ಈ ಐಪಿಎಲ್ ಸೀಸನ್‌ನ ನಿರೂಪಕರ ಸಂಪೂರ್ಣ ಪಟ್ಟಿ, ಮಯಾಂತಿ ಇಲ್ಲ!

ಬೆಂಗಳೂರು: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಲ್ಲಿ ನಿರೂಪಕರಾಗಿ ಕಾರ್ಯ ನಿರ್ವಹಿಸಲಿರುವ ನಿರೂಪಕರ ಸಂಪೂರ್ಣ ಪಟ್ಟಿ ಪ್ರಕಟಗೊಂಡಿದೆ. ಐಪಿಎಲ್ ಅಧಿಕೃತ ಪ್ರಸಾರಕ ಸ್ಟಾರ್‌ಸ್ಪೋರ್ಟ್ಸ್ ಪ್ರಕಟಿಸಿರುವ ಈ ಪಟ್ಟಿಯಲ್ಲಿ ಕನ್ನಡತಿ, ಬೆಡಗಿ ಮಯಾಂತಿ ಲ್ಯಾಂಗರ್ ಹೆಸರು ಇಲ್ಲ. ಭಾರತದ ಮಾಜಿ ಆಟಗಾರ ಸ್ಟುವರ್ಟ್ ಬಿನ್ನಿ ಪತ್ನಿ ಮಯಾಂತಿ ಪ್ರತೀ ಐಪಿಎಲ್ ವೇಳೆಯೂ ನಿರೂಪಣೆಗಾಗಿ ಗಮನ ಸೆಳೆಯುತ್ತಿದ್ದರು.
ಐಪಿಎಲ್ ಅನೇಕ ಸೀಸನ್‌ಗಳಲ್ಲಿ ಮಯಾಂತಿ ಲ್ಯಾಂಗರ್ ನಿರೂಪಣೆಯ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ ಈ ಬಾರಿ ಮಯಾಂತಿ ಹೆಸರೇ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಐಪಿಎಲ್ ಸೀಸನ್‌ನಲ್ಲಿ ಪ್ರಸಾರಕದ ನಿರೂಪಣೆ ಜವಾಬ್ದಾರಿ ನಿರ್ವಹಿಸಲಿರುವ ನಿರೂಪಕರ ಮಾಹಿತಿ ಕೆಳಗಿದೆ.

ನೆರೋಲಿ ಮೆಡೋಸ್
* ನೆರೋಲಿ ಮೆಡೋಸ್, ಆಸ್ಟ್ರೇಲಿಯಾದ ದೂರದರ್ಶನ ನಿರೂಪಕಿ, ಕ್ರೀಡಾಪತ್ರಕರ್ತೆ, ಕಾಮೆಂಟೇಟರ್
* ಜತಿನ್ ಸಾಪ್ರು, ಭಾರತದ ದೂರದರ್ಶನ ನಿರೂಪಕ, ಕ್ರೀಡಾ ಪತ್ರಕರ್ತ, ಕಾಮೆಂಟೇಟರ್
* ಸಂಜನ ಗಣೇಶನ್, ಭಾರತದ ದೂರದರ್ಶನ ನಿರೂಪಕಿ, 2019ರ ಕ್ರಿಕೆಟ್ ವಿಶ್ವಕಪ್‌ಗೆ ನಿರೂಪಣೆ ನೀಡಿದ್ದರು.

ನಶ್‌ಪ್ರೀತ್ ಕೌರ್
* ಸುರೆನ್ ಸುಂದರಮ್, ಭಾರತದ ಕ್ರೀಡಾ ನಿರೂಪಕ, ಕ್ರಿಕೆಟ್ ನಿರೂಪಣೆ ಹೆಚ್ಚಾಗಿ ಮಾಡುತ್ತಾರೆ.
* ಸುಹೈಲ್ ಚಂಧೋಕ್, ಭಾರತದ ದೂರದರ್ಶನ ನಿರೂಪಕ, ಕಾಮೆಂಟೇಟರ್
* ನಶ್‌ಪ್ರೀತ್ ಕೌರ್, ಭಾರತದ ನಿರೂಪಕಿ

ತಾನ್ಯ ಪುರೋಹಿತ್
* ತಾನ್ಯ ಪುರೋಹಿತ್, ಭಾರತದ ದೂರದರ್ಶನ ನಿರೂಪಕಿ, ಬಾಲಿವುಡ್ ಸಿನಿಮಾ 'ಎನ್‌ಎಚ್-10'ನಲ್ಲಿ ನಟಿಸಿದ್ದರು.
* ಅನಂತ್ ತ್ಯಾಗಿ, ಭಾರತದ ದೂರದರ್ಶನ ನಿರೂಪಕ, ಮುಖ್ಯವಾಗಿ ಕ್ರಿಕೆಟ್ ನಿರೂಪಣೆ ಮಾಡುತ್ತಾರೆ.
* ಧೀರಜ್ ಜುನೇಜ, ಭಾರತದ ನಿರೂಪಕ, ಝೀ ಚಾನೆಲ್‌ನಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ, ಸ್ಟಾರ್ ಸ್ಪೋರ್ಟ್ಸ್ ಜೊತೆಗಿದ್ದಾರೆ.

ಕಿರಾ ನಾರಾಯಣ್
* ಕಿರಾ ನಾರಾಯಣನ್, ಭಾರತದ ಚಿತ್ರನಟಿ, ಸಂಗೀತಗಾರ್ತಿ, ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. 26ರ ಹರೆಯದ ಕಿರಾ ಈ ಬಾರಿ ಐಪಿಎಲ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅಂದ್ಹಾಗೆ ಕನ್ನಡತಿ ಮಯಾಂತಿ ಜಾಗ ಆವರಿಕೊಂಡಿರುವ ನಿರೂಪಕಿ ಇವರೇ ಎನ್ನಲಾಗುತ್ತಿದೆ. ಮಯಾಂತಿ ಬದಲಿಗೆ ಆಸ್ಟ್ರೇಲಿಯಾದ ನೆರೋಲಿ ಮೆಡೋಸ್ ಬಂದಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications