ಐಪಿಎಲ್ ಇತಿಹಾಸದಲ್ಲಿ ಈವರೆಗೆ ಉಳಿದುಕೊಂಡಿರುವ 5 ವಿಶಿಷ್ಠ ದಾಖಲೆಗಳು

ಬೆಂಗಳೂರು, ಮಾರ್ಚ್ 26: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿ ನಡೆಯುತ್ತೋ ಇಲ್ಲವೋ ಎಂಬುದು ಗೊತ್ತಿಲ್ಲ. ಕೊರೊನಾವೈರಸ್‌ನಿಂದಾಗಿ ಸದ್ಯಕ್ಕಂತೂ 2020ರ ಐಪಿಎಲ್ ಟೂರ್ನಿ ಏಪ್ರಿಲ್ 15ರ ಬಳಿಕ ಮುಂದೂಡಲ್ಪಟ್ಟಿದೆ. ವಿಶ್ವದಲ್ಲೇ ಅದ್ದೂರಿ ಲೀಗ್ ಕ್ರಿಕೆಟ್ ಟೂರ್ನಿಯಾಗಿ ಗುರುತಿಸಿಕೊಂಡಿರುವ ಐಪಿಎಲ್ ಅಸಲಿಗೆ ಮಾರ್ಚ್ 29ಕ್ಕೆ ಆರಂಭವಾಗಬೇಕಿತ್ತು. ಆದರೆ ಮಾರಕ ಕೋವಿಡ್-19 ಸೋಂಕು ಜನಪ್ರಿಯ ಕ್ರಿಕೆಟ್ ಟೂರ್ನಿಯನ್ನು ಮಂಕಾಗಿಸಿದೆ. ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಐಪಿಎಲ್ ಜ್ವರ ಕಾವೇರಿರುತ್ತಿತ್ತು.
ವಿಶ್ವದ ಜನರ ಜೀವಕ್ಕೆ ಎರವಾಗುತ್ತಿರುವ ಕೊರೊನಾವೈರಸ್ ಸೋಂಕಿನಿಂದಾಗಿ ಯಾವುದೇ ಕ್ರೀಡಾ ಸ್ಪರ್ಧೆಗಳಾಗಲಿ, ಪ್ರಮುಖ ಕಾರ್ಯಕ್ರಮಗಳಾಗಲಿ ನಡೆಯುತ್ತಿಲ್ಲ. ಇಡೀ ಭಾರತವೇ 21 ದಿನಗಳ ಕಾಲ ಲಾಕ್‌ಡೌನ್‌ಗೆ ಒಳಗಾಗಿದೆ.
ಸದ್ಯ ಯಾವುದೇ ಕ್ರೀಡಾಸ್ಪರ್ಧೆಗಳು ನಡೆಯದಿದ್ದರೇನಂತೆ, ಹಿಂದಿನ ಕ್ರೀಡಾಸ್ಪರ್ಧೆಗಳ ಅಂಕಿ-ಅಂಶಗಳನ್ನು ಮೆಲುಕು ಹಾಕೋದಕ್ಕೆ ಏನಡ್ಡಿಯಿದೆ ಹೇಳಿ? ಐಪಿಎಲ್ ಇತಿಹಾಸದಲ್ಲಿನ ಐದು ದಾಖಲೆಗಳ ಅಂಕಿ-ಅಂಶಗಳು ಇಲ್ಲಿವೆ.

ಅತ್ಯಧಿಕ ರನ್
ವಿರಾಟ್ ಕೊಹ್ಲಿ - 5412
ಸುರೇಶ್ ರೈನಾ - 5368
ರೋಹಿತ್ ಶರ್ಮಾ - 4898
ಡೇವಿಡ್ ವಾರ್ನರ್ - 4706
ಶಿಖರ್ ಧವನ್ - 4579

ಅತ್ಯಧಿಕ ಕ್ಯಾಚ್‌ಗಳು
ಸುರೇಶ್ ರೈನಾ - 101
ಎಬಿ ಡಿವಿಲಿಯರ್ಸ್ - 93
ರೋಹಿತ್ ಶರ್ಮಾ - 83
ಕೀರನ್ ಪೊಲಾರ್ಡ್ - 82
ಡ್ವೇನ್ ಬ್ರಾವೋ ಮತ್ತು ವಿರಾಟ್ ಕೊಹ್ಲಿ - 74

ಅತ್ಯಧಿಕ ಸಿಕ್ಸರ್‌ಗಳು
ಕ್ರಿಸ್ ಗೇಲ್ - 326
ಎಬಿ ಡಿವಿಲಿಯರ್ಸ್ - 212
ಎಂಎಸ್ ಧೋನಿ - 209
ರೋಹಿತ್ ಶರ್ಮಾ - 194
ಸುರೇಶ್ ರೈನಾ - 194

ಐಪಿಎಲ್ ಗೆದ್ದ ಅತೀ ಕಿರಿಯ ನಾಯಕರು
ರೋಹಿತ್ ಶರ್ಮಾ (ಎಂಐ) - 26 ವರ್ಷ ಮತ್ತು 27 ದಿನಗಳು
ರೋಹಿತ್ ಶರ್ಮಾ (ಎಂಐ) - 28 ವರ್ಷ 25 ದಿನ
ಎಂಎಸ್ ಧೋನಿ (ಸಿಎಸ್ಕೆ) - 28 ವರ್ಷ, 9 ತಿಂಗಳು ಮತ್ತು 19 ದಿನಗಳು

ಅತೀ ವೇಗದ ಶತಕ ದಾಖಲೆ
ಯೂಸುಫ್ ಪಠಾಣ್ (ರಾಜಸ್ಥಾನ್ ರಾಯಲ್ಸ್) - 37 ಎಸೆತಗಳು
ಮುರಳಿ ವಿಜಯ್ (ಚೆನ್ನೈ ಸೂಪರ್ ಕಿಂಗ್ಸ್) - 46 ಎಸೆತಗಳು
ವಿರಾಟ್ ಕೊಹ್ಲಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) - 47 ಎಸೆತಗಳು
ವೀರೇಂದ್ರ ಸೆಹ್ವಾಗ್ (ಡೆಲ್ಲಿ ಡೇರ್‌ಡೆವಿಲ್ಸ್) - 48 ಎಸೆತಗಳು
ವೃದ್ಧಿಮಾನ್ ಸಹಾ (ಕಿಂಗ್ಸ್ ಇಲೆವೆನ್ ಪಂಜಾಬ್) - 49 ಎಸೆತಗಳು
ವೀರೇಂದ್ರ ಸೆಹ್ವಾಗ್ (ಕಿಂಗ್ಸ್ ಇಲೆವೆನ್ ಪಂಜಾಬ್) - 50 ಎಸೆತಗಳು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications