ಯಶಸ್ಸು ತಲೆಗೆ ಹತ್ತಿದಾಗ ಹೀಗಾಗುತ್ತದೆ: ರೈನಾ ನಿರ್ಧಾರಕ್ಕೆ ಶ್ರೀನಿವಾಸನ್ ಕೆಂಡ

ವೈಯಕ್ತಿಕ ಕಾರಣಗಳನ್ನು ನೀಡಿ ಸುರೇಶ್ ರೈನಾ ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನವೇ ಹಠಾತ್ ಆಗಿ ಹಿಂದಿರುಗಿದ್ದಾರೆ. ಈ ಬೆಳವಣಿಗೆಯ ನಂತರ ಚೆನ್ನೈ ತಂಡದಲ್ಲಿ ಎಲ್ಲವೂ ಸರಿಯಿಲ್ಲವೇನೋ ಎಂಬ ರೀತಿಯ ಘಟನೆಗಳು ನಡೆಯುತ್ತಿದೆ. ಯಾಕೆಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕ ಎನ್ ಶ್ರೀನಿವಾಸನ್ ಸುರೇಶ್ ರೈನಾ ವಿರುದ್ಧ ಕೆಂಡ ಕಾರಿದ್ದಾರೆ.
ಓಟ್‌ಲುಕ್ ವರದಿಯನ್ನು ಮಾಡಿರುವ ಪ್ರಕಾರ ಶ್ರೀನಿವಾಸನ್ ಸುರೇಶ್ ರೈನಾ ನಡೆಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ತನ್ನ ನಿರ್ಧಾರಕ್ಕೆ ಸುರೇಶ್ ರೈನಾ ಕಂಡಿತಾ ಮರುಕ ಪಡುತ್ತಾರೆ. ಹಾಗೂ ತಾನು ಕಳೆದುಕೊಳ್ಳುವ ಸಂಗತಿಗಳು ಹಾಗು ಹಣದ ಬಗ್ಗೆ ಅವರು ಅರಿತುಕೊಳ್ಳಲಿದ್ದಾರೆ ಎಂದು ಶ್ರೀನಿವಾಸನ್ ಪ್ರತಿಕ್ರಿಯಿಸಿದ್ದಾರೆ.

ಯಶಸ್ಸು ತಲೆಗೆ ಹತ್ತುತ್ತದೆ
ಮುಂದುವರಿದು ಮಾತನಾಡಿರುವ ಶ್ರೀನಿವಾಸನ್ "ನನ್ನ ಅಭಿಪ್ರಾಯವೇನೆಂದರೆ ನೀವು ಹಿಂಜರಿಯುತ್ತಿದ್ದರೆ ಅಥವಾ ಸಂತೋಷವಾಗಿರದಿದ್ದರೆ, ಹಿಂತಿರುಗಿ. ನಾನು ಯಾರನ್ನೂ ಏನನ್ನೂ ಮಾಡಲು ಒತ್ತಾಯಿಸುವುದಿಲ್ಲ. ಕೆಲವೊಮ್ಮೆ ಯಶಸ್ಸು ನಿಮ್ಮ ತಲೆಗೆ ಸೇರುತ್ತದೆ" ಎಂದು ಹೇಳಿರುವುದನ್ನು ಔಟ್‌ಲುಕ್ ಪತ್ರಿಕೆ ವರದಿ ಮಾಡಿದೆ.

ನಿಗೂಢವಾಗಿದೆ ಸಿಎಸ್‌ಕೆ ತಂಡ
ಶ್ರೀನಿವಾಸನ್ ವ್ಯಕ್ತಪಡಿಸುತ್ತಿರುವ ಮಾತುಗಳನ್ನು ಗಮನಿಸಿದರೆ ಒಂದು ಸ್ಪಷ್ಟವಾಗುತ್ತದೆ. ರೈನಾ ಈ ಬಾರಿಯ ಐಪಿಎಲ್‌ನಿಂದ ಹಿಂದಕ್ಕೆ ಸರಿಯಲು ಬೇರೇನೊ ಕಾರಣಗಳು ಇವೆ ಎಂಬ ಅನುಮಾನಗಳು ಮೂಡುತ್ತಿದೆ. ಆದರೆ ಈ ಬಗ್ಗೆ ಈವರೆಗೂ ಯಾವುದೇ ನಿಖರ ಮಾಹಿತಿಗಳು ಲಭ್ಯವಾಗಿಲ್ಲ.

ವೈಯಕ್ತಿಕ ಕಾರಣ ನೀಡಿ ಹಿಂದಿರುಗಿರುವ ರೈನಾ
ಸುರೇಶ್ ರೈನಾ ದುಬೈ ಬಿಟ್ಟು ಭಾರತಕ್ಕೆ ತೆರಳುವ ಮುನ್ನ ವೈಯಕ್ತಿಕ ಕಾರಣಗಳನ್ನು ನೀಡಿ ವಾಪಾಸಾಗುತ್ತಿದ್ದಾರೆ ಎಂದು ಸಿಎಸ್‌ಕೆ ಸ್ಪಷ್ಟಪಡಿಸಿತ್ತು. ಬಳಿಕ ಸುರೇಶ್ ರೈನಾ ಹಿಂದಿರುಗಲು ಕುಟುಂಬದಲ್ಲಿ ನಡೆದ ಆಘಾತಕಾರಿ ಘಟನೆ ಎಂದು ವರದಿಯಾಗಿತ್ತು. ಆದರೆ ಈಗ ನಡೆಯುತ್ತಿರುವ ಬೆಳವಣಿಗೆ ಮತ್ತಷ್ಟು ಅನುಮಾನಗಳಿಗೆ ಕಾರಣವಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications