ವೀಕೆಂಡ್‌ನಲ್ಲಿ ಆರ್‌ಸಿಬಿಗೆ ರಾಜಸ್ಥಾನ್ ರಾಯಲ್ಸ್ ಚಾಲೆಂಜ್

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪ್ರಯೋಗಗಳ ಮೂಲಕ ಮುಗ್ಗರಿಸಿದ ಆರ್‌ಸಿಬಿ ಕೊನೆಯ ಎಸೆತದವರೆಗೂ ಗೆಲ್ಲುವ ಅವಕಾಶವನ್ನ ಸೃಷ್ಟಿಸಿತ್ತು. ಆದರೆ ಅದೃಷ್ಟ ಲಕ್ಷ್ಮೀ ಪಂಜಾಬ್ ಪರ ಇದ್ದಿದ್ದರಿಂದ ಕೊಹ್ಲಿ ಪಡೆ ಮುಗ್ಗರಿಸಿತು.
ಶನಿವಾರ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಶನಿವಾರ ನಡೆಯಲಿರುವ ಈ ಪಂದ್ಯ ಎರಡೂ ತಂಡಗಳ ಪಾಲಿಗೆ ಮಹತ್ವದ್ದಾಗಿದೆ.
ಆರ್ ಸಿಬಿ ಆಡಿರುವ 8 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಜಯ ಹಾಗೂ 3 ಸೋಲಿನೊಂದಿಗೆ 10 ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದರೆ, ರಾಜಸ್ಥಾನ್ 8 ಪಂದ್ಯಗಳಲ್ಲಿ 3 ಜಯ ಹಾಗೂ 5 ಸೋಲಿನೊಂದಿಗೆ 7ನೇ ಸ್ಥಾನಕ್ಕೆ ಕುಸಿದಿದೆ.
ಆರ್ ಸಿಬಿ ಬ್ಯಾಟಿಂಗ್ ಮಧ್ಯಮ ಕ್ರಮಾಂಕದಲ್ಲಿ ಅಸ್ಥಿರ ಪ್ರದರ್ಶನ ನೀಡುತ್ತಿರುವುದು ತಂಡದ ಚಿಂತೆ ಹೆಚ್ಚಿಸಿದೆ. ರಾಜಸ್ಥಾನ್ ಕೂಡ ಇದೇ ಸಮಸ್ಯೆ ಎದುರಿಸುತ್ತಿದ್ದು ಯಾವ ತಂಡ ಈ ದೌರ್ಬಲ್ಯದಿಂದ ಹೊರಗೆ ಬರುತ್ತದೆ ಎಂಬುದರ ಮೇಲೆ ತಂಡದ ಗೆಲುವು ಅವಲಂಬಿಸಿದೆ.
ಬೌಲಿಂಗ್ ವಿಭಾಗದಲ್ಲಿ ಕಳೆದ ಹಲವು ಸೀಸನ್‌ಗಳಿಗೆ ಹೋಲಿಸಿದರೆ ಆರ್‌ಸಿಬಿ ಸಾಕಷ್ಟು ಬೌಲಿಷ್ಟವಾಗಿದೆ. ಸೈನಿ, ಉದಾನ ಹಾಗೂ ಕ್ರಿಸ್ ಮೊರಿಸ್ ಜೊತೆಗೆ ಅವಳಿ ಸ್ಪಿನ್ ಜೋಡಿ ಸಖತ್ ವರ್ಕ್ ಆಗಿದೆ.
ದುಬೈ ಇಂಟರ್‌ನ್ಯಾಷ್‌ನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್‌ಸಿಬಿ ವರ್ಸಸ್ ಆರ್‌ಆರ್ ನಡುವಿನ ಐಪಿಎಲ್ 13ನೇ ಆವೃತ್ತಿಯ 33ನೇ ಪಂದ್ಯವು, ಭಾರತೀಯ ಸಮಯ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications