Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಂದರ್ಶನದಲ್ಲಿ ಕಾಡಿದ ಪಂತ್, ಸ್ಟೋಯ್ನಿಸ್‌ಗೆ ಪಾಂಟಿಂಗ್ ತಮಾಷೆಯ ಪ್ರತಿಕ್ರಿಯೆ

IPL 2020: One day I will get to do an interview in peace, Ponting tweet

ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದ ಸಂದರ್ಭದಲ್ಲಿ ಡೆಲ್ಲಿ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಸಂದರ್ಶನದಲ್ಲಿದ್ದಾಗ ರಿಷಭ್ ಪಂತ್ ಹಾಗೂ ಸ್ಟೋಯ್ನಿಸ್ ತಮಾಷೆಯಾಗಿ ಆಡಿದ ಮಂಗಾಟಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸ್ವತಃ ರಿಕಿ ಪಾಂಟಿಂಗ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮಾಷೆಯಾಗಿ ಬರೆದುಕೊಂಡಿದ್ದಾರೆ.

'ಒಂದು ದಿನ ನಾನು ನೆಮ್ಮದಿಯಾಗಿ ಇಂಟರ್ವ್ಯೂ ನೀಡುವ ಸಂದರ್ಭ ಒದಗಿ ಬರಲಿದೆ' ಎಂದು ರಿಕಿ ಪಾಂಟಿಂಗ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ರಿಷಭ್ ಪಂತ್ ಹಾಗೂ ಸ್ಟೋಯ್ನಿಸ್ ಅವರ ಲೈವ್ ಸಂದರ್ಭದ ಚಿತ್ರಗಳನ್ನು ಕೂಡ ಈ ಟ್ವಿಟ್‌ನಲ್ಲಿ ಪಾಂಟಿಂಗ್ ಹಂಚಿಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಬ್ಯಾಟಿಂಗ್ ನಡೆಸುತ್ತಿರಬೇಕಾದರೆ ರಿಕಿ ಪಾಂಟಿಂಗ್ ಕಾಮೆಂಟೇಟರ್‌ಗಳ ಜೊತೆಗೆ ಮಾತುಕತೆಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಡಗೌಟ್‌ನಲ್ಲಿದ್ದ ಪಂತ್ ಪಾಂಟಿಂಗ್ ಹಿಂಬಾಗದಲ್ಲಿ ನಿಂತು ಅನುಕರಿಸಲು ಆರಂಭಿಸಿದ್ದರು. ಮತ್ತೊಂದೆಡೆ ಅಲ್ಲೆ ಕುಳಿತಿದ್ದ ಸ್ಟೋಯ್ನಿಸ್ ಈ ಸಂದರ್ಭದಲ್ಲಿ ಜೋರಾಗಿ ನಗುವನ್ನು ವ್ಯಕ್ತಪಡಿಸುತ್ತಿದ್ದರು.

ರಿಷಭ್ ಪಂತ್ ಕೋಚ್ ಜೊತೆಗೆ ತಮಾಷೆಯಾಗಿ ನಡೆದುಕೊಂಡ ರೀತಿ ಇಂಟರ್‌ನೆಟ್‌ನಲ್ಲಿ ಭಾರೀ ವೈರಲ್ ಆಗಿದೆ. ರಿಷಭ್ ಹಾಸ್ಯ ಪ್ರವೃತ್ತಿಗೆ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಕೋಚ್ ಪಾಂಟಿಂಗ್ ತಮಾಷೆಯಾಗಿ ಟ್ವಿಟ್ಟರ್‌ನಲ್ಲೇ ಪ್ರತಿಕ್ರಿಯಿಸಿದ್ದಾರೆ.

Story first published: Sunday, October 18, 2020, 17:59 [IST]
Other articles published on Oct 18, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+