Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ, ಎಬಿಡಿ, ಮೋರಿಸ್, ಚಾಹಲ್ ಹೊಸ ಹೇರ್ ಸ್ಟೈಲ್ ಫೋಟೋ ವೈರಲ್

IPL 2020: RCB Players Virat Kohli, ABD, Yuzi Chahal and Chris Morris New Hair Cut Pics goes viral

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 39ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಆಟಗಾರರ ನೂತನ ಹೇರ್‌ಸ್ಟೈಲ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್, ಆಲ್ ರೌಂಡರ್ ಕ್ರಿಸ್ ಮೋರಿಸ್, ಸ್ಪಿನ್ನರ್ ಯುಜುವೇಂದ್ರ ಚಾಹಲ್ ತಮ್ಮ ಹೊಸ ಹೇರ್‌ಸ್ಟೈಲ್ ಪೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ನಾಲ್ವರ ಹೇರ್‌ಸ್ಟೈಲ್ ಕೂಡ ಚೆನ್ನಾಗಿದೆ.

ಆರ್‌ಸಿಬಿ ಗೆಲುವಿಗಾಗಿ ಧಾರವಾಡದಲ್ಲಿ ಅಭಿಮಾನಿಯಿಂದ ವಿಶೇಷ ಪೂಜೆ!

ಐಪಿಎಲ್ ವೇಳೆ ಬೇರೆ ಬೇರೆ ತಂಡಗಳ ಆಟಗಾರರು ವಿಭಿನ್ನ ಗಡ್ಡ-ಮೀಸೆ, ಕೂದಲ ಶೈಲಿ ಮೂಲಕ ಗಮನ ಸೆಳೆದೋದು ಸಾಮಾನ್ಯ. ಈ ಬಾರಿಯ ಐಪಿಎಲ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿರುವುದರಿಂದ ಅಲ್ಲಿಯೂ ಎಲ್ಲಾ ತಂಡಗಳ ಆಟಗಾರರಿಗೂ ಹೇರ್‌ಸ್ಟೈಲ್ ಮಾಡೋಕೆ ಪ್ರತ್ಯೇಕ ಹೇರ್ ಸ್ಟೈಲಿಶ್ ಇದ್ದಾರೆ.

ಈ ಬಾರಿಯ ಐಪಿಎಲ್‌ ವೇಳೆ ಆರ್‌ಸಿಬಿ ಫ್ರಾಂಚೈಸಿಯ ಆಟಗಾರರು, ಸಿಬ್ಬಂದಿಯ ಹೇರ್‌ಸ್ಟೈಲ್ ಮಾಡೋಕೆ ತಾರೆಕ್ ನೂರ್ ಅಲ್ಲ ಎನ್ನುವ ಹೇರ್ ಸ್ಟೈಲಿಶ್ ಇದ್ದಾರೆ. ಕೊಹ್ಲಿ, ಎಬಿಡಿ, ಮೋರಿಸ್ ಮತ್ತು ಚಾಹಲ್‌ಗೂ ಇವರೇ ಹೊಸ ಹೇರ್ ಸ್ಟೈಲ್ ಮಾಡಿದ್ದಾರೆ.

Story first published: Wednesday, October 21, 2020, 16:53 [IST]
Other articles published on Oct 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+