
ರೂಮ್ ವಿಚಾರಕ್ಕೆ ಜಗಳ?
ಸಿಎಸ್‌ಕೆ ತಂಡ ಆಗಸ್ಟ್ 21ರಂದು ದುಬೈಗೆ ಬಂದಿಳಿಯಿತು. ಆದರೆ ದುಬೈನಲ್ಲಿ ತನಗೆ ನೀಡಿರುವ ರೂಮ್ ಬಗ್ಗೆ ಸುರೇಶ್ ರೈನಾ ಅಸಮಾಧಾನಗೊಂಡಿದ್ದರು. ಕೊರೊನಾ ವೈರಸ್‌ನ ಕಾರಣದಿಂದಾಗಿ ಸಾಕಷ್ಟು ಕಠಿಣ ಪ್ರೊಟೊಕಾಲ್ ಇರುವ ಕಾರಣ ಚೆನ್ನೈ ನಾಯಕ ಧೋನಿಗೆ ನೀಡಿದ ಗುಣಮಟ್ಟದ ರೂಮ್ ನೀಡಬೇಕೆಂದು ಸುರೇಶ್ ರೈನಾ ಕೇಳಿಕೊಂಡಿದ್ದರು. ಇದೇ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸುರೇಶ್ ರೈನಾ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ ಎಂಬ ವರದಿಗಳು ಬರುತ್ತಿದೆ.

ಬಾಲ್ಕನಿ ಸರಿಯಿಲ್ಲದ್ದೇ ಮೂಲ!
ಸಿಎಸ್‌ಕೆ ತಂಡ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ಕಾರಣ ಎಲ್ಲಾ ಆಟಗಾರರಿಗೂ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸುರೇಶ್ ರೈನಾಗೆ ನೀಡಿದ ರೂಮ್‌ನಲ್ಲಿ ಸರಿಯಾದ ಬಾಲ್ಕನಿ ಇಲ್ಲದಿರುವುದು ರೈನಾ ಅಸಮಾಧಾನಕ್ಕೆ ಕಾರಣವಾಯಿತು. ಈ ಅಸಮಾಧಾನವೇ ತಂಡದ ಮ್ಯಾನೇಜ್‌ಮೆಂಟ್ ಜೊತೆಗೆ ಜಗಳಕ್ಕೆ ಕಾರಣವಾಯಿತು ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸಿಎಸ್‌ಎ ಮುಖ್ಯಸ್ಥ ಎನ್ ಶ್ರೀನಿವಾಸನ್ ಅಸಮಾಧಾನವನ್ನು ವ್ಯಕ್ತಡಿಸಿದ್ದಾರೆ.

ಧೋನಿಗೂ ಸಮಾಧಾನಿಸಲು ಸಾಧ್ಯವಾಗಲಿಲ್ಲ
ರೂಮ್ ವಿಚಾರವಾಗಿ ನಾಯಕ ಧೋನಿಗೆ ರೈನಾರನ್ನು ಸಮಾಧಾನಪಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಎಲ್ಲವೂ ನಿಯಂತ್ರಣ ತಪ್ಪಿದವು. ಇದೇ ಸಂದರ್ಭದಲ್ಲಿ ಚೆನ್ನೈ ತಂಡದ ಇಬ್ಬರು ಆಟಗಾರರು ಕೊರೊನಾ ವೈರಸ್‌ಗೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು. ಇದು ರೈನಾ ಮತ್ತಷ್ಟು ಆತಂಕಗೊಳ್ಳಲು ಕಾರಣವಾಯಿತು ಎಂದು ಹೇಳಲಾಗುತ್ತಿದೆ.

ಆರಂಭದಿಂದಲೂ ಸಿಎಸ್‌ಕೆಗೆ ನಿಷ್ಠ ಸುರೇಶ್ ರೈನಾ
ಸುರೇಶ್ ರೈನಾ ಐಪಿಎಲ್ ಆರಂಭವಾದ 2008ರಿಂದಲೂ ಸಿಎಸ್‌ಕೆ ತಂಡದ ಭಾಗವಾಗಿದ್ದು ತಂಡಕ್ಕೆ ನಿಷ್ಠರಾಗಿರುವ ಆಟಗಾರನಾಗಿದ್ದರು. ಸಿಎಸ್‌ಕೆ ಫಿಕ್ಸಿಂಗ್ ಆರೋಪದಿಂದ ಅನರ್ಹಗೊಂಡ ಕಾರಣ ಎರಡು ಆವೃತ್ತಿಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಆವೃತ್ತಿಯಲ್ಲೂ ಸುರೇಶ್ ರೈನಾ ಚೆನ್ನೈ ತಂಡದ ಪರವಾಗಿ ಕಣಕ್ಕಿಳಿದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರ ಎಂಬ ಹೆಗ್ಗಳಿಕೆಯನ್ನೂ ರೈನಾ ಪಡೆದುಕೊಂಡಿದ್ದಾರೆ.


Click it and Unblock the Notifications
