Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗಿಲ್ ಅರ್ಧ ಶತಕ, ಹೈದರಾಬಾದ್ ವಿರುದ್ಧ ಕೋಲ್ಕತ್ತಾಕ್ಕೆ ಭರ್ಜರಿ ಜಯ

IPL 2020: KKR vs SRH Match 8 highlights in kannada

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಶನಿವಾರ (ಸೆಪ್ಟೆಂಬರ್ 26) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 8ನೇ ಪಂದ್ಯದಲ್ಲಿ ಸನ್ ರೈಸರ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 7 ವಿಕೆಟ್ ಜಯ ಗಳಿಸಿದೆ. ಯುವ ಬ್ಯಾಟ್ಸ್‌ಮನ್ ಗಿಲ್ ಆಕರ್ಷಕ ಬ್ಯಾಟಿಂಗ್‌ ನೆರವಿನೊಂದಿಗೆ ಕೆಕೆಆರ್ ಟೂರ್ನಿಯ ಚೊಚ್ಚಲ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡ ಬ್ಯಾಟಿಂಗ್‌ನಲ್ಲಿ ಎಡವಿತು. ನಾಯಕ ಡೇವಿಡ್ ವಾರ್ನರ್ 36, ಮನೀಶ್ ಪಾಂಡೆ 51, ವೃದ್ಧಿಮಾನ್ ಸಹಾ 30, ಮೊಹಮ್ಮದ್ ನಬಿ 11 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ ಎಸ್‌ಆರ್‌ಎಚ್ 4 ವಿಕೆಟ್ ಕಳೆದು 142 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಸರ್ಸ್‌ನಿಂದ ಶುಬ್‌ಮನ್ ಗಿಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಗಿಲ್ 70 (62 ಎಸೆತ), ನಿತೀಶ್ ರಾಣಾ 26, ಇಯಾನ್ ಮಾರ್ಗನ್ 42 (29 ಎಸೆತ) ರನ್ ಸೇರ್ಪಡೆಯೊಂದಿಗೆ 18 ಓವರ್‌ ಮುಕ್ತಾಯಕ್ಕೆ 3 ವಿಕೆಟ್ ಕಳೆದು 145 ರನ್ ಬಾರಿಸುವುದರೊಂದಿಗೆ ಗೆಲುವು ಸಾರಿತು.

ಎಚ್‌ಆರ್‌ಎಚ್ ಇನ್ನಿಂಗ್ಸ್‌ನಲ್ಲಿ ಕೆಕೆಆರ್‌ನ ಪ್ಯಾಟ್ ಕಮಿನ್ಸ್, ವರುಣ್ ಚಕ್ರವರ್ತಿ ಮತ್ತು ಆ್ಯಂಡ್ರೆ ರಸೆಲ್ ತಲಾ 1 ವಿಕೆಟ್ ಪಡೆದು. ಕೆಕೆಆರ್‌ ಇನ್ನಿಂಗ್ಸ್‌ನಲ್ಲಿ ಎಚ್‌ಆರ್‌ಎಚ್‌ನ ಖಲೀಲ್ ಅಹ್ಮದ್, ಟಿ ನಟರಾಜನ್ ಮತ್ತು ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು.

Story first published: Saturday, September 26, 2020, 23:15 [IST]
Other articles published on Sep 26, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+