ಐಪಿಎಲ್‌ಗೂ ಮುನ್ನ ಅಭ್ಯಾಸ ಪಂದ್ಯಗಳ ನಡೆಸಲು ಫ್ರಾಂಚೈಸಿಗಳ ಒಲವು

ನವದೆಹಲಿ: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯಗಳು ನಡೆಯುವ ನಿರೀಕ್ಷೆಯಿದೆ. ಅಭ್ಯಾಸ ಪಂದ್ಯಗಳಿಗಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು ಅವಕಾಶ ಮಾಡಿಕೊಡುವುದನ್ನು ಹೆಚ್ಚಿನ ಫ್ರಾಂಚೈಸಿಗಳು ಬಯಸಿವೆ ಎಂದು ತಿಳಿದು ಬಂದಿದೆ.
ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ 2020ರ ಐಪಿಎಲ್ ಆರಂಭಗೊಳ್ಳಲಿದೆ. ಕೊರೊನಾ ವೈರಸ್ ವೇಳೆ ದೇಶಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟಿಗರು ಸುಮಾರು 5 ತಿಂಗಳ ಕಾಲ ಅನಿವಾರ್ಯ ಬಿಡುವಿನಲ್ಲಿದ್ದರಿಂದ ಅಭ್ಯಾಸ ಪಂದ್ಯದ ಅಗತ್ಯವಿದೆ ಎಂದು ಹೆಚ್ಚಿನ ಫ್ರಾಂಚೈಸಿಗಳು ಭಾವಿಸಿವೆ.
ಕೊರೊನಾ ಲಾಕ್‌ಡೌನ್ ವೇಳೆ ಯಾವುದೇ ಕ್ರಿಕೆಟರ್‌ಗಳಿಗೆ ಹೊರಾಂಗಣ ಅಭ್ಯಾಸ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಆಕರ್ಷಣೀಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಕೆಲವಾದರೂ ಅಭ್ಯಾಸ ಪಂದ್ಯಗಳನ್ನು ನಡೆಸಿದರೆ ಒಳ್ಳೆಯದು ಎಂದು ಫ್ರಾಂಚೈಸಿಗಳು ಅಭಿಪ್ರಾಯಿಸಿವೆ.
ಐಪಿಎಲ್ ಅಧಿಕೃತ ಪ್ರಸಾರಕ ಸ್ಟಾರ್ ಇಂಡಿಯಾಕ್ಕೂ ಐಪಿಎಲ್ ಅಭ್ಯಾಸ ಪಂದ್ಯಗಳ ಯೋಚನೆ ಇಷ್ಟವಾಗಿದೆ. ಕೊರೊನಾ ಬಳಿಕ ನಡೆಯುತ್ತಿರುವ ಭಾರತದ ಮೊದಲ ಟೂರ್ನಿ ಇದಾಗಿರುವುದರಿಂದ ಟೂರ್ನಿಯನ್ನು ಇನ್ನಷ್ಟು ಆಕರ್ಷಣೀಯವಾಗಿಸಲು ಅಭ್ಯಾಸ ಪಂದ್ಯಗಳು ಸಹಕಾರಿಯಾಗಲಿವೆ ಎಂದು ಪ್ರಸಾರಕ ಕೂಡ ಯೋಚಿಸಿದೆ ಎನ್ನಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications