For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ತ್ವರಿತಗತಿಯಲ್ಲಿ ಅರ್ಧಶತಕ ಸಿಡಿಸಿದ ಪೂರನ್

Nicholas Pooran fastest fifty of IPL 2020

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆಗಳು ಮುರಿಯಲ್ಪಡುತ್ತಿವೆ. ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ನಿಕೋಲಸ್ ಪೂರನ್ ಅವರು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲೂ ತ್ವರಿತಗತಿಯಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

ಇದು ಐಪಿಎಲ್ 2020ನಲ್ಲಿ (ಅಕ್ಟೋಬರ್ 08ರಂತೆ) ದಾಖಲಾದ ಅತಿ ವೇಗದ ಅರ್ಧಶತಕವಾಗಿದೆ. ಕೇವಲ 17 ಎಸೆತಗಳಲ್ಲಿ ಪೂರನ್ ಅವರು 50ರನ್ ಗಡಿ ದಾಟಿದರು. ಹೈದರಾಬಾದ್ ತಂಡದ ಯುವ ಸ್ಪಿನ್ನರ್ ಸಮದ್ ಅವರ ಒಂದೇ ಓವರ್ ನಲ್ಲಿ 6 ಸಿಕ್ಸರ್ ಒಂದು ಬೌಂಡರಿ ಸಿಡಿಸಿ ಅರ್ಧಶತಕ ಬಾರಿಸಿದರು.

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ

ಈ ಅರ್ಧಶತಕ ಮೂಲಕ ಕಿಂಗ್ಸ್ ಎಲೆವನ್ ಪಂಜಾಬ್ ಪರ ಅತ್ಯಂತ ವೇಗವಾಗಿ ಅರ್ಧಶತಕ ಬಾರಿಸಿದ ಎರಡನೇ ಆಟಗಾರ ಎನಿಸಿಕೊಂಡರು. ಪಂಜಾಬ್ ಪರ ಅತಿ ವೇಗದ ಅರ್ಧಶತಕದ ದಾಖಲೆ ನಾಯಕ ಕೆಎಲ್ ರಾಹುಲ್ ಹೆಸರಿನಲ್ಲಿದೆ. 14 ಎಸೆತಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 2018ರಲ್ಲಿ ರಾಹುಲ್ ಅವರು ಮೊಹಾಲಿಯಲ್ಲಿ 50ರನ್ ಗಡಿ ದಾಟಿದ್ದರು. ಇದು ಐಪಿಎಲ್ ಇತಿಹಾಸದಲ್ಲೂ ಅತಿ ವೇಗದ ಅರ್ಧಶತಕವಾಗಿದೆ.

ಪಂಜಾಬ್ ಪರ 17 ಎಸೆತಗಳಲ್ಲಿ 50 ರನ್ ಗಳಿಸಿ ಪೂರನ್ 2ನೇ ಸ್ಥಾನದಲ್ಲಿದ್ದರೆ, ಕೆಎಲ್ ರಾಹುಲ್ 19 ಎಸೆತಗಳಲ್ಲಿ 50ರನ್ ಗಳಿಸಿ ಮೂರನೇ ಸ್ಥಾನ ಹಾಗೂ ಡೇವಿಡ್ ಮಿಲ್ಲರ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಪಂಜಾಬ್ ಪರ ದಾಖಲೆ:
14 ಎಸೆತಗಳು: ಕೆಎಲ್ ರಾಹುಲ್, ಡೆಲ್ಲಿ ವಿರುದ್ಧ, ಮೊಹಾಲಿ, 2018
17: ನಿಕೋಲಸ್ ಪೂರನ್, ಹೈದರಾಬಾದ್ ವಿರುದ್ಧ, ದುಬೈ, 2020
19: ಕೆಎಲ್ ರಾಹುಲ್, ಚೆನ್ನೈ ವಿರುದ್ಧ, ಮೊಹಾಲಿ, 2019
19: ಡೇವಿಡ್ ಮಿಲ್ಲರ್, ರಾಜಸ್ಥಾನ ವಿರುದ್ಧ, ಶಾರ್ಜಾ, 214

**
ಐಪಿಎಲ್ ಸಾರ್ವಕಾಲಿಕ ತ್ವರಿತಗತಿ 50
14: ಕೆಎಲ್ ರಾಹುಲ್, ಡೆಲ್ಲಿ ವಿರುದ್ಧ, ಮೊಹಾಲಿ, 2018
15: ಯೂಸುಫ್ ಪಠಾಣ್, ಹೈದರಾಬಾದ್ ವಿರುದ್ಧ, 2014
15: ಸುನೀಲ್ ನರೇನ್, ಬೆಂಗಳೂರು ವಿರುದ್ಧ, 2017
16: ಸುರೇಶ್ ರೈನಾ, ಪಂಜಾಬ್ ವಿರುದ್ಧ, 2014
17: ಪೂರನ್ ಹಾಗೂ ಇನ್ನೂ 17 ಮಂದಿ.

Story first published: Friday, October 9, 2020, 10:10 [IST]
Other articles published on Oct 9, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+