20ನೇ ಬಾರಿಗೆ ಕೊರೊನಾ ಟೆಸ್ಟ್ ಮಾಡಿಸಿದ ಪ್ರೀತಿ ಜಿಂಟಾ: 'ಕೋವಿಡ್ ಟೆಸ್ಟ್ ಕ್ವೀನ್'

ಯುಎಇನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕರು ಮತ್ತು ನಟಿ ಪ್ರೀತಿ ಜಿಂಟಾ 20ನೇ ಬಾರಿಗೆ ಕೋವಿಡ್-19 ಟೆಸ್ಟ್ ಮಾಡಿಸಿದ್ದಾರೆ.
ಪ್ರಸ್ತುತ ತಂಡದ ಜೊತೆಯಿರುವ ಪ್ರೀತಿ, ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನ ಹುರಿದುಂಬಿಸುತ್ತಿದ್ದಾರೆ, ಇನ್ನು ಗಮನಾರ್ಹವಾಗಿ ಅವರು 20ನೇ ಬಾರಿಗೆ ಕೋವಿಡ್-19 ಟೆಸ್ಟ್ ಮಾಡಿಸಿರುವುದಾಗಿ ತಮ್ಮ ಇನ್‌ಸ್ಟಾಗ್ರಾಮ್ ವೀಡಿಯೋದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕೊರೊನಾ ಟೆಸ್ಟ್‌ಪರಿಣಿತರೊಬ್ಬರು ಪ್ರೀತಿ ಜಿಂಟಾ ಹಂಚಿಕೊಂಡಿರುವ ವೀಡಿಯೋದಲ್ಲಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುತ್ತಿರುವುದನ್ನು ಕಾಣಬಹುದು. ಈ ವೀಡಿಯೋದಲ್ಲಿ ಟೆಸ್ಟ್ ಮುಗಿದ ಬಳಿಕ ನನ್ನದು 20ನೇ ಕೋವಿಡ್ ಟೆಸ್ಟ್ ಎಂದು ಹೇಳುತ್ತಾ, ತಾವು ಕೋವಿಡ್ ಟೆಸ್ಟ್ ರಾಣಿ ಎಂದು ಬಣ್ಣಿಸಿದ್ದಾರೆ.
View this post on InstagramA post shared by Preity G Zinta (@realpz) on
ಐಸಿಸಿ ಬಯೋ ಬಬಲ್ ನಿಯಮದ ಪ್ರಕಾರ ಪ್ರತಿ 3 ರಿಂದ 4 ದಿನಗಳಿಗೊಮ್ಮೆ ಕೋವಿಡ್ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದರ ಜೊತೆಗೆ ಆಟಗಾರರು ಹೊರಗೆ ಎಲ್ಲೂ ಹೋಗುವಂತಿಲ್ಲ. ತಂಡಕ್ಕೆ ನೀಡಲಾಗಿರುವ ಕೊಠಡಿ, ಜಿಮ್ ರೆಸ್ಟೋರೆಂಟ್‌ನಲ್ಲಿ ಮಾತ್ರ ಇರಬೇಕಾಗುತ್ತದೆ. ಹೊರಗಿನಿಂದ ಯಾವುದೇ ಆಹಾರ ತರುವಂತಿಲ್ಲ ಮತ್ತು ಚಾಲಕರು ಬಾಣಸಿಗರು ಸೇರಿದಂತೆ ಎಲ್ಲರೂ ಅಲ್ಲಿ ಲಭ್ಯವಿರುತ್ತಾರೆ.
ಬಯೋ ಬಬಲ್ ಕುರಿತು ಮಾಹಿತಿ ಹಂಚಿಕೊಂಡಿರುವ ಪ್ರೀತಿ ಜಿಂಟಾ ಈ ಟೂರ್ನಮೆಂಟ್ ನಡೆಯಲು ಕಾರಣವಾಗಿರುವ ಮತ್ತು ದುಡಿಯುತ್ತಿರುವ ಎಲ್ಲಾ ಕೊರೊನಾ ವಾರಿಯರ್ಸ್‌ಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications