ಎಸ್‌ಆರ್‌ಎಚ್-ಕೆಕೆಆರ್ ಮುಖಾಮುಖಿಯ ಕುತೂಹಲಕಾರಿ ಅಂಕಿ-ಅಂಶಗಳು

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 8ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಡಲಿವೆ. ಆಡಿರುವ ಆರಂಭಿಕ ಪಂದ್ಯದಲ್ಲಿ ಎರಡೂ ತಂಡಗಳೂ ಗೆದ್ದಿಲ್ಲ. ಹೀಗಾಗಿ ಇಂದಿನ ಪಂದ್ಯ ಕುತೂಹಲ ಮೂಡಿಸಿದೆ. ಪಂದ್ಯ ಎಂದಿನಂತೆ ಭಾರತೀಯ ಕಾಲಮಾನ 7.30 pmಗೆ ಆರಂಭವಾಗಲಿದೆ.
ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ
ಆಡಿದ್ದ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ವಿರುದ್ಧ 10 ರನ್‌ನಿಂದ ಸೋತಿತ್ತು. ಇತ್ತ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಎದುರು 49 ರನ್ ಸೋಲು ಕಂಡಿತ್ತು.
ಕೆಕೆಆರ್ vs ಎಸ್‌ಆರ್‌ಎಚ್ ಮುಖಾಮುಖಿಯ ಕುತೂಹಲಕಾರಿ ಅಂಕಿ-ಅಂಶಗಳು ಇಲ್ಲಿವೆ

ಗೆಲುವು ಯಾರಿಗೆ?
ಟೂರ್ನಿಯ ಮೊದಲ ಗೆಲುವು ದಾಖಲಿಸುವ ಕಾತರ ಎಸ್‌ಆರ್‌ಎಚ್ ಮತ್ತು ಕೆಕೆಆರ್ ಎರಡರಲ್ಲೂ ಇದೆ. ಹೀಗಾಗಿ ಇಂದಿನ ಪಂದ್ಯ ಹೆಚ್ಚು ಕುತೂಹಲಕಾರಿಯೆನಿಸಿದೆ. ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ನಾಯಕತ್ವದ ಕೋಲ್ಕತ್ತಾ ಗೆಲ್ಲುತ್ತಾ ಇಲ್ಲ ಡೇವಿಡ್ ವಾರ್ನರ್ ಮುಂದಾಳತ್ವದ ಹೈದರಾಬಾದ್ ಗೆಲ್ಲುತ್ತಾ ಕಾದುನೋಡಬೇಕಿದೆ.

ಕೋಲ್ಕತ್ತಾ ಮೇಲುಗೈ
ಕೆಕೆಆರ್ ಮತ್ತು ಎಸ್‌ಆರ್‌ಎಚ್ ಹಿಂದಿನ ಮುಖಾಮುಖಿಗಳನ್ನು ಗಮನಿಸಿದರೆ ಕೋಲ್ಕತ್ತಾ ಕೊಂಚ ಮೇಲುಗೈ ಸಾಧಿಸುತ್ತದೆ. ಯಾಕೆಂದರೆ ಹಿಂದಿನ 17 ಪಂದ್ಯಗಳಲ್ಲಿ ಕೆಕೆಆರ್ 10 ಬಾರಿ ಗೆದ್ದಿದ್ದರೆ, ಎಸ್‌ಆರ್‌ಎಚ್ 7 ಬಾರಿ ವಿಜಯದ ನಗೆ ಬೀರಿದೆ.

ಮುಖಾಮುಖಿಯ ಅಂಕಿ ಅಂಶಗಳು
* ಆಡಿದ ಒಟ್ಟು ಪಂದ್ಯಗಳ ಸಂಖ್ಯೆ: 17
* ಕೆಕೆಆರ್ ಗೆದ್ದ ಪಂದ್ಯಗಳು: 10
* ಎಸ್‌ಆರ್‌ಹೆಚ್ ಗೆದ್ದ ಪಂದ್ಯಗಳು: 7
* ಭಾರತದಲ್ಲಿ ಆಡಿದ ಪಂದ್ಯ: 17 (ಕೆಕೆಆರ್ 10, ಎಸ್‌ಆರ್‌ಹೆಚ್ 7)
* ಯುಎಇಯಲ್ಲಿ ಆಡಿದ ಪಂದ್ಯಗಳು: 0 (ಕೆಕೆಆರ್ 0, ಎಸ್‌ಆರ್‌ಹೆಚ್ 0)
* ಎಸ್‌ಆರ್‌ಹೆಚ್ ವಿರುದ್ಧ ಕೆಕೆಆರ್ ಸರಾಸರಿ ಸ್ಕೋರ್: 149
* ಕೆಕೆಆರ್ ವಿರುದ್ಧ ಎಸ್‌ಆರ್‌ಹೆಚ್ ಸರಾಸರಿ ಸ್ಕೋರ್: 156

ಡೇವಿಡ್ ವಾರ್ನರ್ ಮುಂದೆ
* ಕೆಕೆಆರ್‌ಗೆ ಹೆಚ್ಚಿನ ರನ್: 533 (ಡೇವಿಡ್ ವಾರ್ನರ್)
* ಎಸ್‌ಆರ್‌ಎಚ್‌ಗೆ ಹೆಚ್ಚಿನ ರನ್: 126 (ನಿತೀಶ್ ರಾಣಾ)
* ಕೆಕೆಆರ್‌ಗೆ ಹೆಚ್ಚಿನ ವಿಕೆಟ್‌ಗಳು: 10 (ಕುಲದೀಪ್ ಯಾದವ್ ಮತ್ತು ಸುನಿಲ್ ನರೈನ್)
* ಎಸ್‌ಆರ್‌ಎಚ್‌ಗೆ ಹೆಚ್ಚಿನ ವಿಕೆಟ್‌ಗಳು: 19 (ಭುವನೇಶ್ವರ್ ಕುಮಾರ್)
* ಕೆಕೆಆರ್‌ಗೆ ಹೆಚ್ಚಿನ ಕ್ಯಾಚ್‌ಗಳು: 4 (ದಿನೇಶ್ ಕಾರ್ತಿಕ್)
* ಎಸ್‌ಆರ್‌ಎಚ್‌ಗೆ ಹೆಚ್ಚಿನ ಕ್ಯಾಚ್‌ಗಳು: 9 (ರಶೀದ್ ಖಾನ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications