ಐಪಿಎಲ್ 2020: ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಸಂಭಾವ್ಯ ತಂಡ

ಈ ಪಂದ್ಯ ಶಾರ್ಜಾ ಕ್ರೀಡಾಂಗನದಲ್ಲಿ ನಡೆಯಲಿದ್ದು ಎರಡೂ ತಂಡಗಳ ಪ್ರದರ್ಶನ ಕುತೂಹಲ ಮೂಡಿಸಿದೆ. ಒಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ಇಶಾಂತ್ ಶರ್ಮಾ ಹಾಗೂ ಅಮಿತ್ ಮಿಶ್ರಾ ಗಾಯದಿಂದಾಗಿ ಟೂರ್ನಿಯಿಂದಲೇ ಔಟಾಗಿದ್ದರೆ ಅಭ್ಯಾಸದ ವೇಳೆ ಗಾಯಗೊಂಡಿದ್ದ ರಿಷಭ್ ಪಂತ್ ವಿಶ್ರಾಂತಿಯಲ್ಲಿದ್ದಾರೆ. ಇನ್ನು ಕಳೆದ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಕೂಡ ಗಾಯಗೊಂಡು ಪಂದ್ಯದಿಂದ ಹೊರನಡೆದಿದ್ದರು.
ಸತತ ಎರಡು ಪಂದ್ಯಗಳಲ್ಲಿ ಸೋಲಿ ಕಂಡಿದ್ದ ಸಿಎಸ್‌ಕೆ ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯಗಳಿಸುವಲ್ಲಿ ಯಶಸ್ವಿಯಾಗಿತ್ತು. ತಂಡದಲ್ಲಿ ಮಾಡಿದ ಕೆಲ ಬದಲಾವಣೆಗಳು ಸಕಾರಾತ್ಮವಾಗಿತ್ತು. ಹೆಚ್ಚಿನ ಆಟಗಾರರು ಫಾರ್ಮ್‌ನಲ್ಲಿರುವುದು ಸಿಎಸ್‌ಕೆಗೆ ಬಲ ನೀಡಲಿದೆ.
ಪಂದ್ಯ ಸಂಜೆ 7:30 ಕ್ಕೆ ಆರಂಭವಾಗಲಿದ್ದು 7ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಶಾರ್ಜಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಸ್ಪಿನ್ ಬೌಲರ್‌ಗಳು ಯಶಸ್ಸನ್ನು ಕಾಣುತ್ತಿದ್ದಾರೆ. ಬ್ಯಾಟ್ಸ್‌ಮನ್‌ಗಳಿಗೂ ಈ ಪಿಚ್ ಅನುಕೂಲಕರವಾಗಿರಲಿದೆ. ಸಂಜೆಯ ಉಷ್ಣಾಂಶ 27-30 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿರಲಿದೆ.
ಚೆನ್ನೈ ಸಂಭಾವ್ಯ ಆಡುವ ಬಳಗ: ಫಾಫ್ ಡು ಪ್ಲೆಸಿಸ್, ಸ್ಯಾಮ್ ಕುರ್ರನ್, ಶೇನ್ ವ್ಯಾಟ್ಸನ್, ಅಂಬಾಟಿ ರಾಯುಡು, ಎಂ.ಎಸ್.ಧೋನಿ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಕೇದಾರ್ ಜಾಧವ್ / ಪಿಯೂಷ್ ಚಾವ್ಲಾ, ದೀಪಕ್ ಚಹರ್, ಶಾರ್ದುಲ್ ಠಾಕೂರ್, ಕರ್ಣ್ ಶರ್ಮಾ
ಡೆಲ್ಲಿ ಸಂಭಾವ್ಯ ಆಡುವ ಬಳಗ: ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯ ರಹಾನೆ / ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಮಾರ್ಕಸ್ ಸ್ಟೋಯಿನಿಸ್, ಅಲೆಕ್ಸ್ ಕ್ಯಾರಿ / ಶಿಮ್ರಾನ್ ಹೆಟ್ಮಿಯರ್, ಆಕ್ಸರ್ ಪಟೇಲ್, ಕಗಿಸೊ ರಬಾಡಾ, ಆರ್ ಅಶ್ವಿನ್, ಅನ್ರಿಚ್ ನಾರ್ಟ್ಜೆ, ತುಷಾರ್ ದೇಶಪಾಂಡೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications