ಆತ ಆಡಿದ್ದು ಸಾಕು, ತಂಡದಿಂದ ಕೈಬಿಡಿ: ಪಂಜಾಬ್ ತಂಡಕ್ಕೆ ಪೀಟರ್ಸನ್ ಸಲಹೆ
ಸತತ ನಾಲ್ಕನೇ ಸೋಲಿನೊಂದಿಗೆ ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಅಂತಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೂಪರ್ ಓವರ್ ಸೋಲು ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಗೆಲುವಿನ ಬಳಿಕ, ರಾಜಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್, ಸಿಎಸ್‌ಕೆ ಮತ್ತು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲುಗಳನ್ನು ಕಂಡು ತತ್ತರಿಸಿದೆ.
ತಂಡದ ಸತತ ವೈಫಲ್ಯಕ್ಕೆ ಕಾರಣಗಳು ಹಲವು. ಅವುಗಳಲ್ಲಿ ಒಂದು ಗ್ಲೆನ್ ಮ್ಯಾಕ್ಸ್‌ವೆಲ್. ಆಡಿದ ಆರೂ ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ ಪ್ರದರ್ಶನ ತೀರಾ ನಿರಾಶದಾಯಕವಾಗಿದೆ. 1, 5, 13, 11, 11*, 7- ಇದು ಈ ಬಾರಿಯ ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ ಗಳಿಸಿರುವ ರನ್.
ಮ್ಯಾಕ್ಸ್‌ವೆಲ್ ಅವರನ್ನು ಕೈಬಿಡುವಂತೆ ಈ ಹಿಂದಿನಿಂದಲೂ ಕಿಂಗ್ಸ್ ಇಲೆವೆನ್ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಆದರೆ ಮ್ಯಾಕ್ಸ್‌ವೆಲ್ ಸಾಮರ್ಥ್ಯದ ಮೇಲೆ ನಂಬಿಕೆ ಇರಿಸಿರುವ ಕೆಎಲ್ ರಾಹುಲ್ ಅವರಿಗೆ ಪದೇ ಪದೇ ಅವಕಾಶಗಳನ್ನು ನೀಡುತ್ತಿದ್ದಾರೆ. ಪಂಜಾಬ್ ತಂಡವು ಮ್ಯಾಕ್ಸ್ ವೆಲ್ ಅವರಾಚೆಗೆ ನೋಡಬೇಕಾದ ಅಗತ್ಯವಿದೆ ಎಂದು ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಹೇಳಿದ್ದಾರೆ. ಮುಂದೆ ಓದಿ.

ಆ ಜಾಗ ವ್ಯರ್ಥವಾಗಬಾರದು
'ಈ ಹುಡುಗರಿಗೆ (ಪಂಜಾಬ್) ಮ್ಯಾಕ್ಸ್‌ವೆಲ್ ಅವರಿಂದ ಉತ್ತಮ ಆಟ ಬೇಕಿದೆ. ವಿದೇಶಿ ಆಟಗಾರನ ಜಾಗವನ್ನು ಹೀಗೆ ವ್ಯರ್ಥವಾಗಲು ಬಿಡಬಾರದು. ಈ ಬಾರಿ ಐಪಿಎಲ್‌ನಲ್ಲಿ ಮ್ಯಾಕ್ಸ್‌ವೆಲ್ ರನ್ ಗಳಿಸಿಲ್ಲ' ಎಂದು ಪೀಟರ್ಸನ್ ವೀಕ್ಷಕ ವಿವರಣೆ ಸಂದರ್ಭದಲ್ಲಿ ಹೇಳಿದ್ದಾರೆ.

ಹೆಚ್ಚೆಂದರೆ ಒಂದು ಅವಕಾಶ
'ವಿದೇಶ ಆಟಗಾರರಿಂದ ಕೆಎಲ್ ರಾಹುಲ್‌ಗೆ ಸೂಕ್ತ ಬೆಂಬಲ ಸಿಗುತ್ತಿಲ್ಲ. ಪೂರನ್ ಇಂದು ರನ್ ಬಾರಿಸಿದ್ದಾರೆ ನಿಜ. ಆದರೆ ಮುಖ್ಯವಾಗಿರುವುದು ಮ್ಯಾಕ್ಸ್‌ವೆಲ್. ಒಂದೋ ಅವರನ್ನು ಮೂಲೆಗುಂಪು ಮಾಡಬೇಕು, ಇಲ್ಲವೇ ಇನ್ನು ಒಂದೇ ಒಂದು ಅವಕಾಶ ನೀಡಬೇಕು' ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂದೊಂದು ದಿನ ಈತ ಭಾರತಕ್ಕೆ ವಿಶ್ವಕಪ್ ಗೆದ್ದು ತರುತ್ತಾನೆ: ಎಸ್. ಶ್ರೀಶಾಂತ್

ಬೇರೆ ಆಟಗಾರ ಅನಿವಾರ್ಯ
ಈ ಹಿಂದೆ ನಿಕೊಲಸ್ ಪೂರನ್ ಅವರ ಆಟದ ಬಗ್ಗೆಯೂ ಚರ್ಚೆಯಾಗುತ್ತಿತ್ತು. ಆದರೆ ಅವರು ಈ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನ ನೀಡಿದ್ದಾರೆ. ಮ್ಯಾಕ್ಸ್‌ವೆಲ್ ಇದುವರೆಗೂ ಒಂದು ಪಂದ್ಯದಲ್ಲಿಯೂ ಮಿಂಚಿಲ್ಲ. ಅವರು ಫ್ರಾಂಚೈಸಿಗೆ ಬಹಳ ದೊಡ್ಡ ಆಟಗಾರ. ಅವರು ಸೂಕ್ತ ಪ್ರದರ್ಶನ ನೀಡದೆ ಇರುವಾಗ ಅವರ ಬದಲು ಬೇರೊಬ್ಬರನ್ನು ಆಡಿಸಬೇಕಿರುವುದು ಅನಿವಾರ್ಯ ಎಂದು ಪೀಟರ್ಸನ್ ಹೇಳಿದ್ದಾರೆ.

ಗೇಲ್ ಬಂದರೆ ಎಲ್ಲಿ ಆಡುತ್ತಾರೆ?
ಕ್ರಿಸ್ ಗೇಲ್ ಅವರು ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಆಡಬೇಕಿತ್ತು. ಆದರೆ ಅವರಿಗೆ ಫುಡ್ ಪಾಯ್ಸನ್ ಸಮಸ್ಯೆಯಿಂದ ಹೊಟ್ಟೆ ಕೆಟ್ಟಿತ್ತು. ಹೀಗಾಗಿ ಅವರನ್ನು ಆಡಿಸಲಿಲ್ಲ ಎಂದು ಕೋಚ್ ಅನಿಲ್ ಕುಂಬ್ಳೆ ತಿಳಿಸಿದ್ದರು. ಗೇಲ್ ಬಂದರೆ ಒಂದಷ್ಟು ಮ್ಯಾಜಿಕ್ ನಡೆಯಬಹುದು. ಆದರೆ ಅವರು ಯಾವ ಕ್ರಮಾಂಕದಲ್ಲಿ ಆಡುತ್ತಾರೆ? ಅವರು 3 ಅಥವಾ 4ನೇ ಕ್ರಮಾಂಕದಲ್ಲಿ ಆಡುತ್ತಾರೆ ಎನ್ನಲಾಗದು. ಏಕೆಂದರೆ ವಿಕೆಟ್ ಮಧ್ಯ ಓಡುವುದರಲ್ಲಿ ಅವರು ಬಹಳ ಹಿಂದಿದ್ದಾರೆ ಎಂದು ಪೀಟರ್ಸನ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications