KKR ವಿರುದ್ಧ ಮೂರು ವರ್ಷದ ಹಳೆಯ ಸೇಡು ತೀರಿಸಿಕೊಂಡ RCB

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಮವಾರ ಶಾರ್ಜಾ ಅಂಗಳದಲ್ಲಿ ಕೆಕೆಆರ್ ವಿರುದ್ಧ ಬೃಹತ್ ಗೆಲುವಿನ ಜೊತೆಗೆ ಎದುರಾಳಿಗೆ ಹೀನಾಯ ಸೋಲಿನ ರುಚಿ ತೋರಿಸಿದೆ.
ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 28ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಮೋಘ ಗೆಲುವು ಸಾಧಿಸಿದೆ. ಎಬಿ ಡಿವಿಲಿಯರ್ಸ್ ಅವರ ಸ್ಫೋಟಕ ಬ್ಯಾಟಿಂಗ್, ವಿರಾಟ್ ಕೊಹ್ಲಿ ಸಾಥ್ ಹಾಗೂ ಬೌಲರ್ಗಳ ಭರ್ಜರಿ ಪ್ರದರ್ಶನದಿಂದ ಕೊಹ್ಲಿ ಪಡೆ ಭರ್ಜರಿ ಜಯ ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
ಸ್ಲೋ ಪಿಚ್‌ನಲ್ಲಿ ಆರ್‌ಸಿಬಿ ನೀಡಿದ್ದ 195 ರನ್‌ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಕೆಕೆಆರ್ ನಿಗದಿತ 20 ಓವರ್ನಲ್ಲಿ 112 ರನ್ ಗಳಿಸಲಷ್ಟೇ ಸಾಧ್ಯವಾಯ್ತು. ಆರ್‌ಸಿಬಿ ಸ್ಪಿನ್ ಜೋಡಿಯ ಮೋಡಿ ಜೊತೆಗೆ ಕ್ರಿಸ್ ಮೊರಿಸ್ ದಾಳಿಗೆ ಕಂಗಾಲಾಯಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಕೆಕೆಆರ್ ತಂಡವು ಆರ್‌ಸಿಬಿ ವಿರುದ್ಧ ಹೀನಾಯ ಸೋಲು ಕಂಡಿತು. ಅದೂ ಕೂಡ ಕೊಹ್ಲಿ ಪಡೆಯು ಮೂರು ವರ್ಷಗಳ ಹಿಂದಿನ 82 ರನ್‌ಗಳ ಹೀನಾಯ ಸೋಲಿನ ಲೆಕ್ಕ ಚುಕ್ತಾ ಮಾಡಿತು.
ಅದು 2017, ಏಪ್ರಿಲ್ 23. ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೆಂಗಳೂರು ಬೌಲರ್ಸ್ ಬೌಲಿಂಗ್ ಮಾಡಿದ್ದರು. ಪರಿಣಾಮ ಕೆಕೆಆರ್ 19.3 ಓವರ್ನಲ್ಲಿ 131 ರನ್ಗೆ ಸರ್ವಪತನ ಕಂಡಿತು.
132 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೊಲ್ಕತ್ತಾ ವೇಗಿ ಕೌಲ್ಟರ್ ನೈಲ್ ಮೊದಲ ಓವರ್ನಲ್ಲೇ ಕೊಹ್ಲಿಯನ್ನ ಔಟ್ ಮಾಡಿ ಶಾಕ್ ನೀಡಿದ್ದರು. ನಾಯಕನ ಹಿಂದೆ ಬಂದ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿ ಕೇವಲ 49 ರನ್ಗಳಿಗೆ ಆಲೌಟ್ ಆಗಿದ್ದರು. ಆರ್ಸಿಬಿಯ ಈ ಕಳಪೆ ಪ್ರದರ್ಶನದಿಂದ 82 ರನ್‌ಗಳ ಹೀನಾಯ ಸೋಲನುಭವಿಸಿತು. ಆರ್‌ಸಿಬಿ ಪ್ರದರ್ಶನವು ಭಾರೀ ಟೀಕೆಗೆ ಗುರಿಯಾಗಿತ್ತು.
ಇದೀಗ ಮೂರು ವರ್ಷಗಳ ನಂತರ ಕೆಕೆಆರ್ ವಿರುದ್ಧ ಆರ್‌ಸಿಬಿ ಅದೇ 82ರನ್‌ಗಳ ಅಮೋಘ ಗೆಲುವು ಸಾಧಿಸಿ ಹಳೆಯ ಸೇಡು ತೀರಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications