Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆತ 10 ಓವರ್ ಬ್ಯಾಟಿಂಗ್ ಮಾಡಿದರೆ ಪಂದ್ಯ ಡೆಲ್ಲಿ ಪರವಾಗಿರಲಿದೆ: ಆಕಾಶ್ ಚೋಪ್ರ

IPL 2020: If he bats 10 overs then match will be in Delhi Capitals grasp Aakash Chopra on Prithvi

ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರನ ಬಗ್ಗೆ ಭರವಸೆಯ ಮಾತುಗಳನ್ನು ಆಡಿದ್ದಾರೆ. ಆತ 10 ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಿದರೆ ಪಂದ್ಯವನ್ನು ಡೆಲ್ಲಿ ಹಿಡಿತದಲ್ಲಿಟ್ಟುಕೊಳ್ಳುವ ಸಾಧ್ಯತೆಯಿದೆ ಎಂದಿದ್ದಾರೆ.

ಆಕಾಶ್ ಚೋಪ್ರ ಹೀಗೆ ವಿಶ್ವಾಸದ ಮಾತುಗಳನ್ನು ವ್ಯಕ್ತಪಡಿಸಿದ್ದು ಯುವ ಆಟಗಾರ ಪೃಥ್ವಿ ಶಾ ಬಗ್ಗೆ. ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನ ಮಾತನಾಡಿದ ಆಕಾಶ್ ಚೋಪ್ರ ಡೆಲ್ಲಿ ತಂಡದ ಪರವಾಗಿ ಶಾ 10 ಓವರ್‌ ಬ್ಯಾಟಿಂಗ್ ನಡೆಸಿದರೆ ಎದುರಾಳಿ ಹೈದರಾಬಾದ್ ತಂಡದಿಂದ ಪಂದ್ಯ ದೂರವಾಗುವ ಸಾಧ್ಯತೆಯಿದೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರ ಯುವ ಆಟಗಾರ ಪೃಥ್ವಿ ಶಾ ಬ್ಯಾಟ್‌ನಿಂದ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ನಿರೀಕ್ಷಿತ ರನ್ ಹರಿದು ಬಾರದಿರುವ ಬಗ್ಗೆಯೂ ಬೇಸರ ವ್ಯಕ್ತಪಡಿಸಿದರು. ಪೃಥ್ವಿ ಶಾ ಬ್ಯಾಟ್‌ನಿಂದ ಹೆಚ್ಚಿನ ರನ್ ಹರಿದು ಬಾರದಿರುವುದು ಡೆಲ್ಲಿ ಪಾಲಿಗೆ ಆತಂಕದ ವಿಚಾರ ಎಂದಿದ್ದಾರೆ.

ದುರಾದೃಷ್ಠ ಎಂದರೆ ಪೃಥ್ವಿ ಶಾ ಈ ಬಾರಿ 10 ಎಸೆತಗಳಲ್ಲಿ ವಿಕೆಟ್ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಆತ ಆದಷ್ಟು ಶೀಘ್ರವಾಗಿ ಫಾರ್ಮ್‌ಗೆ ಮರಳಬೇಕಿದೆ. ಡೆಲ್ಲಿ ಕ್ಯಾಪಿಟಲ್ಸ್ ಪೃಥ್ವಿ ಶಾ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದೆ ಎಂದು ಚೋಪ್ರ ವಿವರಿಸಿದ್ದಾರೆ.

Story first published: Sunday, November 8, 2020, 20:42 [IST]
Other articles published on Nov 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+