ಐಪಿಎಲ್‌ನಲ್ಲಿ ಕ್ವಿಂಟನ್ ಡಿ ಕಾಕ್ ಬಾರಿಸಿರುವ ಅತ್ಯಧಿಕ ರನ್ ದಾಖಲೆಗಳು

ಅಬುಧಾಬಿ: ಮುಂಬೈ ಇಂಡಿಯನ್ಸ್ ಆರಂಭಿಕ ಬ್ಯಾಟ್ಸ್‌ಮನ್, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಕ್ವಿಂಟನ್ ಡಿ ಕಾಕ್ ಅವರ ಆಕರ್ಷಕ ಬ್ಯಾಟಿಂಗ್ ಕಾಣಸಿಕ್ಕಿದೆ. ಶುಕ್ರವಾರ (ಅಕ್ಟೋಬರ್ 16) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 32ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡಿ ಕಾಕ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 9 ಫೋರ್ಸ್, 3 ಸಿಕ್ಸರ್‌ಗಳೊಂದಿಗೆ 78 ರನ್ ಕೊಡುಗೆ ನೀಡಿದ ಡಿ ಕಾಕ್, ಎಂಐಗೆ ಬಲ ತುಂಬಿದ್ದಾರೆ.
ಡಿ ಕಾಕ್ ಅವರ ಬ್ಯಾಟಿಂಗ್ ಬಲ ಬೆಂಬದೊಂದಿಗೆ ಕೆಕೆಆರ್ ವಿರುದ್ಧದ ಈ ಪಂದ್ಯವನ್ನು ಮುಂಬೈ ಇಂಡಿಯನ್ಸ್ ತಂಡ ಸುಲಭ 8 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ ಕ್ವಿಂಟನ ಡಿ ಕಾಕ್ ಐಪಿಎಲ್‌ನಲ್ಲಿ ಬಾರಿಸಿದ ಅತ್ಯಧಿಕ ರನ್ ಆಗಿ ಕೋಲ್ಕತ್ತಾ ಎದುರು ಬಾರಿಸಿರುವ ಅಜೇಯ 78 ರನ್ ಗುರುತಿಸಿಕೊಂಡಿದೆ.
ಐಪಿಎಲ್‌ನಲ್ಲಿ ಕ್ವಿಂಟನ್ ಡಿ ಕಾಕ್ ಬಾರಿಸಿರುವ ವೈಯಕ್ತಿಕ ಅತ್ಯಧಿಕ ರನ್‌ಗಳ ಕಿರು ಮಾಹಿತಿ ಕೆಳಗಿದೆ.

ಕೆಕೆಆರ್ ಸಾಧಾರಣ ಮೊತ್ತ
ಬ್ಯಾಟಿಂಗ್ಆಯ್ದುಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ಆ್ಯಂಡ್ರೆ ರಸೆಲ್ 12, ಶುಬ್‌ಮನ್ ಗಿಲ್ 21, ಇಯಾನ್ ಮಾರ್ಗನ್ 39, ಪ್ಯಾಟ್ ಕಮಿನ್ಸ್ 53 (36 ಎಸೆತ) ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು ಕೇವಲ 148 ರನ್ ಗಳಿಸಿತು.

ರೋಹಿತ್, ಡಿ ಕಾಕ್ ಆಕರ್ಷಕ ಬ್ಯಾಟಿಂಗ್
ಗುರಿ ಬೆನ್ನಟ್ಟಿದ ಮುಂಬೈಗೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕ್ವಿಂಟನ್ ಡಿ ಕಾಕ್ ಮತ್ತು ರೋಹಿತ್ ಶರ್ಮಾ ಉತ್ತಮ ಜೊತೆಯಾಟ ನೀಡಿದರು. ರೋಹಿತ್ 35, ಡಿ ಕಾಕ್ 78 (44 ಎಸೆತ), ಸೂರ್ಯಕುಮಾರ್ ಯಾದವ್ 10, ಹಾರ್ದಿಕ್ ಪಾಂಡ್ಯ 21 ರನ್ ಕೊಡುಗೆಯೊಂದಿಗೆ 16.5ನೇ ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 149 ರನ್ ಬಾರಿಸಿತು.

ವೈಯಕ್ತಿಕ ಅತ್ಯಧಿಕ ರನ್ ದಾಖಲೆಗಳು
* 108 ಡೆಲ್ಲಿ ಡೇರ್‌ಡೆವಿಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಬೆಂಗಳೂರು, 2016
* 81 ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್, ಮುಂಬೈ, 2019
* 78 * ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ಅಬುಧಾಬಿ, 2020

ಐಪಿಎಲ್ ಅಂಕಿ-ಅಂಶಗಳು
58 ಐಪಿಎಲ್ ಪಂದ್ಯಗಳನ್ನಾಡಿರುವ ಕ್ವಿಂಟನ್ ಡಿ ಕಾಕ್ 31.36ರ ಸರಾಸರಿಯಲ್ಲಿ, 134.14 ಸ್ಟ್ರೈಕ್ ರೇಟ್‌ನಲ್ಲಿ 1725 ರನ್ ಬಾರಿಸಿದ್ದಾರೆ. 1 ಶತಕ, 13 ಅರ್ಧ ಶತಕಗಳ ದಾಖಲೆಯೂ ಡಿ ಕಾಕ್ ಹೆಸರಿನಲ್ಲಿದೆ. ಐಪಿಎಲ್‌ನಲ್ಲಿ ಡಿ ಕಾಕ್ 181 ಫೋರ್ಸ್, 65 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications