Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ವಿಂಟನ್ ಡಿ ಕಾಕ್ ಸಂದರ್ಶನ ಹಾಳುಗೆಡವಿದ ನೀತಾ ಅಂಬಾನಿ: ವಿಡಿಯೋ

IPL 2020: Nita Ambani crashes Quinton de Kock’s interview

ದುಬೈ: ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗೆಲುವಿನ ಇತಿಹಾಸ ನಿರ್ಮಿಸಿದೆ. ಐಪಿಎಲ್‌ನಲ್ಲಿ ಐದು ಬಾರಿ ಚಾಂಪಿಯನ್ಸ್ ಪಟ್ಟಕ್ಕೇರಿದ ಚೊಚ್ಚಲ ತಂಡವೆಂಬ ದಾಖಲೆಗೆ ಎಂಐ ಕಾರಣವಾಗಿದೆ.

ಮಂಗಳವಾರ (ನವೆಂಬರ್ 10) ಐಪಿಎಲ್ 13ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್‌ ಜಯ ಗಳಿಸುವ ಮೂಲಕ ಮುಂಬೈ ಇಂಡಿಯನ್ಸ್ 5ನೇ ಟ್ರೋಫಿ ಜಯಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ ನೀಡಿದ್ದ 157 ರನ್ ಗುರಿಯನ್ನು 18.4ನೇ ಓವರ್‌ನಲ್ಲಿ ತಲುಪಿದ್ದ ಮುಂಬೈ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿತ್ತು.

ಮುಂಬೈ ಸಾಧನೆಯಿಂದ ಫ್ರಾಂಚೈಸಿ ಮಾಲೀಕೆ ನೀತಾ ಅಂಬಾನಿ ಕೂಡ ಸಂಭ್ರಮದಲ್ಲಿದ್ದಿದ್ದು ಕಂಡು ಬಂದಿತ್ತು. ಗೆಲುವಿನ ಖುಷಿಯಲ್ಲಿದ್ದ ನೀತಾ, ಕ್ವಿಂಟನ್ ಡಿ ಕಾಕ್ ಸಂದರ್ಶನವನ್ನು ಹಾಳು ಗೆಡವಿದ್ದೂ ಸೆರೆಯಾಗಿತ್ತು. ಆದರೆ ನೀತಾ, ಡಿ ಕಾಕ್ ಸಂದರ್ಶನದ ಅರಿವಿಲ್ಲದೆ ಮಧ್ಯ ಪ್ರವೇಶಿಸಿದ್ದರು.

ಫೈನಲ್‌ನಲ್ಲಿ ಮುಂಬೈ ಗೆದ್ದ ಬಳಿಕ ಮುಂಬೈ ಆಟಗಾರರನ್ನು ನ್ಯೂಜಿಲೆಂಡ್ ಮಾಜಿ ಕ್ರಿಕೆಟರ್, ಕಾಮೆಂಟೇಟರ್ ಸೈಮನ್ ಡೌಲ್ ಸಂದರ್ಶನ ಮಾಡುತ್ತಿದ್ದರು. ಕ್ವಿಂಟನ್ ಡಿ ಕಾಕ್ ಮತ್ತು ನಾಥನ್ ಕೌಲ್ಟರ್-ನೈಲ್ ಅವರನ್ನು ಡೌಲ್ ಮಾತನಾಡಿಸುತ್ತಿದ್ದಾಗ ಮಧ್ಯ ಪ್ರವೇಶಿಸಿದ ನೀತಾ, 'ಕ್ವಿಂಟನ್‌..' ಎಂದು ಹ್ಯಾಂಡ್ ಶೇಕ್ ಮಾಡಿದವರೆ ಮತ್ತೆ ಸಂದರ್ಶನದ ಅರಿವಾಗಿ ದೂರ ನಡೆದಿದ್ದರು.

Story first published: Wednesday, November 11, 2020, 16:40 [IST]
Other articles published on Nov 11, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+