Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರೀ ಬೌನ್ಸರ್‌ನಿಂದ ರಸೆಲ್ ವಿಕೆಟ್ ಮುರಿದ ಬೂಮ್ರಾ: ವಿಡಿಯೋ

IPL 2020: Jasprit Bumrah takes wicket of Andre Russell with a huge bouncer

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ 32ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್‌ಗಳ ಸುಲಭ ಗೆಲುವನ್ನಾಚರಿಸಿದೆ. ಕ್ವಿಂಟನ್ ಡಿ ಕಾಕ್ ಸ್ಫೋಟಕ ಅರ್ಧ ಶತಕದೊಂದಿಗೆ ಎಂಐ ಈ ಟೂರ್ನಿಯ 6ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ಈ ಪಂದ್ಯದಲ್ಲಿ ಮುಂಬೈ ಮಾರಕ ವೇಗಿ ಜಸ್‌ಪ್ರೀತ್ ಬೂಮ್ರಾ ಅವರು ಬೌನ್ಸರ್ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ವಿಕೆಟ್ ಉರುಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೂಮ್ರಾ ಬೌನ್ಸರ್‌ನಿಂದಾಗಿ ರಸೆಲ್ 10.4ನೇ ಓವರ್‌ನಲ್ಲಿ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ.

ಶುಕ್ರವಾರದ ಪಂದ್ಯದಲ್ಲಿ ಬ್ಯಾಟಿಂಗ್ ಆಯ್ದುಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ಆ್ಯಂಡ್ರೆ ರಸೆಲ್ 12, ಶುಬ್‌ಮನ್ ಗಿಲ್ 21, ಇಯಾನ್ ಮಾರ್ಗನ್ 39, ಪ್ಯಾಟ್ ಕಮಿನ್ಸ್ 53 (36 ಎಸೆತ) ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು ಕೇವಲ 148 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಮುಂಬೈಗೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕ್ವಿಂಟನ್ ಡಿ ಕಾಕ್ ಮತ್ತು ರೋಹಿತ್ ಶರ್ಮಾ ಉತ್ತಮ ಜೊತೆಯಾಟ ನೀಡಿದರು. ರೋಹಿತ್ 35, ಡಿ ಕಾಕ್ 78 (44 ಎಸೆತ), ಸೂರ್ಯಕುಮಾರ್ ಯಾದವ್ 10, ಹಾರ್ದಿಕ್ ಪಾಂಡ್ಯ 21 ರನ್‌ ಕೊಡುಗೆಯೊಂದಿಗೆ 16.5ನೇ ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 149 ರನ್ ಬಾರಿಸಿತು.

Story first published: Saturday, October 17, 2020, 10:38 [IST]
Other articles published on Oct 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+