For Quick Alerts
ALLOW NOTIFICATIONS  
For Daily Alerts
 

ಈ ಕ್ರಿಕೆಟರ್ ಟ್ರೇಡ್ ಮಾಡಿ ಎಂದು ಚೆನ್ನೈಗೆ ಹರ್ಷ ಕೊಟ್ರು ಸಲಹೆ

ಐಪಿಎಲ್ ಸೀಸನ್ ಮಧ್ಯದಲ್ಲೇ ಕ್ಯಾಪ್ಡ್ ಹಾಗೂ ಅನ್ ಕ್ಯಾಪ್ಡ್ ಆಟಗಾರರನ್ನು ತಂಡಗಳ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಧ್ಯದಲ್ಲೇ ಟ್ರೇಡ್ ಮಾಡಬಹುದಾಗಿದೆ. ಬ್ಯಾಟಿಂಗ್ ಸಮತೋಲನ ಕಳೆದುಕೊಂಡು ಕಂಗಾಲಾಗಿರುವ ಮೂರು ಬಾರಿ ಚಾಂಪಿಯನ್ ತಂಡಕ್ಕೆ ಸ್ಟಾರ್ ಕಾಮೆಂಟೆಟರ್ ಹರ್ಷ ಭೋಗ್ಲೆ ಉಚಿತವಾಗಿ ಸಲಹೆ ನೀಡಿದ್ದಾರೆ.

ಐಪಿಎಲ್ 2020 ಈಗ ಮಧ್ಯಾವಧಿಯಲ್ಲಿದ್ದು, ಎಲ್ಲಾ ತಂಡಗಳು 7 ಪಂದ್ಯಗಳನ್ನಾಡಿದ ಬಳಿಕ mid-season transfer ಸೌಲಭ್ಯ ಬಳಸಲು ಅರ್ಹವಾಗಲಿವೆ. ಈ ಸೌಲಭ್ಯ ಬಳಸಿ ಧೋನಿ ಬಳಗ ತಮ್ಮ ಮಧ್ಯಮ ಕ್ರಮಾಂಕವನ್ನು ಬಲಿಷ್ಠ ಗೊಳಿಸಿಕೊಳ್ಳಬಹುದು ಎಂದಿದ್ದಾರೆ.

ಐಪಿಎಲ್ 2020ರಲ್ಲಿ ಯುವ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶಗಳು ಸಿಗುತ್ತಿವೆ. ಆದರೆ, ಕೆಲ ಹಿರಿಯ ಆಟಗಾರರಿಗೆ ಕಣಕ್ಕಿಳಿಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸೀಸನ್ ಮಧ್ಯದಲ್ಲಿ ಹಿರಿಯ ಆಟಗಾರರ ವರ್ಗಾವಣೆ ಸೂಕ್ತ ಎಂದು ಅನೇಕ ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಣಕ್ಕಿಳಿದ ಅಜಿಂಕ್ಯ ರಹಾನೆ

ಕಣಕ್ಕಿಳಿದ ಅಜಿಂಕ್ಯ ರಹಾನೆ

ಡೆಲ್ಲಿ ಡೇರ್ ಡೆವಿಲ್ಸ್ ನಲ್ಲಿ ಪೃಥ್ವಿ-ಧವನ್ ಯಶಸ್ಸು ಕಾಣುತ್ತಿದ್ದು, ಅಜಿಂಕ್ಯ ರಹಾನೆಗೆ ಅವಕಾಶವೇ ಸಿಕ್ಕಿರಲಿಲ್ಲ. ಇಂಥ ಸಂದರ್ಭದಲ್ಲಿ ಉತ್ತಮ ಆರಂಭಿಕ ಆಟಗಾರರ ಕೊರತೆ ಅನುಭವಿಸುತ್ತಿರುವ ಫ್ರಾಂಚೈಸಿಗಳು Mid-Season Transfer ಬಳಸಿಕೊಂಡು ರಹಾನೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಆದರೆ, ಮುಂಬೈ ವಿರುದ್ಧ ನಡೆದ ಅಕ್ಟೋಬರ್ 11ರ ಪಂದ್ಯದಲ್ಲಿ ರಹಾನೆಗೆ ಅವಕಾಶ ಸಿಕ್ಕಿತ್ತು. ಆದರೆ, ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದೆ 15 ಎಸೆತಗಳಲ್ಲಿ 3 ಬೌಂಡರಿ ಇದ್ದ 15 ರನ್ ಗಳಿಸಿ ಪೆವಿಲಿಯನ್ ಸೇರಿದರು.

ಯಾವ ತಂಡಕ್ಕೆ ಸೇರಬಹುದು

ಯಾವ ತಂಡಕ್ಕೆ ಸೇರಬಹುದು

ಯಾವ ತಂಡಕ್ಕೆ: ತಂಡದಲ್ಲಿ ಸಂಪೂರ್ಣ ಬದಲಾವಣೆ ಬಯಸಿರುವ ಕಿಂಗ್ಸ್ ಎಲೆವನ್ ಪಂಜಾಬ್ ತಂಡವು ರಹಾನೆಯನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲು ಖರೀದಿಸಬಹುದು. ಪಂಜಾಬ್ ಆರಂಭಿಕ ಆಟಗಾರರ ಕೊರತೆ ನೀಗಿಸಿಕೊಂಡಿದೆ. ಮಧ್ಯಮ ಕ್ರಮಾಂಕದಲ್ಲಿ ಇನ್ನಿಂಗ್ಸ್ ಕಟ್ಟುವವರು ಇಲ್ಲ. ಹೀಗಾಗಿ ಅನುಭವಿ ಬ್ಯಾಟ್ಸ್ ಮನ್ ರಹಾನೆ ಬಲ ತುಂಬಬಹುದು ಎಂದು ಆಯ್ಕೆ ಮಾಡಿಕೊಳ್ಳಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದಾರೆ. ಆದರೆ, ಹರ್ಷ ಭೋಗ್ಲೆ ಅವರು ಟೆಸ್ಟ್ ತಂಡ ಉಪ ನಾಯಕ ರಹಾನೆ ಅವರು ಚೆನ್ನೈ ತಂಡಕ್ಕೆ ಸೂಕ್ತ ಎಂದು ಹೇಳಿದ್ದಾರೆ.

ಐಪಿಎಲ್ transfer ಆಗಬಲ್ಲ ಸಂಭಾವ್ಯ 5 ವಿದೇಶಿ ಆಟಗಾರರು ಯಾರು?

ಹರ್ಷ ಭೋಗ್ಲೆ ಟ್ವೀಟ್ ನಲ್ಲಿ ಏನಿದೆ

ಸೀಸನ್ ಮಧ್ಯದಲ್ಲಿನ ವರ್ಗಾವಣೆ ಬಗ್ಗೆ ನನ್ನ ಅನಿಸಿಕೆ ಇಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಉತ್ತಮ ಗುಣಮಟ್ಟದ ಪ್ರದರ್ಶನ ನೀಡಬಲ್ಲ ಅನುಭವಿ ಟಾಪ್ ಕ್ರಮಾಂಕದ ಬ್ಯಾಟ್ಸ್ ಮನ್ ಅಗತ್ಯವಿದೆ. ಅಜಿಂಕ್ಯ ರಹಾನೆಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ ಹೆಚ್ಚಿನ ಅವಕಾಶ ಸಿಗುವುದು ಡೌಟ್, ಹೀಗಾಗಿ, ರಹಾನೆಗೆ ಉತ್ತಮ ಅವಕಾಶ ಸಿಗಬೇಕಾದರೆ ಚೆನ್ನೈ ತಂಡ ಸೇರುವುದು ಉತ್ತಮ. ಇದರಿಂದ ಇಬ್ಬರಿಗೂ ಅನುಕೂಲ ಎಂದಿದ್ದಾರೆ.

ಮಿಡ್ ಸೀಸನ್ ಆಟಗಾರರ ವರ್ಗಾವಣೆ ನಿಮಯಗಳು

ಮಿಡ್ ಸೀಸನ್ ಆಟಗಾರರ ವರ್ಗಾವಣೆ ನಿಮಯಗಳು

* ಪ್ರಸಕ್ತ ಸೀಸನ್ ನಲ್ಲಿ ಎಲ್ಲಾ 8 ತಂಡಗಳು ಕನಿಷ್ಠ 7 ಪಂದ್ಯಗಳನ್ನಾಡಿರಬೇಕು.
* ವರ್ಗಾವಣೆಗೆ ಒಳಪಡುವ ಆಟಗಾರ 2 ಪಂದ್ಯಕ್ಕಿಂತ ಹೆಚ್ಚು ಪಂದ್ಯವನ್ನಾಡಿರಬಾರದು.
* ಕ್ಯಾಪ್ಡ್ ಹಾಗೂ ಅನ್ ಕ್ಯಾಪ್ಡ್ ಆಟಗಾರರಿಬ್ಬರನ್ನು ಖರೀದಿಸಲು ಅಥವಾ ತಂಡದಿಂದ ತಂಡಕ್ಕೆ ವರ್ಗಾವಣೆ ಮಾಡಿಕೊಳ್ಳಲು ಸಾಧ್ಯ. * ಹೀಗಾಗಿ, ಇನ್ನೂ ಒಂದು ಪಂದ್ಯವಾಡದ ಪವನ್ ದೇಶಪಾಂಡೆಗೂ ಒಂದೇ ನಿಯಮ, ಸಿಕ್ಸರ್ ಕಿಂಗ್ ಗೇಲ್ ಗೂ ಅದೇ ನಿಯಮ.

Story first published: Monday, October 12, 2020, 10:11 [IST]
Other articles published on Oct 12, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+