೀರಸ ಆಟಕ್ಕೆ ನನ್ನನ್ನು ತಂಡದಿಂದ ಕೈ ಬಿಡುತ್ತಿದ್ದರು. ಆದರೆ ಸಿಎಸ್‌ಕೆ ನನ್ನ ಬೆನ್ನು ತಟ್ಟಿತು. ಮುಂದೆ ಒಳ್ಳೆಯ ಇನ್ನಿಂಗ್ಸ್ ಕೊಡುತ್ತೇನೆ ಅಂತ ನನ್ನ ಮೇಲೆ ನಂಬಿಕೆಯಿಟ್ಟಿತು. ವಿಶ್ವಶ್ರೇಷ್ಠ ನಾಯಕ (ಧೋನಿ) ಮಾತ್ರ ಅಂಥ ಆತ್ಮವಿಶ್ವಾಸ ತೋರಬಲ್ಲ,' ಎಂದಿದ್ದಾರೆ.

Story first published: Thursday, September 10, 2020, 16:43 [IST]
Other articles published on Sep 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+