Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2020: ಹರಾಜಿನ ಬಳಿಕ ಎಲ್ಲಾ 8 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ

IPL 2020: Full squads of 8 teams after Player Auction

ಕೋಲ್ಕತ್ತಾ, ಡಿಸೆಂಬರ್ 20: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿಗಾಗಿ ಡಿಸೆಂಬರ್ 19ರಂದು ಆಟಗಾರರ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಟೂರ್ನಿಯಲ್ಲಿ ಕಾದಾಡಲಿರುವ 8 ತಂಡಗಳು ತಮ್ಮ ತಮ್ಮ ಬಣವನ್ನು ಬಲಪಡಿಸಿಕೊಂಡಿವೆ. ಈ ಬಾರಿಯ ಐಪಿಎಲ್ ಇನ್ನೂ ಜಿದ್ದಾಜಿದ್ದಿಯೆನಿಸಿಕೊಳ್ಳುವುದರಲ್ಲಿದೆ.

ಮುಕ್ತಾಯಗೊಂಡ ಆಟಗಾರರ ಹರಾಜಿನಲ್ಲಿ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಅತ್ಯಧಿಕ ಮೊತ್ತಕ್ಕೆ (15.50 ಕೋ.ರೂ) ಕೋಲ್ಕತ್ತಾ ನೈಟ್ ರೈಡರ್ಸ್‌ ಪಾಲಾಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕಮಿನ್ಸ್ ಮಾರಾಟವಾಗಿರುವ ಮೊತ್ತ ಐಪಿಎಲ್ ಇತಿಹಾಸದಲ್ಲೇ 2ನೇ ಅತ್ಯಧಿಕ ಮೊತ್ತವಾಗಿ ಗುರುತಿಸಿಕೊಂಡಿದೆ.

ಕಮಿನ್ಸ್ ಬಿಟ್ಟರೆ ಗ್ಲೆನ್ ಮ್ಯಾಕ್ಸ್‌ವೆಲ್ (10.75 ಕೋ.ರೂ.-ಕೆXIಪಿ), ಕ್ರಿಸ್ ಮೋರಿಸ್ (10 ಕೋ.ರೂ-ಆರ್‌ಸಿಬಿ) ಈ ಬಾರಿ 10 ಕೋ.ರೂ.ಗೂ ಹೆಚ್ಚಿನ ಬೆಲೆಗೆ ಮಾರಾಟವಾಗಿ ಗಮನ ಸೆಳೆದ ಆಟಗಾರರು. ವಿಂಡೀಸ್ ವೇಗಿ ಶೆಲ್ಡನ್ ಕಾಟ್ರೆಲ್ 8.50 ಕೋ.ರೂ.ಗೆ ಕೆXIಪಿ ಪಾಲಾಗಿದ್ದಾರೆ.

ಇನ್ನು ದಕ್ಷಿಣ ಆಫ್ರಿಕಾ ಮಾರಕ ವೇಗಿ ಡೇಲ್ ಸ್ಟೇನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ 2 ಕೋ.ರೂ.ಗೆ ಖರೀದಿಸಿದೆ. ಉಳಿದಂತೆ ಎಲ್ಲಾ ತಂಡಗಳ ಸಂಪೂರ್ಣ ತಂಡ ಕೆಳಗಿದೆ.

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ)

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ)

ಉಳಿಸಿಕೊಂಡ ಆಟಗಾರರು: ಶೇನ್ ವ್ಯಾಟ್ಸನ್, ಅಂಬಾಟಿ ರಾಯುಡು, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಕೇದಾರ್ ಜಾಧವ್, ಎನ್ ಜಗದೀಸನ್, ಎಂ ವಿಜಯ್, ರಿತುರಾಜ್ ಗಾಯಕವಾಡ್, ಎಂ.ಎಸ್. ಇಮ್ರಾನ್ ತಾಹಿರ್, ಕರಣ್ ಶರ್ಮಾ, ಲುಂಗಿ ಎನ್‌ಗಿಡಿ, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಕೆ.ಎಂ. ಆಸಿಫ್.
ಹರಾಜಿನಲ್ಲಿ ಖರೀದಿಸಿದ ಆಟಗಾರರು: ಪಿಯೂಷ್ ಚಾವ್ಲಾ (6.75 ಕೋಟಿ ರೂ.), ಸ್ಯಾಮ್ ಕರ್ರನ್ (5.5 ಕೋಟಿ ರೂ.), ಜೋಶ್ ಹ್ಯಾಝಲ್‌ವುಡ್ (2 ಕೋಟಿ ರೂ.), ಆರ್ ಸಾಯಿ ಕಿಶೋರ್ (20 ಲಕ್ಷ ರೂ.).

ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ)

ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ)

ಉಳಿಸಿಕೊಂಡ ಆಟಗಾರರು: ಶಿಖರ್ ಧವನ್, ಅಜಿಂಕ್ಯ ರಹಾನೆ, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆ), ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ಆರ್ ಅಶ್ವಿನ್, ಅಮಿತ್ ಮಿಶ್ರಾ, ಸಂದೀಪ್ ಲಮಿಚಾನೆ, ಕಗಿಸೊ ಕಾಗಿಸೊ ರಬಾಡ, ಇಶಾಂತ್ ಶರ್ಮಾ, ಕೀಮೋ ಪಾಲ್, ಆವೇಶ್ ಖಾನ್.
ಹರಾಜಿನಲ್ಲಿ ಖರೀದಿಸಿದ ಆಟಗಾರರು: ಶಿಮ್ರಾನ್ ಹೆಟ್ಮಾಯೆರ್ (7.75 ಕೋಟಿ ರೂ.), ಮಾರ್ಕಸ್ ಸ್ಟೋಯ್ನಿಸ್ (1 ಕೋಟಿ ರೂ.), ಅಲೆಕ್ಸ್ ಕ್ಯಾರಿ (2.4 ಕೋಟಿ ರೂ.), ಜೇಸನ್ ರಾಯ್ (1.5 ಕೋಟಿ ರೂ.), ಕ್ರಿಸ್ ವೋಕ್ಸ್ (1.5 ಕೋಟಿ ರೂ.), ಮೋಹಿತ್ ಶರ್ಮಾ (50 ರೂ. ಲಕ್ಷ), ತುಷಾರ್ ದೇಶಪಾಂಡೆ (20 ಲಕ್ಷ ರೂ.), ಲಲಿತ್ ಯಾದವ್ (20 ಲಕ್ಷ ರೂ.).

ಕಿಂಗ್ಸ್ ಇಲೆವೆನ್ ಪಂಜಾಬ್ (ಕೆXIಪಿ)

ಕಿಂಗ್ಸ್ ಇಲೆವೆನ್ ಪಂಜಾಬ್ (ಕೆXIಪಿ)

ಉಳಿಸಿಕೊಂಡ ಆಟಗಾರರು: ಕೆ.ಎಲ್. ರಾಹುಲ್ (ವಿಕೆ), ಕ್ರಿಸ್ ಗೇಲ್, ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್, ಮಂದೀಪ್ ಸಿಂಗ್, ನಿಕೋಲಸ್ ಪೂರನ್ (ವಿಕೆ), ಸರ್ಫರಾಜ್ ಖಾನ್, ಮುರುಗನ್ ಅಶ್ವಿನ್, ಮುಜೀಬ್-ಉರ್-ರಹಮಾನ್, ಕೆ. ಗೌತಮ್, ಜೆ. ಸುಚಿತ್, ಹರ್ಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ಹರ್ದಸ್ ವಿಲ್ಜೋಯೆನ್, ಅರ್ಶ್‌ದೀಪ್ ಸಿಂಗ್, ದರ್ಶನ್ ನಾಲ್ಕಂಡೆ.
ಹರಾಜಿನಲ್ಲಿ ಖರೀದಿಸಿದ ಆಟಗಾರರು: ಗ್ಲೆನ್ ಮ್ಯಾಕ್ಸ್‌ವೆಲ್ (ರೂ. 10.75 ಕೋಟಿ), ಶೆಲ್ಡನ್ ಕಾಟ್ರೆಲ್ (8.5 ಕೋಟಿ ರೂ.), ರವಿ ಬಿಷ್ಣೋಯ್ (2 ಕೋಟಿ ರೂ.), ಪ್ರಭಮಸಿಮ್ರಾನ್ ಸಿಂಗ್ (55 ಲಕ್ಷ ರೂ.), ದೀಪಕ್ ಹೂಡಾ (50 ಲಕ್ಷ ರೂ.), ಜೇಮ್ಸ್ ನೀಶಮ್ (50 ರೂ. ಲಕ್ಷ), ಇಶಾನ್ ಪೊರೆಲ್ (20 ಲಕ್ಷ ರೂ.), ಕ್ರಿಸ್ ಜೋರ್ಡಾನ್ (75 ಲಕ್ಷ ರೂ.), ತಾಜಿಂದರ್ ಧಿಲ್ಲಾನ್ (20 ಲಕ್ಷ ರೂ.)

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್)

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್)

ಉಳಿಸಿಕೊಂಡ ಆಟಗಾರರು: ಶುಬ್‌ಮಾನ್ ಗಿಲ್, ಸಿದ್ಧೇಶ್ ಲಾಡ್, ಆಂಡ್ರೆ ರಸ್ಸೆಲ್, ದಿನೇಶ್ ಕಾರ್ತಿಕ್ (ವಿಕೆ), ರಿಂಕು ಸಿಂಗ್, ನಿತೀಶ್ ರಾಣಾ, ಸುನಿಲ್ ನರೀನ್, ಕುಲದೀಪ್ ಯಾದವ್, ಹ್ಯಾರಿ ಗರ್ನಿ, ಲಾಕಿ ಫರ್ಗುಸನ್, ಕಮಲೇಶ್ ನಾಗರ್ಕೋಟಿ, ಶಿವಂ ಮಾವಿ, ಪ್ರಸಿದ್ ಕೃಷ್ಣ.
ಹರಾಜಿನಲ್ಲಿ ಖರೀದಿಸಿದ ಆಟಗಾರರು: ಪ್ಯಾಟ್ ಕಮ್ಮಿನ್ಸ್ (15.5 ಕೋಟಿ ರೂ.), ಇಯಾನ್ ಮೋರ್ಗಾನ್ (5.25 ಕೋಟಿ ರೂ.), ವರುಣ್ ಚಕ್ರವರ್ತಿ (4 ಕೋಟಿ ರೂ.), ಟಾಮ್ ಬ್ಯಾಂಟನ್ (1 ಕೋಟಿ ರೂ.), ರಾಹುಲ್ ತ್ರಿಪಾಠಿ (60 ಲಕ್ಷ ರೂ.), ಪ್ರವೀಣ್ ತಾಂಬೆ (20 ರೂ. ಲಕ್ಷ), ಎಂ ಸಿದ್ಧಾರ್ಥ್ (20 ಲಕ್ಷ ರೂ.), ಕ್ರಿಸ್ ಗ್ರೀನ್ (20 ಲಕ್ಷ ರೂ.), ನಿಖಿಲ್ ನಾಯಕ್ (20 ಲಕ್ಷ ರೂ.).

ಮುಂಬೈ ಇಂಡಿಯನ್ಸ್ (ಎಂಐ)

ಮುಂಬೈ ಇಂಡಿಯನ್ಸ್ (ಎಂಐ)

ಉಳಿಸಿಕೊಂಡ ಆಟಗಾರರು: ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಕ್ವಿಂಟನ್ ಡಿ ಕಾಕ್ (ವಿಕೆ), ಆದಿತ್ಯ ತಾರೆ (ವಿಕೆ), ಅನ್ಮೋಲ್‌ಪ್ರೀತ್ ಸಿಂಗ್, ಕೀರನ್ ಪೊಲಾರ್ಡ್, ಇಶಾನ್ ಕಿಶನ್ (ವಿಕೆ), ಶೆರ್ಫೇನ್ ರುದರ್‌ಫೋರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ರಾಹುಲ್ ಚಹರ್, ಜಯಂತ್ ರಾಯ್, ಜಸ್‌ಪ್ರೀತ್ ಬುಮ್ರಾ, ಲಸಿತ್ ಮಾಲಿಂಗ, ಟ್ರೆಂಟ್ ಬೌಲ್ಟ್, ಧವಲ್ ಕುಲಕರ್ಣಿ, ಮಿಚೆಲ್ ಮೆಕ್ಲೆನಾಗನ್.
ಹರಾಜಿನಲ್ಲಿ ಖರೀದಿಸಿದ ಆಟಗಾರರು: ನಾಥನ್ ಕೌಲ್ಟರ್-ನೈಲ್ (8 ಕೋಟಿ ರೂ.), ಕ್ರಿಸ್ ಲಿನ್ (2 ಕೋಟಿ ರೂ.), ಸೌರಭ್ ತಿವಾರಿ (50 ಲಕ್ಷ ರೂ.), ಮೊಹ್ಸಿನ್ ಖಾನ್ (20 ಲಕ್ಷ ರೂ.), ದಿಗ್ವಿಜಯ್ ದೇಶ್ಮುಖ್ (20 ಲಕ್ಷ ರೂ.), ಪ್ರಿನ್ಸ್ ಬಲ್ವಂತ್ ರೈ ಸಿಂಗ್ (20 ಲಕ್ಷ ರೂ.)

ರಾಜಸ್ಥಾನ್ ರಾಯಲ್ಸ್ (ಆರ್‌ಆರ್)

ರಾಜಸ್ಥಾನ್ ರಾಯಲ್ಸ್ (ಆರ್‌ಆರ್)

ಉಳಿಸಿಕೊಂಡ ಆಟಗಾರರು: ಜೋಸ್ ಬಟ್ಲರ್ (ವಿಕೆ), ಸ್ಟೀವ್ ಸ್ಮಿತ್, ಸಂಜು ಸ್ಯಾಮ್ಸನ್ (ವಿಕೆ), ಮನನ್ ವೊಹ್ರಾ, ರಿಯಾನ್ ಪರಾಗ್, ಬೆನ್ ಸ್ಟೋಕ್ಸ್, ಮಹಿಪಾಲ್ ಲೊಮರ್, ಶಶಾಂಕ್ ಸಿಂಗ್, ಶ್ರೇಯಾಸ್ ಗೋಪಾಲ್, ರಾಹುಲ್ ತೆವಾಟಿಯಾ, ಮಾಯಾಂಕ್ ಮಾರ್ಕಂಡೆ, ಜೋಫ್ರಾ ಆರ್ಚರ್, ಅಂಕಿತ್ ರಜ್‌ಪೂತ್, ವರುಣ್ ಆರನ್
ಹರಾಜಿನಲ್ಲಿ ಖರೀದಿಸಿದ ಆಟಗಾರರು: ರಾಬಿನ್ ಉತ್ತಪ್ಪ (3 ಕೋಟಿ ರೂ.), ಜಯದೇವ್ ಉನಾದ್ಕಟ್ (3 ಕೋಟಿ ರೂ.), ಯಶಸ್ವಿ ಜೈಸ್ವಾಲ್ (2.4 ಕೋಟಿ ರೂ.), ಕಾರ್ತಿಕ್ ತ್ಯಾಗಿ (1.3 ಕೋಟಿ ರೂ.), ಆಂಡ್ರ್ಯೂ ಟೈ (1 ಕೋಟಿ ರೂ.), ಟಾಮ್ ಕರ್ರನ್ (1 ರೂ. ಕೋಟಿ), ಅನುಜ್ ರಾವತ್ (80 ಲಕ್ಷ ರೂ.), ಡೇವಿಡ್ ಮಿಲ್ಲರ್ (75 ಲಕ್ಷ ರೂ.), ಓಶೇನ್ ಥಾಮಸ್ (50 ಲಕ್ಷ ರೂ.), ಆಕಾಶ್ ಸಿಂಗ್ (20 ಲಕ್ಷ ರೂ.), ಅನಿರುದ್ಧ ಜೋಶಿ (20 ಲಕ್ಷ ರೂ.)

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)

ಉಳಿಸಿಕೊಂಡ ಆಟಗಾರರು: ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಪಾರ್ಥಿವ್ ಪಟೇಲ್ (ವಿಕೆ), ಗುರ್ಕೀರತ್ ಸಿಂಗ್ ಮನ್, ಮೊಯೀನ್ ಅಲಿ, ಶಿವಮ್ ದೂಬೆ, ಯುಜ್ವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಪವನ್ ನೇಗಿ, ಉಮೇಶ್ ಯಾದವ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್.
ಹರಾಜಿನಲ್ಲಿ ಖರೀದಿಸಿದ ಆಟಗಾರರು: ಕ್ರಿಸ್ ಮೋರಿಸ್ (10 ಕೋಟಿ ರೂ.), ಆ್ಯರನ್ ಫಿಂಚ್ (4.4 ಕೋಟಿ ರೂ.), ಡೇಲ್ ಸ್ಟೇನ್ (2 ಕೋಟಿ ರೂ.), ಕೇನ್ ರಿಚರ್ಡ್ಸನ್ (1.5 ಕೋಟಿ ರೂ.), ಇಸುರು ಉದಾನಾ (50 ರೂ. ಲಕ್ಷ), ಜೋಶುವಾ ಫಿಲಿಪ್ (20 ಲಕ್ಷ ರೂ.), ಪವನ್ ದೇಶಪಾಂಡೆ (20 ಲಕ್ಷ ರೂ.).

ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್ಎಚ್)

ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್ಎಚ್)

ಉಳಿಸಿಕೊಂಡ ಆಟಗಾರರು: ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಜಾನಿ ಬೈರ್‌ಸ್ಟೋವ್ (ವಿಕೆ), ಮನೀಶ್ ಪಾಂಡೆ, ಶ್ರೀವತ್ಸ್ ಗೋಸ್ವಾಮಿ (ವಿಕೆ), ವೃದ್ಧಿಮಾನ್ ಸಹಾ (ವಿಕೆ), ವಿಜಯ್ ಶಂಕರ್, ಮೊಹಮ್ಮದ್ ನಬಿ, ಅಭಿಷೇಕ್ ಶರ್ಮಾ, ರಶೀದ್ ಖಾನ್, ಶಹಬಾಜ್ ನದೀಮ್, ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ, ಬೆಸಿಲ್ ಥಂಪಿ, ಟಿ.ನಟರಾಜನ್, ಬಿಲ್ಲಿ ಸ್ಟಾನ್ಲೇಕ್.
ಹರಾಜಿನಲ್ಲಿ ಖರೀದಿಸಿದ ಆಟಗಾರರು: ಮಿಚೆಲ್ ಮಾರ್ಷ್ (2 ಕೋಟಿ ರೂ.), ಪ್ರಿಯಮ್ ಗರ್ಗ್ (1.9 ಕೋಟಿ ರೂ.), ವಿರಾಟ್ ಸಿಂಗ್ (1.9 ಕೋಟಿ ರೂ.), ಫ್ಯಾಬಿಯನ್ ಅಲೆನ್ (50 ಲಕ್ಷ ರೂ.), ಸಂದೀಪ್ ಬವನಾಕಾ (20 ಲಕ್ಷ ರೂ.), ಅಬ್ದುಲ್ ಸಮದ್ (20 ರೂ. ಲಕ್ಷ), ಸಂಜಯ್ ಯಾದವ್ (20 ಲಕ್ಷ ರೂ.).

Story first published: Sunday, May 3, 2020, 11:01 [IST]
Other articles published on May 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+