For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಡೆಲ್ಲಿ vs ಚೆನ್ನೈ, ಹೆಡ್ ಟು ಹೆಡ್ ಅಂಕಿಅಂಶಗಳು

IPL 2020, Match 34, CSK vs DC: Head-to-head records and Players to watch out for

ಶನಿವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನವನ್ನು ನಿಡುವಲ್ಲಿ ವಿಫಲವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ಈ ಪಂದ್ಯ ಮಹತ್ವದ್ದಾಗಿದ್ದು ಕಳೆದ ಪಂದ್ಯದ ಗೆಲುವಿನ ಲಯವನ್ನು ಮುಂದುವರಿಸಿಸುವ ವಿಶ್ವಾಸದಲ್ಲಿದೆ.

ಡೆಲ್ಲಿ ಹಾಗೂ ಚೆನ್ನೈ ತಂಡಗಳು ಐಪಿಎಲ್ ಇರಿಹಾಸದಲ್ಲಿ ಈವರೆಗೆ 22 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ 17 ಪಂದ್ಯಗಳ್ಳಲ್ಲಿ ಜಯಗಳಿಸಿರುವ ಚೆನ್ನೈ ಭಾರೀ ಮುನ್ನಡೆಯನ್ನು ಕಾಯ್ದುಕೊಂಡಿದ್ದರೆ 7 ಪಂದ್ಯಗಳನ್ನು ಗೆದ್ದಿರುವ ಡೆಲ್ಲಿ ಹಿನ್ನೆಡೆಯಲ್ಲಿದೆ. ಆದರೆ ಈ ಬಾರಿಯ ಪ್ರದರ್ಶನ ಸಂಪೂರ್ಣವಾಗಿ ತದ್ವಿರುದ್ಧವಿದೆ. ಡೆಲ್ಲಿ ಸಂಪೂರ್ಣ ಆತ್ಮ ವಿಶ್ವಾಸದ ಪ್ರದರ್ಶನವನ್ನು ನೀಡುತ್ತಾ ಮುನ್ನುಗ್ಗುತ್ತಿದೆ.

ಕಳೆದ ಪಂದ್ಯದ ಪ್ರದರ್ಶನ

ಕಳೆದ ಪಂದ್ಯದ ಪ್ರದರ್ಶನ

ಇದೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಈ ತಂಡಗಳು ಮುಖಾಮುಖಿಯಾಗಿದ್ದಾಗ ಡೆಲ್ಲಿ ಚೆನ್ನೈ ತಂಡವನ್ನು 44 ರನ್‌ಗಳ ಅಂತರದಿಂದ ಮಣಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ 175/3 ರನ್‌ಗಳಿಸಿದ್ದರೆ ಸಿಎಸ್‌ಕೆಗೆ ಗಳಿಸಲು ಸಾಧ್ಯವಾಗಿದ್ದು 131 ರನ್ ಮಾತ್ರ.

ಅಂಕಪಟ್ಟಿಯಲ್ಲೂ ಡೆಲ್ಲಿ ಮುಂದೆ

ಅಂಕಪಟ್ಟಿಯಲ್ಲೂ ಡೆಲ್ಲಿ ಮುಂದೆ

ಇನ್ನು ಅಂಕಪಟ್ಟಿಯಲ್ಲಿ ಡೆಲ್ಲಿ ಅತ್ಯುನ್ನತ ಸ್ಥಾನದಲ್ಲಿದೆ. 8 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಮಾತ್ರವೇ ಸೋತಿರುವ ಡೆಲ್ಲಿ ಉಳಿದ 6 ಪಂದ್ಯಗಳ ಗೆಲುವಿನೊಂದಿಗೆ 12 ಅಂಕಗಳನ್ನು ಸಂಪಾದಿಸಿ ಮೊದಲ ಸ್ಥಾನದಲ್ಲಿದೆ. ಆದರೆ ಚೆನ್ನೈ ತಂಡ ಆಡಿದ 8 ಪಂದ್ಯಗಳಲ್ಲಿ 3 ಗೆಲುವನ್ನು ಮಾತ್ರವೇ ಕಂಡಿದ್ದು 6 ಅಂಕಗಳ ಮೂಲಕ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿ ಉಳಿದುಕೊಂಡಿದೆ.

ಆಟಗಾರರ ಪ್ರದರ್ಶನ

ಆಟಗಾರರ ಪ್ರದರ್ಶನ

ಇನ್ನು ಆಟಗಾರರ ಪ್ರದರ್ಶನದ ವಿಚಾರದಲ್ಲಿ ಚೆನ್ನೈ ತಂಡದ ಫಾಫ್ ಡುಪ್ಲೆಸಿಸ್ 307 ರನ್‌ಗಳಿಸಿ ಮೊದಲ ಸ್ಥಾನದಲ್ಲಿದ್ದರೆ ಶ್ರೇಯಸ್ ಅಯ್ಯರ್, ಶಿಖರ್ ಧವನ್, ಶೇನ್ ವಾಟ್ಸನ್ ನಂತರದಲ್ಲಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 18 ವಿಕೆಟ್ ಪಡೆದಿರುವ ರಬಡಾ ಮೊದಲ ಸ್ಥಾನದ್ದಿದ್ದರೆ ಅನ್ರಿಕ್ ನೋರ್ಕಿಯಾ ಸ್ಯಾಮ್ ಕರನ್ ನಂತರದ ಸ್ಥಾನದಲ್ಲಿದ್ದಾರೆ.

ಕಳೆದ ಐದು ಪಂದ್ಯಗಳ ಪ್ರದರ್ಶನ

ಕಳೆದ ಐದು ಪಂದ್ಯಗಳ ಪ್ರದರ್ಶನ

ಈ ಬಾರಿಯ ಟೂರ್ನಿಯಲ್ಲಿ ಈ ಎರಡು ತಂಡಗಳ ಕಳೆದ ಐದು ಪಂದ್ಯಗಳ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಡೆಲ್ಲಿ ಮುಂದಿದೆ. ಕಳೆದ ಐದು ಪಂದ್ಯಗಳಲ್ಲಿ ಡೆಲ್ಲಿ ನಾಲ್ಕು ಗೆಲವನ್ನು ಪಡೆದುಕೊಂಡಿದ್ದರೆ ಒಂದು ಸೋಲು ಅನುಭವಿಸಿದೆ. ಚೆನ್ನೈ ತಂಡ ಕಳೆದ ಐದು ಪಂದ್ಯಗಳಲ್ಲಿ ಎರಡು ಗೆಲುವು ಕಂಡಿದ್ದು ಒಂದು ಮೂರು ಸೋಲು ಅನುಭವಿಸಿದೆ.

Story first published: Saturday, October 17, 2020, 15:50 [IST]
Other articles published on Oct 17, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+