ವಿಭಿನ್ನ ಕೂಲಿಂಗ್ ಗ್ಲಾಸ್ ಹಾಕಿದ್ದ ಶಿಖರ್ ಧವನ್ ಕಾಲೆಳೆದ ಪೀಟರ್ಸನ್: ವಿಡಿಯೋ

ದುಬೈ: ಶುಕ್ರವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಗಮನ ಸೆಳೆದಿದ್ದರು. ಯಾಕೆಂದರೆ ಧವನ್ ವಿಭಿನ್ನ ಕೂಲಿಂಗ್ ಗ್ಲಾನ್ ಧರಿಸಿ ಮೈದಾನಕ್ಕಿಳಿದಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಧವನ್ ವಿಚಿತ್ರ ಕನ್ನಡಕದೊಂದಿಗೆ ಕಾಣಿಸಿಕೊಂಡಿದ್ದರು.
ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ
ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 7ನೇ ಪಂದ್ಯದಲ್ಲಿ ತಮ್ಮ ಕೂಲಿಂಗ್ ಗ್ಲಾಸ್‌ಗಾಗಿ ಧವನ್ ಗಮನ ಸೆಳೆದರು. ನೋಡೋಕೆ ಜಾತ್ರೆಯಂತಿದ್ದ ಆ ಕೂಲಿಂಗ್ ಗ್ಲಾಸ್‌ಗೆ 'ಉಬರ್ ಕೂಲ್' ಎನ್ನುತ್ತಾರೆ. ರಾತ್ರಿ ಹೊತ್ತಿನಲ್ಲಿ ಬಳಸುವ ಕೂಲಿಂಗ್ ಗ್ಲಾಸ್ ಅದು.
ಆಟದ ವೇಳೆ ಧವನ್ ಧರಿಸಿದ್ದ ಈ ವಿಭಿನ್ನ ಕೂಲಿಂಗ್ ಗ್ಲಾಸ್ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಗಮನ ಸೆಳೆದಿತ್ತು. ಕಾಮೆಂಟರಿ ನೀಡುತ್ತಿದ್ದ ಪೀಟರ್ಸನ್ ಧವನ್ ಕಾಲೆಳೆದು ನಕ್ಕಿದ್ದು ಕಂಡು ಬಂತು. ಕಾಮೆಂಟರಿ ಮಧ್ಯೆ ಧವನ್ ಅವರತ್ತ ಬೊಟ್ಟು ಮಾಡಿ ಪೀಟರ್ಸನ್, 'ಅದು ನನಗೆ ಬೇಕು. ಅದು ನಿಜಕ್ಕೂ ನನಗೆ ಬೇಕು,' ಎಂದು ನಗುತ್ತ ಹೇಳಿದ್ದರು.
ಪಂದ್ಯದಲ್ಲಿ ಶಿಖರ್ ಧವನ್ ಅವರು ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಜೊತೆಗೆ ಉತ್ತಮ ಜೊತೆಯಾಟ ನೀಡಿದ್ದರು. 27 ಎಸೆತಗಳಲ್ಲಿ 35 ರನ್ ಬಾರಿಸಿದ್ದರು. ಇನ್ನು ಶಾ ಕೂಡ 64 ರನ್ ಕೊಡುಗೆಯಿತ್ತಿದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್ ಸಿಎಸ್‌ಕೆ ವಿರುದ್ಧ 44 ರನ್ ಜಯ ಗಳಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications