For Quick Alerts
ALLOW NOTIFICATIONS  
For Daily Alerts
 

ರಾಜಸ್ಥಾನ್ ವಿರುದ್ಧ ಆರ್‌ಸಿಬಿ ಜಯಭೇರಿ: ಎಬಿಡಿ ಭರ್ಜರಿ ಬೇಟೆ

IPL 2020: RCB vs RR Match 33 Highlights In Kannada

ದುಬೈ ಇಂಟರ್‌ನ್ಯಾಷ್‌ನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 33ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕ ಗೆಲುವು ಸಾಧಿಸಿದೆ. ಎಬಿ ಡಿ ವಿಲಿಯರ್ಸ್ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಕೊಹ್ಲಿ ಪಡೆ ಏಳು ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ಹೊಸ ಓಪನಿಂಗ್ ಜೋಡಿಯೊಂದಿಗೆ ಕಣಕ್ಕಿಳಿಯಿತು. ಜೋಸ್ ಬಟ್ಲರ್‌ನೊಂದಿಗೆ ರಾಬಿನ್ ಉತ್ತಪ್ಪ ಉತ್ತಮವಾಗಿ ಆರಂಭ ಒದಗಿಸಿದ್ರು.

ರಾಬಿನ್ ಉತ್ತಪ್ಪ 22 ಎಸೆತಗಳಲ್ಲಿ 41ರನ್ ಸಿಡಿಸಿ ಔಟಾದ್ರೆ, ಇದಕ್ಕೂ ಮೊದಲು ಬೆನ್‌ ಸ್ಟೋಕ್ಸ್‌ 15ರನ್‌ಗೆ ಕ್ರಿಸ್‌ ಮೊರಿಸ್ ಬೌಲಿಂಗ್‌ನಲ್ಲಿ ಔಟಾದ್ರು. ಬಳಿಕ ಸಂಜು ಸ್ಯಾಮ್ಸನ್ 9, ಸ್ಟೀವನ್ ಸ್ಮಿತ್ 57, ಜಾಸ್ ಬಟ್ಲರ್ 24, ರಾಹುಲ್ ತೆವಾಟಿಯ ಅಜೇಯ 19ರನ್ ಸಿಡಿಸಿದ್ರು. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಸಿಡಿಸಿತು.

178ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ ಪರ ಆ್ಯರೋನ್ ಫಿಂಚ್ 14ರನ್‌ಗಳಿಸಿ ಬೇಗನೆ ವಿಕೆಟ್ ಒಪ್ಪಿಸಿದ್ರು. ಎರಡನೇ ವಿಕೆಟ್‌ಗೆ ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟವಾಡಿ ವಿಕೆಟ್ ಒಪ್ಪಿಸಿದ್ರು. ಕೊಹ್ಲಿ 43ರನ್‌ಗೆ ಔಟಾದ್ರೆ, ದೇವದತ್ ಪಡಿಕ್ಕಲ್ 35ರನ್‌ಗೆ ರಾಹುಲ್ ತೆವಾಟಿಯಾ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದ್ರು.

ಕೊಹ್ಲಿ ಔಟಾದ ಬಳಿಕ ನಡೆದಿದ್ದು ಎಬಿ ಡಿ ವಿಲಿಯರ್ಸ್ ಬೇಟೆ. ಅಬ್ಬರದ ಬೇಟೆಯಾಡಿದ ಎಬಿಡಿ ಕೇವಲ 22 ಎಸೆತಗಳಲ್ಲಿ ಆರು ಭರ್ಜರಿ ಸಿಕ್ಸರ್‌ಗಳು ಹಾಗೂ 1 ಬೌಂಡರಿ ಜೊತೆಗೆ 55ರನ್‌ ಸಿಡಿಸಿ ಆರ್‌ಸಿಬಿಗೆ ರೋಚಕ ಗೆಲುವು ತಂದುಕೊಟ್ಟರು.

ಈ ಗೆಲುವಿನ ಮೂಲಕ ಆರ್‌ಸಿಬಿ ಪಾಯಿಂಟ್ಸ್ ಟೇಬಲ್‌ನಲ್ಲಿ 9 ಪಂದ್ಯಗಳಲ್ಲಿ ಆರು ಗೆಲುವಿನ ಮೂಲಕ 12 ಪಾಯಿಂಟ್ಸ್ ಕಲೆಹಾಕಿ ಮೂರನೇ ಸ್ಥಾನದಲ್ಲಿದೆ.

Story first published: Saturday, October 17, 2020, 19:25 [IST]
Other articles published on Oct 17, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+