ಕೊಹ್ಲಿ Vs ಧೋನಿ: ಗೆಲುವಿನ ಮಾಲೆ ಯಾರ ಕೊರಳಿಗೆ: ರಾಶಿಫಲ, ದಶಭುಕ್ತಿ ಭವಿಷ್ಯ
ಭಾರತ ಮತ್ತು ಪಾಕಿಸ್ತಾನ ಹೇಗೆ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಾಂಪ್ರದಾಯಿಕ ಎದುರಾಳಿಗಳೋ, ಐಪಿಎಲ್ ವಿಚಾರಕ್ಕೆ ಬಂದಾಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ.
ಹಾಲೀ ಐಪಿಎಲ್ ಸರಣಿಯಲ್ಲಿ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಮತ್ತು ಎಂ.ಎಸ್.ಧೋನಿ ತಂಡಗಳು ಮುಖಾಮುಖಿಯಾಗಲಿದೆ. ಇದುವರೆಗಿನ ಸೋಲು/ಗೆಲುವಿನ ಲೆಕ್ಕಾಚಾರದಲ್ಲಿ ಎರಡೂ ತಂಡಗಳು ಸಮಾನ ದುಃಖಿಗಳಾದರೂ, ಚೆನ್ನೈಗಿಂತ ಬೆಂಗಳೂರು ತಂಡದ ಸಾಧನೆ ಪರವಾಗಿಲ್ಲ ಎನ್ನಬಹುದು.
ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ (ಅ 10) ರಾತ್ರಿ ಇತ್ತಂಡಗಳು ಗೆಲುವಿಗಾಗಿ ಹೋರಾಟ ನಡೆಸಲಿವೆ. ಐದು ಪಂದ್ಯದಲ್ಲಿ ಮೂರು ಗೆಲುವಿನೊಂದಿಗೆ ಬೆಂಗಳೂರು ತಂಡ ಐದನೇ ಸ್ಥಾನದಲ್ಲಿ, ಆರು ಪಂದ್ಯದಲ್ಲಿ ಎರಡು ಗೆಲುವಿನೊಂದಿಗೆ ಚೆನ್ನೈ ತಂಡ ಆರನೇ ಸ್ಥಾನದಲ್ಲಿದೆ.
ಕಳೆದ ಗೆಲ್ಲುವ ಪಂದ್ಯವನ್ನು ಸೋತ ನಂತರ ಧೋನಿ ಪಡೆಯ ಮೇಲೆ ಸಾಕಷ್ಟು ಒತ್ತಡವಿದೆ. ಮಧ್ಯಮ ಕ್ರಮಾಂಕದ ಆಟಗಾರರು ಕ್ಲಿಕ್ ಆಗದೇ ಇರುವುದು ಚೆನ್ನೈ ತಂಡಕ್ಕೆ ತಲೆನೋವಾಗಿ ಪರಿಣಮಿಸುತ್ತಿದೆ. ಜ್ಯೋತಿಷ್ಯದ ಪ್ರಕಾರ, ಇಂದಿನ ಪಂದ್ಯವನ್ನು ಯಾರು ಗೆಲ್ಲುವ ಸಾಧ್ಯತೆಯಿದೆ.

ಎರಡೂ ತಂಡಗಳು 24 ಬಾರಿ ಮುಖಾಮುಖಿ ಆಗಿದೆ
ಇದುವರೆಗೆ ಎರಡೂ ತಂಡಗಳು 24 ಬಾರಿ ಮುಖಾಮುಖಿ ಆಗಿದೆ. ಅದರಲ್ಲಿ 8 ಪಂದ್ಯದಲ್ಲಿ ಬೆಂಗಳೂರು ತಂಡ, 15 ಪಂದ್ಯದಲ್ಲಿ ಚೆನ್ನೈ ತಂಡ ಗೆಲುವು ಸಾಧಿಸಿದರೆ, ಒಂದು ಪಂದ್ಯ ರದ್ದಾಗಿತ್ತು. ಈ ಅಂಕಿಅಂಶದ ಪ್ರಕಾರ ಧೋನಿ ಪಡೆ ಫೇವರೇಟ್ ಆದರೂ, ಹಾಲೀ ಸರಣಿಯಲ್ಲಿ ಬೆಂಗಳೂರು ತಂಡ, ಚೆನ್ನೈ ತಂಡಕ್ಕಿಂತ ಚೆನ್ನಾಗಿ ಆಡುತ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪ್ರಮುಖ ಆಟಗಾರ ಎಬಿ ಡಿವಿಲಿಯರ್ಸ್
"ಕ್ರೀಡೆಯಲ್ಲಿ ಗೆಲುವು, ಸೋಲು ಸಾಮಾನ್ಯ. ಕಳೆದ ಐದು ಪಂದ್ಯದಲ್ಲಿ ನಾವು ಉತ್ತಮವಾಗಿಯೇ ಆಡಿದ್ದೇವೆ. ವೈಯಕ್ತಿಕವಾಗಿ ಕಳೆದ ಪಂದ್ಯದಲ್ಲಿ ನನ್ನ ಬ್ಯಾಟಿಂಗ್ ಸರಿಯಿರಲಿಲ್ಲ. ಮುಂದಿನ ಪಂದ್ಯಗಳಲ್ಲಿಉತ್ತಮವಾಗಿ ಆಡುತ್ತೇನೆ. ಚೆನ್ನೈ ತಂಡದ ವಿರುದ್ದದ ಪಂದ್ಯವನ್ನು ಎದುರು ನೋಡುತ್ತಿದ್ದೇನೆ'ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪ್ರಮುಖ ಆಟಗಾರ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ಧೋನಿ ಮತ್ತು ಕೊಹ್ಲಿಯ ಗ್ರಹಗತಿ
ಕ್ಲಿಕ್ ಆಸ್ಟ್ರೋ ಡಾಟ್ ಕಾಂ ನೀಡಿರುವ ಭವಿಷ್ಯದ ಪ್ರಕಾರ, ಧೋನಿ ಮತ್ತು ಕೊಹ್ಲಿಯ ಗ್ರಹಗತಿಯನ್ನು ಅವಲೋಕಿಸಿದಾಗ, ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲುವ ಸಾಧ್ಯತೆ ತುಸು ಹೆಚ್ಚು. ಯಾಕೆಂದರೆ, ಕನ್ಯಾರಾಶಿಯ ಗ್ರಹಗತಿ ಕೊಹ್ಲಿಗೆ ಉತ್ತಮವಾಗಿದೆ.

ಕೊಹ್ಲಿ ಪಡೆ ಗೆಲ್ಲುವ ಸಾಧ್ಯತೆ ಸ್ವಲ್ಪವೇ ಸ್ವಲ್ಪ ಹೆಚ್ಚಿದೆ
ದಶಭುಕ್ತಿಯ ಲಾಭ ಕೊಹ್ಲಿಗಿಂತ ಧೋನಿಗೆ ಹೆಚ್ಚಿದೆ. ಆದರೆ, ಗ್ರಹಗತಿಯ ಲಾಭ ಧೋನಿಗಿಂತ ಕೊಹ್ಲಿಗೆ ತುಸು ಹೆಚ್ಚಿದೆ. ತಂಡದ ಬ್ಯಾಲನ್ಸ್ ವಿಚಾರದಲ್ಲಿ ಧೋನಿಗೆ, ಕೊಹ್ಲಿಗಿಂತ ಹೆಚ್ಚಿನ ಮಾರ್ಕ್ಸ್ ಇದೆ. ಆದರೆ, ಒಟ್ಟಾರೆಯಾಗಿ, ಪಂದ್ಯದಲ್ಲಿ ಕೊಹ್ಲಿ ಪಡೆ ಗೆಲ್ಲುವ ಸಾಧ್ಯತೆ ಸ್ವಲ್ಪವೇ ಸ್ವಲ್ಪ ಹೆಚ್ಚಿದೆ ಎಂದು ಆ ಭವಿಷ್ಯದಲ್ಲಿ ನುಡಿಯಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications