Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ನನಗೆ ಅದ್ಭುತವಾದ ನಾಯಕ ಸಿಕ್ಕಿದ್ದಾನೆ ಎಂದ ಎಸ್ ಶ್ರೀನಿವಾಸನ್

Ipl 2020:i Have Got A Solid Captain Says Csk Owner N Srinivasan

ಮೂರು ಬಾರಿಯ ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಉಳಿದ ಎಲ್ಲಾ ತಂಡಗಳಿಗಿಂತಲೂ ದುಬೈನಲ್ಲಿ ತಡವಾಗಿ ಅಭ್ಯಾಸ ಆರಂಭಿಸಬೇಕಾದ ಅನಿವಾರ್ಯತೆಯಲ್ಲಿದೆ. ಚೆನ್ನೈನಲ್ಲಿ ಅಭ್ಯಾಸವನ್ನು ಮುಗಿಸಿಕೊಂಡು ದುಬೈಗೆ ಬಂದಿದ್ದ ಸಿಎಸ್‌ಕೆ ಆಟಗಾರರು ದುಬೈನಲ್ಲಿ ಕ್ವಾರಂಟೈನ್ ಮುಗಿಸಿಕೊಂಡು ಇನ್ನೇನು ಅಭ್ಯಾಸಕ್ಕೆ ಸಿದ್ಧರಾಗಬೇಕು ಎನ್ನುವಾಗ ಆಘಾತಕಾರಿ ಸುದ್ದಿ ಹೊರಬಿದ್ದುತ್ತು. ಇಬ್ಬರು ಆಟಗಾರರ ಸಹಿತ 13 ಮಂದಿ ಕೊರೊನಾ ವೈರಸ್‌ಗೆ ತುತ್ತಾಗಿದ್ದರು.

ಚೆನ್ನೈ ಪಾಳಯದಲ್ಲಿ ಕೊರನಾ ವೈರಸ್ ಕಾಣಿಸಿಕೊಂಡ ನಂತರ ಇದೀಗ ಎಲ್ಲಾ ಆಟಗಾರರು ಮತ್ತಷ್ಟು ದಿನಗಳ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಹೀಗಾಗಿ ವೇಳಾಪಟ್ಟಿ ವಿಳಂಭವಾಗಿದ್ದು ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಕಡೆಯಿಂದ ತಂಡದ ಮಾಲೀಕ ಎಸ್ ಶ್ರೀನಿವಾಸನ್‌ಗೆ ತಂಡದ ಪರವಾಗಿ ಭರವಸೆ ದೊರೆತಿಯೆಂದು ಸ್ವತಃ ಶ್ರೀನಿವಾಸನ್ ಔಟ್‌ಲುಕ್ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.

ಬಿಸಿಸಿಐನ ಮಾಧ್ಯಮ ಪ್ರಕಟಣೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಆಟಗಾರರು ಹಾಗೂ ಸಿಬ್ಬಂದಿಗಳಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿರುವ ಕಾಣದಿಂದಾಗಿ ಇನ್ನಷ್ಟು ದಿನಗಳ ಕಾಲ ಕ್ವಾರಂಟೈನ್‌ಗೆ ಆಟಗಾರರು ಒಳಗಾಗಲಿದ್ದಾರೆ. ಬಳಿಕ ಎಲ್ಲರ ಕೊರೊನಾ ಪರೀಕ್ಷೆಯನ್ನು ನಡೆಸಲಿದ್ದು ವರದಿ ನೆಗೆಟಿವ್ ಬಂದ ಬಳಿಕವೇ ಬಯೋ ಸೆಕ್ಯೂರ್ ಬಬಲ್‌ಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿಸಲಾಗಿತ್ತು.

ಶ್ರೀನಿವಾಸನ್ ಹೇಳಿಕೆಯನ್ನು ಪ್ರಟಿಸಿರುವ ಔಟ್‌ಲುಕ್ "ನಾನು ಎಂಎಸ್ ಧೋನಿಯ ಜೊತೆಗೆ ಮಾತನಾಡಿದ್ದೇನೆ. ಆತನ ನನಗೆ ಭರವಸೆಯನ್ನು ನೀಡಿದ್ದು ಈ ಸಂಖ್ಯೆಯಲ್ಲಿ ಹೆಚ್ಚಳ ಕಂಡರು ಕೂಡ ಆತಂಕ ಪಡುವ ಅಗತ್ಯವಿಲ್ಲ. ಧೊನಿ ಆಟಗಾರರ ಜೊತೆಗೆ ಝೂಮ್ ಕಾಲ್‌ನಲ್ಲಿ ಮಾತನಾಡಿದ್ದು ಎಲ್ಲರೂ ಸುರಕ್ಷುತವಾಗಿರುವಂತೆ ಕೇಳಿಕೊಂಡಿದ್ದಾರೆ" ಎಂದು ಪ್ರತಿಕ್ರಿಯಿಸಿರುವುದನ್ನು ಉಲ್ಲೇಖಿಸಿದೆ.

ನನಗೆ ಅದ್ಭುತವಾಗ ನಾಯಕ ಸಿಕ್ಕಿದ್ದಾರೆ. ಯಾವುದೇ ಕಾರಣಕ್ಕೂ ಅವರು ಸುಮ್ಮನೆ ಕುಳಿತಿಲ್ಲ. ಎಂಎಸ್ ಧೋನಿ ಎಲ್ಲವನ್ನೂ ಸರಳವಾಗಿ ನಿಭಾಯಿಸುತ್ತಿದ್ದಾರೆ ಎಂದು ಸಿಎಸ್ಕೆ ಮಾಲೀಕ ಎನ್ ಶ್ರೀನಿವಾಸನ್ ತಂಡದ ಆಂತರಿಕ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

Story first published: Tuesday, September 1, 2020, 15:28 [IST]
Other articles published on Sep 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+