
ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ 55ನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಪ್ಲೇ ಆಫ್ ಹಂತಕ್ಕೇರಲು ಅತ್ಯಂತ ಮಹತ್ವದ್ದಾಗಿರುವ ಈ ಪಂದ್ಯದಲ್ಲಿ ಉಭಯ ತಂಡಗಳು ರಣತಂತ್ರದೊಂದಿಗೆ ಕಣಕ್ಕಿಳಿದಿವೆ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್ ಮೂರು ಬದಲಾವಣೆ ಮಾಡಿದೆ. ಅಜಿಂಕ್ಯಾ ರಹಾನೆ, ಅಕ್ಷರ್ ಪಟೇಲ್, ಡೇನಿಯಲ್ ಸ್ಯಾಮ್ಸ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ ಆರ್‌ಸಿಬಿ ಕೂಡ ಎರಡು ಬದಲಾವಣೆ ಮಾಡಿದ್ದು, ಗುರುಕೀರತ್ ಸಿಂಗ್ ಹಾಗೂ ನವದೀಪ್ ಸೈನಿ ಬದಲು ಶಿವಂ ದುಬೆ ಮತ್ತು ಶಬಾಜ್ ಅಹ್ಮದ್‌ಗೆ ಸ್ಥಾನ ನೀಡಲಾಗಿದೆ.
ಆರ್‌ಸಿಬಿ ಪ್ಲೇಯಿಂಗ್ 11:
ಜೋಶ್ ಫಿಲಿಪ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಕ್ರಿಸ್ ಮೊರಿಸ್, ಇಸುರು ಉದಾನ , ಶಬಾಜ್ ಅಹ್ಮದ್, ಮೊಹಮ್ಮದ್ ಸಿರಾಜ್, ಯುಜವೇಂದ್ರ ಚಹಾಲ್
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11:
ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್ (C), ರಿಷಭ್ ಪಂತ್ (W), ಮಾರ್ಕಸ್ ಸ್ಟೋಯ್ನಿಸ್, ಡೇನಿಯಲ್ ಸ್ಯಾಮ್ಸ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅನ್ರಿಕ್ ನೊರ್ಕಿಯಾ