For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಕೆಕೆಆರ್‌ vs ಎಸ್‌ಆರ್‌ಎಚ್, ಸಂಭಾವ್ಯ XI, ಪಿಚ್ ರಿಪೋರ್ಟ್

IPL 2020: KKR vs SRH, Match 8 Predicted Playing 11, Pitch Report, Toss Timing And Dubai Weather Forecast

ಅಬಿಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ 8 ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಆಡಲಿವೆ. ಪಂದ್ಯ ಭಾರತೀಯ ಕಾಲಮಾನ 7.30 pmಗೆ ಆರಂಭವಾಗಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಎರಡೂ ತಂಡಗಳು ಸೋತಿರುವುದರಿಂದ ಇಂದಿನ ಪಂದ್ಯ ತುಂಬಾ ಕುತೂಹಲಕಾರಿಯಾಗಿದೆ.

ಇತ್ತಂಡಗಳ ಮುಖಾಮುಖಿಯ ಹಿಂದಿನ ಅಂಕಿ-ಅಂಶಗಳ ಪ್ರಕಾರ ಕೊಂಚ ಕೋಲ್ಕತ್ತಾ ನೈಟ್ ರೈಡರ್ಸ್ ಬಲಿಷ್ಠವಾಗಿದೆ. ಯಾಕೆಂದರೆ ಆಡಿರುವ 17 ಪಂದ್ಯಗಳಲ್ಲಿ 10ರಲ್ಲಿ ಕೆಕೆಆರ್ ಗೆದ್ದಿದೆ. ಆದರೆ ಈ ಸಾರಿ ಸನ್ ರೈಸರ್ಸ್ ಹೈದರಾಬಾದ್‌ನಲ್ಲೂ ಒಳ್ಳೆಯ ಆಟಗಾರರು ಇರುವುದರಿಂದ ಜಿದ್ದಾಜಿದ್ದಿಯ ಕದನ ನಿರೀಕ್ಷಿತ.

ಅಬುಧಾಬಿ ಪಿಚ್ ರಿಪೋರ್ಟ್ ಪ್ರಕಾರ, ಇದು ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲಕಾರಿಯಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಎರಡೂ ತಂಡಗಳ ಸ್ಪಿನ್ನರ್‌ಗಳು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಇನ್ನು ಹವಾಮಾನ ವರದಿಯ ಪ್ರಕಾರ ಪಂದ್ಯ ನಡೆಯುವ ದಿನ ಅಬುಧಾಬಿಯಲ್ಲಿ 39 ಡಿಗ್ರೀ ಸೆಲ್ಶಿಯನ್ ತಾಪಮಾನ ಇರಲಿದೆ.

ಕೆಕೆಆರ್‌ ಸಂಭಾವ್ಯ XI: ಸುನಿಲ್ ನರೀನ್, ಶುಬ್ಮನ್ ಗಿಲ್, ದಿನೇಶ್ ಕಾರ್ತಿಕ್ (ವಿಕೆ, ಸಿ), ನಿತೀಶ್ ರಾಣಾ, ಇಯಾನ್ ಮಾರ್ಗನ್, ಆ್ಯಂಡ್ರೆ ರಸ್ಸೆಲ್, ನಿಖಿಲ್ ನಾಯಕ್, ಪ್ಯಾಟ್ ಕಮ್ಮಿನ್ಸ್, ಶಿವಮಾನ್ ಮಾವಿ, ಸಂದೀಪ್ ವಾರಿಯರ್, ಕುಲದೀಪ್ ಯಾದವ್.

ಎಸ್‌ಆರ್‌ಎಚ್ ಸಂಭಾವ್ಯ XI: ಜಾನಿ ಬೈರ್‌ಸ್ಟೋವ್ (ವಿಕೆ), ಡೇವಿಡ್ ವಾರ್ನರ್ (ಸಿ), ಕೇನ್ ವಿಲಿಯಮ್ಸನ್/ಮೊಹಮ್ಮದ್ ನಬಿ/ಫ್ಯಾಬೀನ್ ಅಲೆನ್, ಮನೀಶ್ ಪಾಂಡೆ, ವಿಜಯ್ ಶಂಕರ್, ಅಭಿಷೇಕ್ ಶರ್ಮಾ, ಪ್ರಿಯಮ್ ಗರ್ಗ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಟಿ ನಟರಾಜನ್.

Story first published: Saturday, September 26, 2020, 16:21 [IST]
Other articles published on Sep 26, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+