ಐಪಿಎಲ್ 2020: ಚೆನ್ನೈ vs ಕೊಲ್ಕತಾ, ಸಂಭಾವ್ಯ ತಂಡ ಹಾಗೂ ಇತರೆ ಮಾಹಿತಿ

ಐಪಿಎಲ್ ಗುರುವಾರ 49ನೇ ಪಂದ್ಯಕ್ಕೆ ಸಾಕ್ಷಿಯಾಗುತ್ತಿದೆ. ಈ ಪಂದ್ಯದಲ್ಲಿ ಟೂರ್ನಿಯಿಂದ ಈಗಾಗಲೇ ಹೊರಬಿದ್ದಿರುವ ಚೆನ್ನೈ ಅಂತಿಮ ಹಂತದಲ್ಲಾದರೂ ಗೆಲುವಿನ ಮುಖ ನೋಡಲು ಬಯಸುತ್ತಿದ್ದರೆ ಕೊಲ್ಕತಾ ನೈಟ್ ರೈಡರ್ಸ್‌ಗೆ ಇಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.
ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಕೊಲ್ಕತಾ ನೈಟ್ ರೈಡರ್ಸ್ ಇಂದಿನ ಪಂದ್ಯವನ್ನು ಗೆದ್ದು ಪ್ಲೇ ಆಫ್‌ಗೇರಲು ತನ್ನ ಪ್ರಯತ್ನವನ್ನು ಮುಂದುವರಿಸಲಿದೆ. ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಟಾಪ್ 4ನೇ ಸ್ಥಾನಕ್ಕೆ ಎಂಟ್ರಿ ಪಡೆದುಕೊಂಡಿರುವುದು ಈ ಹೋರಾಟ ತೀವ್ರತೆಯನ್ನು ಹೆಚ್ಚಿಸಿದೆ.

ಟಾಸ್ ಹಾಗೂ ಪಂದ್ಯದ ಆರಂಭ
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ. 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಕ್ರೀಡಾಂಗಣದ ಪಿಚ್ ನಿಧಾನಗತಿಯಲ್ಲಿ ವರ್ತಿಸಲಿದೆ. ಸ್ಪಿನ್ನರ್‌ಗಳು ಅಥವಾ ಮಧ್ಯಮ ವೇಗದ ಬೌಲರ್‌ಗಳು ಹೆಚ್ಚಿನ ಯಶಸ್ಸು ಪಡೆಯುವ ಅವಕಾಶವಿದೆ. ಬೌಲಿಂಗ್ ವಿಭಾಗಕ್ಕೆ ಹೋಲಿಸಿದರೆ ಬ್ಯಾಟಿಂಗ್ ಪಾಳಯ ಸ್ವಲ್ಪ ಹೆಚ್ಚಿನ ಸಂಕಷ್ಟವನ್ನು ಎದುರಿಸಲುವ ಸಾಧ್ಯತೆಯಿದೆ.

ಹವಾಮಾನ ವರದಿ
ಹಮಾಮಾನ ವರದಿಯಂತೆ ಮಳೆ ಸುರಿಯುವ ಯಾವುದೇ ಸಂಭವವಿಲ್ಲ. ಇನ್ನು ದುಬೈ ಕ್ರೀಡಾಂಗಣದಲ್ಲಿ ಸಂಜೆಯ ವೇಳೆಗೆ ಸುಮಾರು 33 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರಲಿದೆ ಎನ್ನಲಾಗಿದೆ. ಪಂದ್ಯದ ಮಧ್ಯಂತರದ ಬಳಿಕ ಇಬ್ಬನಿ ಬೀಳುವ ಸಂಭವವಿದೆ.

ಕೊಲ್ಕತಾ ನೈಟ್ ರೈಡರ್ಸ್
ಕೋಲ್ಕತಾ ನೈಟ್ ರೈಡರ್ಸ್ ಸಂಭಾವ್ಯ ತಂಡ: ಶುಬ್ಮನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಇಯೊನ್ ಮೋರ್ಗಾನ್ (ನಾಯಕ), ಸುನಿಲ್ ನರೈನ್, ಪ್ಯಾಟ್ ಕಮ್ಮಿನ್ಸ್ / ಆಂಡ್ರೆ ರಸ್ಸೆಲ್, ಲಾಕಿ ಫರ್ಗುಸನ್, ಕಮಲೇಶ್ ನಾಗರ್ಕೋಟಿ, ಪ್ರಸಿದ್ದ ಕೃಷ್ಣ, ವರುಣ್ ಚಕ್ರವರ್ತಿ.

ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ: ಋತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಅಂಬಾಟಿ ರಾಯುಡು, ಎಂಎಸ್ ಧೋನಿ (ನಾಯಕ / ವಿಕೆಟ್ ಕೀಪರ್), ಸ್ಯಾಮ್ ಕರ್ರನ್, ಎನ್ ಜಗದೀಸನ್, ರವೀಂದ್ರ ಜಡೇಜಾ / ಆರ್ ಸಾಯಿ ಕಿಶೋರ್, ಮಿಚೆಲ್ ಸಾಂಟ್ನರ್, ದೀಪಕ್ ಚಾಹರ್, ಮೋನು ಕುಮಾರ್, ಇಮ್ರಾನ್ ತಾಹಿರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications