IPL 2020: ಕೆಕೆಆರ್ vs ರಾಜಸ್ಥಾನ್ ರಾಯಲ್ಸ್ , ಸಂಭಾವ್ಯ ತಂಡಗಳು, ಪಿಚ್ ರಿಪೋರ್ಟ್

ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ 54 ಪಂದ್ಯದಲ್ಲಿ ಇಂದು ದುಬೈ ಇಂಟರ್‌ನ್ಯಾಷ್‌ನಲ್ಲಿ ಸ್ಟೇಡಿಯಂನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಜಸ್ಥಾನ್ ರಾಯಲ್ಸ್(ಆರ್ಆರ್) ತಂಡಗಳು ಮುಖಾಮುಖಿಯಾಗುತ್ತಿವೆ.
ಪ್ಲೇ ಆಫ್ ಹಂತಕ್ಕೇರಲು ಉಭಯ ತಂಡಗಳಿಗೆ ಇಂದಿನ ಪಂದ್ಯದ ಫಲಿತಾಂಶವು ಮಾಡು ಇಲ್ಲವೆ ಮಡಿ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರದಲ್ಲಿ ಈಗಾಗಲೇ ನಾಲ್ಕು ತಂಡಗಳು ಸಮನಾದ 12 ಅಂಕಗಳನ್ನು ಹೊಂದಿದ್ದು ಅವುಗಳಲ್ಲಿ ರಾಜಸ್ಥಾನ್ ಮತ್ತು ಕೊಲ್ಕತ್ತಾ ಕೂಡ ಜಿದ್ದಾಜಿದ್ದಿನ ಪೈಪೋಟಿಯನ್ನು ಹೊಂದಿವೆ.
ಇಂದಿನ ಪಂದ್ಯವು ಕ್ವಾರ್ಟರ್‌ಫೈನಲ್‌ನಂತೆ ಬಿಂಬಿತವಾಗಿದ್ದು, ಉಭಯ ತಂಡಗಳು ಗೆಲುವನ್ನು ಬಿಟ್ಟರೆ ಬೇರೆ ಯಾವುದೇ ದಾರಿ ಉಳಿದಿಲ್ಲ. ರಾಜಸ್ಥಾನ್ ರಾಯಲ್ಸ್ ಪರ ಜೊಫ್ರಾ ಅಬ್ಬರಿಸಿದ್ದು ಉಳಿದ ಬೌಲರ್‌ಗಳು ಸಾಥ್ ನೀಡಬೇಕಿದೆ. ಇಲ್ಲದೆ ಹೋದಲ್ಲಿ ರಾಜಸ್ಥಾನ್ ತಂಡದ ಬಲಹೀನ ಬೌಲಿಂಗ್ ಪಡೆಯನ್ನು ಗುರಿಯಾಗಿಸಿ ಕೆಕೆಆರ್ ಬ್ಯಾಟ್ಸ್‌ಮನ್ ದಾಳಿ ನಡೆಸಬಲ್ಲರು.
ಇನ್ನು ಈ ಸೀಸನ್‌ನಲ್ಲಿ ಬಲಿಷ್ಠ ತಂಡವಿದ್ದರೂ, ಕೆಕೆಆರ್ ಪ್ಲೇ ಆಫ್ ಹಂತಕ್ಕೇರಲು ತುಂಬಾನೆ ಕಷ್ಟ ಪಟ್ಟಿದೆ. ಸ್ಟಾರ್ ಆಟಗಾರರಾದ ಸುನಿಲ್ ನರೈನ್ ಮತ್ತು ಆಂಡ್ರೆ ರಸ್ಸೆಲ್‌ರ ಗಾಯಗಳು ಕೆಕೆಆರ್ ತಂಡಕ್ಕೆ ಮುಳುವಾಯಿತು. ಈಗಲಾದರೂ ಹಿಂದಿನ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿನಿಂತು ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ತೋರಿದರೆ ಅಂತಿಮ ನಾಲ್ಕನೇ ಸ್ಥಾನಕ್ಕೆ ಪ್ರವೇಶಿಸಲು ಅವರಿಗೆ ಇನ್ನೂ ಅವಕಾಶವಿದೆ.

ಕೆಕೆಆರ್ ವರ್ಸಸ್ ಆರ್‌ಆರ್ ಹವಾಮಾನ ಮುನ್ಸೂಚನೆ
ದುಬೈ ಇಂಟರ್‌ನ್ಯಾಷ್‌ನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ತಾಪಮಾನವು 22 ರಿಂದ 31 ಡಿಗ್ರಿ ಸೆಲ್ಸಿಯಸ್ ನಡುವೆ ಉಳಿಯುವ ಸಾಧ್ಯತೆಯಿದೆ.

ಪಿಚ್ ವರದಿ
ಪಂದ್ಯದುದ್ದಕ್ಕೂ ಪಿಚ್ ಸಾಮಾನ್ಯದಂತೆ ಕಂಡೂ, ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿ(ಡ್ಯೂ) ದೊಡ್ಡ ಸಮಸ್ಯೆಯಾಗುತ್ತಿದೆ. ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಮಾಡಲು ಬಯಸುತ್ತಾನೆ, ಏಕೆಂದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲು ತುಂಬಾನೆ ಕಷ್ಟವಾಗುತ್ತದೆ.

ಕೊಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ಪ್ಲೇಯಿಂಗ್ 11
ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (W), ಇಯಾನ್ ಮಾರ್ಗಾನ್ (C), ರಿಂಕು ಸಿಂಗ್, ಸುನಿಲ್ ನರೇನ್, ಲ್ಯುಕಿ ಫರ್ಗ್ಯುಸನ್, ಪ್ಯಾಟ್ ಕಮಿನ್ಸ್, ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ

ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ಪ್ಲೇಯಿಂಗ್ 11
ಬೆನ್ ಸ್ಟೋಕ್ಸ್, ರಾಬಿನ್ ಉತ್ತಪ್ಪ, ಸ್ಟೀವ್ ಸ್ಮಿತ್ (ಸಿ), ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್ (ಡಬ್ಲ್ಯೂಕೆ), ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ವರುಣ್ ಆ್ಯರೋನ್ / ಜಯದೇವ್ ಉನಾದ್ಕಟ್, ಜೋಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ ಮತ್ತು ಶ್ರೇಯಸ್ ಗೋಪಾಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications