ನಾನು ಮುಟ್ಟಿದ್ದೆಲ್ಲವನ್ನೂ ಚಿನ್ನವಾಗಿ ಪರಿವರ್ತಿಸಬಲ್ಲೆ: ಶಿಖರ್ ಧವನ್

ದುಬೈ: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಶಿಖರ್ ಧವನ್ ಆರಂಭಿಸಿದ್ದು ಕಳಪೆ ಫಾರ್ಮ್‌ನೊಂದಿಗೆ. ಆದರೆ ಈಗ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಬ್ಯಾಟ್ಸ್‌ಮನ್ ಧವನ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈ ಐಪಿಎಲ್‌ನಲ್ಲಿ ಬ್ಯಾಕ್ ಟು ಬ್ಯಾಟ್ ಶತಕ ಕೂಡ ಬಾರಿಸಿದ್ದಾರೆ.
2020ರ ಐಪಿಎಲ್ ನಲ್ಲಿ ಅತ್ಯಧಿಕ ರನ್ ಬಾರಿಸಿದವರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಶಿಖರ್ ಧವನ್ 10 ಪಂದ್ಯಗಳಲ್ಲಿ 465 ರನ್ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ಕಿಂಗ್ಸ್ 11 ಪಂಜಾಬ್‌ನ ಕೆಎಲ್ ರಾಹುಲ್ ಮೊದಲ ಸ್ಥಾನದಲ್ಲಿದ್ದಾರೆ. ತೃತೀಯ ಸ್ಥಾನದಲ್ಲಿ ಪಂಜಾಬ್‌ನ ಮಯಾಂಕ್ ಅಗರ್ವಾಲ್ ಇದ್ದಾರೆ.
'ನಾನು ಖುಷಿಯಾಗಿ ಇರಲು ಬಯಸುತ್ತೇನೆ. ನಾನು ಒತ್ತಡ ತೆಗೆದುಕೊಳ್ಳಲು ಬಯಸಲಾರೆ. ಜನ ನನ್ನ ಬಗ್ಗೆ ಏನು ಹೇಳುತ್ತಾರೋ ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಎರಡನೆಯದಾಗಿ ಆಡುವುದು ನನಗಿಷ್ಟ. ಅದು ನನಗೆ ಖುಷಿ ನೀಡುತ್ತದೆ,' ಧವನ್ ಹೇಳಿದ್ದಾರೆ.
'ಫಿಟ್ ಆಗಿರಲು ನಾನೆಷ್ಟು ಪರಿಶ್ರಮ ಪಡುತ್ತಿದ್ದೇನೆ ಅನ್ನೋದು ನನಗೆ ಗೊತ್ತು. ತಯಾರಿಗಾಗಿ ಎಷ್ಟು ಶ್ರಮ ಹಾಕುತ್ತೇನೆ ಅನ್ನೋದು ನನಗೆ ಗೊತ್ತು. ನಾನು ಯಾವುದನ್ನು ಮುಟ್ಟುತ್ತೇನೋ ಅದರ ಬಗ್ಗೆ ನನಗೆ ನನ್ನ ಮೇಲೆ ನಂಬಿಕೆಯಿದೆ. ಹೀಗಾಗಿ ನಾನದನ್ನು ಬಂಗಾರವಾಗಿ ಪರಿವರ್ತಿಸಿಕೊಳ್ಳಬಲ್ಲೆ,' ಎಂದು ಧವನ್ ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications