
ಅಬುಧಾಬಿ: ಅಬುಧಾಬಿ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 16) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 32ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 8 ವಿಕೆಟ್‌ಗಳ ಸುಲಭ ಜಯ ಗಳಿಸಿದೆ. ಕ್ವಿಂಟನ್ ಡಿ ಕಾಕ್ ಸ್ಫೋಟಕ ಅರ್ಧ ಶತಕದೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯ ಬಲಿಷ್ಠ ತಂಡವೆಂಬುದನ್ನು ಈ ಗೆಲುವಿನ ಮೂಲಕ ಸಾರಿ ಹೇಳಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ಶುಬ್‌ಮನ್ ಗಿಲ್ 21, ಇಯಾನ್ ಮಾರ್ಗನ್ 39, ಆ್ಯಂಡ್ರೆ ರಸೆಲ್ 12, ಪ್ಯಾಟ್ ಕಮಿನ್ಸ್ 53 (36 ಎಸೆತ) ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು ಕೇವಲ 148 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಮುಂಬೈಗೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕ್ವಿಂಟನ್ ಡಿ ಕಾಕ್ ಮತ್ತು ರೋಹಿತ್ ಶರ್ಮಾ ಉತ್ತಮ ಜೊತೆಯಾಟ ನೀಡಿದರು. ರೋಹಿತ್ 35, ಡಿ ಕಾಕ್ 78 (44), ಸೂರ್ಯಕುಮಾರ್ ಯಾದವ್ 10, ಹಾರ್ದಿಕ್ ಪಾಂಡ್ಯ 21 ರನ್ ಕೊಡುಗೆಯೊಂದಿಗೆ 16.5ನೇ ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 149 ರನ್ ಬಾರಿಸಿತು.
ಕೋಲ್ಕತ್ತಾ ನೈಟ್ ರೈಡರ್ಸ್ ಇನ್ನಿಂಗ್ಸ್‌ನಲ್ಲಿ ಮುಂಬೈಯ ಟ್ರೆಂಟ್ ಬೌಲ್ಟ್, ಕೌಲ್ಟರ್ ನೈಲ್, ಜಸ್‌ಪ್ರೀತ್ ಬೂಮ್ರಾ ತಲಾ 1 ವಿಕೆಟ್, ರಾಹುಲ್ ಚಹಾರ್ 2 ವಿಕೆಟ್ ಪಡೆದರೆ, ಮುಂಬೈ ಇನ್ನಿಂಗ್ಸ್‌ನಲ್ಲಿ ಕೆಕೆಆರ್‌ನ ವರುಣ್ ಚಕ್ರವರ್ತಿ ಮತ್ತು ಶಿವಂ ಮಾವಿ ತಲಾ 1 ವಿಕೆಟ್‌ನಿಂದ ಗಮನ ಸೆಳೆದರು. ಕ್ವಿಂಟನ್ ಡಿ ಕಾಕ್ ಪಂದ್ಯಶ್ರೇಷ್ಠರೆನಿಸಿದರು.