ಪಾಂಡ್ಯ ಸಹೋದರರಿಗೆ ಜೆರ್ಸಿ ನಂ.7 ಕೊಡುಗೆಯಿತ್ತ ಎಂಎಸ್ ಧೋನಿ

ದುಬೈ: ಆಗಸ್ಟ್ 15ರಂದು ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಭಾರತಕ್ಕೆ ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟ ನಾಯಕನಿಗೆ ವಿದಾಯ ಸಮಾರಂಭ ನಡೆಸಿಕೊಡಲಾಗಲಿಲ್ಲ ಎಂದು ಒಂದಿಷ್ಟು ಕ್ರಿಕೆಟ್ ಅಭಿಮಾನಿಗಳು ಹೇಳಿಕೊಂಡಿದ್ದರು.
ಆದರೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಎಂಎಸ್ ಧೋನಿಯೇ ಇತರ ಕ್ರಿಕೆಟಿಗರಿಗೆ ತನ್ನ ನೆನಪಿನ ಉಡುಗೊರೆ ನೀಡುತ್ತಿದ್ದಾರೆ. ಇತ್ತೀಚೆಗೆ ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್-ವಿಕೆಟ್ ಕೀಪರ್ ಇಂಗ್ಲೆಂಡ್‌ನ ಜೋಸ್ ಬಟ್ಲರ್‌ಗೆ ಧೋನಿ ತನ್ನ ಸಿಎಸ್‌ಕೆ ಜೆರ್ಸಿ ನಂ.7ನ್ನು ಉಡುಗೊರೆಯಾಗಿ ನೀಡಿದ್ದರು.
39ರ ಹರೆಯದ ಧೋನಿ ಶುಕ್ರವಾರ (ಅಕ್ಟೋಬರ್ 23) ಶಾರ್ಜಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ವೇಳೆಯೂ ಮುಂಬೈ ಇಂಡಿಯನ್ಸ್ ಆಲ್ ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಸಹೋದರರಿಗೆ 7ನೇ ಸಂಖ್ಯೆಯ ಜೆರ್ಸಿ ಕೊಟ್ಟು ಗಮನ ಸೆಳೆದಿದ್ದಾರೆ.
ಭಾರತದ ಮಾಜಿ ನಾಯಕನಿಂದ ಬಂದ ಉಡುಗೊರೆಗೆ ಪಾಂಡ್ಯ ಸಹೋದದರು ಖುಷಿ ವ್ಯಕ್ತಪಡಿಸಿದ್ದಾರೆ. 'ಪಾಂಡ್ಯ ಸಹೋದರರು ಧೋನಿಯ ಜೆರ್ಸಿ ನಂ.7ನ್ನು ಹಿಡಿದಿರುವ ಫೋಟೋ ಶೇರ್ ಮಾಡಿರುವ ಇಂಡಿಯನ್ ಪ್ರೀಮಿಯರ್ ಲೀಗ್, 'ಪಾಂಡ್ಯ ಸಹೋದರರಿಗಿದು ಅವಿಸ್ಮರಣೀಯ ಕ್ಷಣ' ಎಂದು ಬರೆದುಕೊಂಡಿದೆ. ಮತ್ತೊಂದು ಟ್ವೀಟ್‌ನಲ್ಲಿ 'ಮಹಿ ಭಾಯಿ' ಎಂದು ಹಾರ್ದಿಕ್ ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications