For Quick Alerts
ALLOW NOTIFICATIONS  
For Daily Alerts
 

ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ

IPL 2020: Mumbai Indians favorite team to lift cup-Bookies

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2020 ಮೊದಲ ಪಂದ್ಯದಲ್ಲಿ ಮೂರು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಲ್ಕು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸೋಲಿಸಲಿದೆ. ಜೊತೆಗೆ ಈ ಬಾರಿ ಟೂರ್ನಮೆಂಟ್ ಗೆದ್ದು 5ನೇ ಬಾರಿಗೆ ಚಾಂಪಿಯನ್ ಎನಿಸಲಿದೆ ಎಂದು ಬೆಟ್ಟಿಂಗ್ ತಜ್ಞರು ಭವಿಷ್ಯ ನುಡಿದಿದ್ದಾರೆ.

ಭಾರತದಲ್ಲಿ ವಾರ್ಷಿಕ 10 ಲಕ್ಷ ಕೋಟಿ ರು ಮೊತ್ತದ ಬೆಟ್ಟಿಂಗ್ ನಡೆಯುತ್ತದೆ. ಈ ಪೈಕಿ ಕ್ರಿಕೆಟ್ ಕ್ರಿಕೆಟ್ ಅದರಲ್ಲೂ ಐಪಿಎಲ್ ಬೆಟ್ಟಿಂಗ್ ಸಾವಿರಾರು ಕೋಟಿ ರು ವ್ಯವಹಾರ ನಡೆಯುತ್ತದೆ.

ಭಾರತದಲ್ಲಿ ಎಲ್ಲಾ ಬಗೆಯ ಜೂಜು, ಬೆಟ್ಟಿಂಗ್ ದಂಧೆ ನಿಷಿದ್ಧ. ಬೆಟ್ಟಿಂಗ್ ನಲ್ಲಿ ತೊಡಗಿರುವುದು ಕಂಡು ಬಂದರೆ ಗೂಂಡಾ ಕಾಯ್ದೆ, ಕೋಕಾ ಕಾಯ್ದೆಯಡಿಯಲ್ಲಿ ಬಂಧಿಸಿ ಜಾಮೀನು ರಹಿತ ಸೆಕ್ಷನ್ ಗಳಡಿಯಲ್ಲಿ ಕೊಳೆಯುವಂತೆ ಮಾಡಬಹುದು.

ಬುಕ್ಕಿಗಳ ಪ್ರಕಾರ ಕ್ರಮವಾಗಿ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ಕೋಲ್ಕತಾ ನೈಟ್ ರೈಡರ್ಸ್ ಟಾಪ್ ತಂಡಗಳಾಗಿ ಹೊರ ಹೊಮ್ಮಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈ ಬಾರಿಯೂ ನಿರಾಶೆ ಕಾದಿದೆ ಆದರೆ, ಕೊನೆ ಸ್ಥಾನಕ್ಕಂತೂ ಕುಸಿಯಲ್ಲ ಎಂದಿದ್ದಾರೆ.

ಟಾಪ್ ಬೆಟ್ಟಿಂಗ್ ತಾಣದ ಪ್ರಕಾರ

ಟಾಪ್ ಬೆಟ್ಟಿಂಗ್ ತಾಣದ ಪ್ರಕಾರ

ಮುಂಬೈ ಇಂಡಿಯನ್ ಹಾಗೂ ಚೆನ್ನೈ ತಂಡಗಳು ಐಪಿಎಲ್ 2020 ಗೆಲ್ಲ ಬಲ್ಲ ನೆಚ್ಚಿನ ತಂಡಗಳು ಎಂದು ಕ್ರಿಕೆಟ್ ಐಸಿಎಸ್ ಬೆಟ್ಟಿಂಗ್ ತಾಣದ ಹೇಳಿದೆ. ಸನ್ ರೈಸರ್ಸ್ ಹೈದರಾಬಾದ್ ಮೂರನೇ ಸ್ಥಾನದಲ್ಲಿದೆ. ದೆಹಲಿ ಕ್ಯಾಪಿಟಲ್ಸ್ ಅಚ್ಚರಿಯ ಆಯ್ಕೆಯಾಗಿದ್ದು, ನಾಲ್ಕನೇ ಸ್ಥಾನಕ್ಕೇರಿದೆ. ಮಿಕ್ಕಂತೆ ಬುಕ್ಕಿಗಳಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೇಲೆ ಯಾವುದೇ ನಿರೀಕ್ಷೆಯಿಲ್ಲ. ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್ ಎಲೆವನ್ ಪಂಜಾಬ್ ಲೆಕ್ಕಕ್ಕಿಲ್ಲ.

ಸ್ಫೋರ್ಟ್ಸ್ ಪೆಸಾ ಎಂಬ ಬೆಟ್ಟಿಂಗ್ ತಾಣ

ಸ್ಫೋರ್ಟ್ಸ್ ಪೆಸಾ ಎಂಬ ಬೆಟ್ಟಿಂಗ್ ತಾಣ

ಸ್ಫೋರ್ಟ್ಸ್ ಪೆಸಾ ಎಂಬ ಬೆಟ್ಟಿಂಗ್ ತಾಣದ ಪ್ರಕಾರ ಮುಂಬೈ ಇಂಡಿಯನ್ಸ್ ಗೆಲ್ಲುವ ನೆಚ್ಚಿನ ಕುದುರೆಯಾಗಿದೆ. ಆದರೆ, ಸನ್ ರೈಸರ್ಸ್ ಹೈದರಾಬಾದ್ ಎರಡನೇ ನೆಚ್ಚಿನ ತಂಡವೆನಿಸಿಕೊಂಡಿದ್ದು ,ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ಸ್ಥಾನಕ್ಕೆ ಕುಸಿದಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ನಾಲ್ಕನೇ ಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಐದು ಹಾಗೂ ಮಿಕ್ಕ ತಂಡಗಳು ನಂತರದ ಸ್ಥಾನದಲ್ಲಿವೆ.

ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ

ಅಂತಾರಾಷ್ಟ್ರೀಯ ಬೆಟ್ಟಿಂಗ್ ತಾಣಗಳು

ಅಂತಾರಾಷ್ಟ್ರೀಯ ಬೆಟ್ಟಿಂಗ್ ತಾಣಗಳು

ಫುಟ್ಬಾಲ್ ನಂತೆ ಅಂತಾರಾಷ್ಟ್ರೀಯ ಬೆಟ್ಟಿಂಗ್ ತಾಣಗಳು ಈ ಬಾರಿ ಐಪಿಎಲ್ ನಲ್ಲಿ ಆಸಕ್ತಿ ವಹಿಸಿವೆ. ಬೆಟ್ 365, ಬೆಟ್ ವೇ, ವಿಲಿಯಂ ಹಿಲ್ಸ್, ಬೆಟ್ ಫೇರ್ ಮುಂತಾದ ಜನಪ್ರಿಯ ತಾಣಗಳೂ ಕೂಡಾ ಮುಂಬೈ ಇಂಡಿಯನ್ಸ್ ತಂಡದ ಪರವೇ ಹೆಚ್ಚು ಹಣ ಬೀಳಲಿದೆ ಎಂದಿವೆ. ಅದರಲ್ಲೂ ಬೆಟ್ 365 ತಾಣ ಒಂದು ಹೆಜ್ಜೆ ಮುಂದೆ ಹೋಗಿ ಸೆ. 19ರಂದು ಅಬುದಾಭಿಯಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ ಸೋಲಿಸಲಿದೆ ಎಂದು ವರದಿ ನೀಡಿದೆ.

ಬ್ಯಾಟ್ಸ್ ಮನ್, ಬೌಲರ್ ಗಳ ಮೇಲೆ ಬೆಟ್ಟಿಂಗ್

ಬ್ಯಾಟ್ಸ್ ಮನ್, ಬೌಲರ್ ಗಳ ಮೇಲೆ ಬೆಟ್ಟಿಂಗ್

ಬುಕ್ಕಿಗಳ ಪ್ರಕಾರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಮತ್ತೆ ಮಿಂಚಲಿದ್ದಾರೆ. ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. ಬೌಲರ್ ಗಳ ಪೈಕಿ ಜಸ್ ಪ್ರೀತ್ ಬೂಮ್ರಾ, ಜೋಫ್ರಾ ಆರ್ಚರ್, ರಶೀದ್ ಖಾನ್ ಹೆಚ್ಚು ಹಣ ಹೂಡಿಕೆ ಪಡೆಯಬಲ್ಲ ಬೌಲರ್ ಗಳೆನಿಸಿದ್ದಾರೆ. ಅಂದ ಹಾಗೆ ಟಾಪ್ ತಂಡಗಳ ಕಥೆ ಹೀಗಾದರೆ ಬಾಟಮ್ ನಲ್ಲಿ ಯಾವ ಎರಡು ತಂಡಗಳು ಬರಬಹುದು ಎಂಬುದನ್ನು ಬುಕ್ಕಿಗಳು ಉತ್ತರಿಸಿದ್ದು ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್ ಎಲೆವನ್ ಪಂಜಾಬ್ ಕೊನೆ ಎರಡು ಸ್ಥಾನಕ್ಕೆ ತೃಪ್ತಿ ಪಡಬೇಕಾಗುತ್ತದೆ ಎಂದಿದ್ದಾರೆ.

ಐಪಿಎಲ್ ಮಹಾಸಮರ 2020 ಸಮಗ್ರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Story first published: Wednesday, September 23, 2020, 14:02 [IST]
Other articles published on Sep 23, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+