ಕೊಹ್ಲಿ ಹೆಸರಿನಲ್ಲಿದ್ದ ಅತಿ ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡ ರಾಬಿನ್ ಉತ್ತಪ್ಪ

ಭಾರೀ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಈವರೆಗೆ ಸಾಕಷ್ಟು ದಾಖಲೆಗಳು ಸೃಷ್ಠಿಯಾಗಿದೆ. ಬೌಂಡರಿ, ಸಿಕ್ಸರ್, ಅರ್ಧ ಶತಕ, ಅದ್ಭುತ ಕ್ಯಾಚ್‌ಗಳು ಅಭಿಮಾನಿಗಳಿಗೆ ಆರಂಭದ ದಿನದಿಂದಲೂ ಭರಪೂರ ಮನರಂಜನೆಯನ್ನು ನೀಡುತ್ತಿದೆ. ನಿತ್ಯವೂ ರೋಚಕ ಅನುಭವವನ್ನು ಐಪಿಎಲ್ ಮೂಲಕ ಅಭಿಮಾನಿಗಳು ಪಡೆದುಕೊಳ್ಳುತ್ತಿದ್ದಾರೆ.
ಅಬ್ಬರದ ಕ್ರಿಕೆಟ್ ಪಂದ್ಯಗಳ ಮಧ್ಯೆ ದಾಖಲೆ ಪುಸ್ತಕಕ್ಕೆ ಹಲವಾರು ಸಂಗತಿಗಳು ಪ್ರತಿ ಪಂದ್ಯದಲ್ಲೂ ಸೇರ್ಪಡೆಗೊಳ್ಳುವುದು ಸಾಮಾನ್ಯವಾಗಿದೆ. ಆದರೆ ಐಪಿಎಲ್ ಇತಿಹಾಸದಲ್ಲಿ ಬೇಡ ದಾಖಲೆಯೊಂದರ ಬಗ್ಗೆ ನಿಮಗೆಷ್ಟು ಅರಿವಿದೆ? ಆ ಕೆಟ್ಟ ದಾಖಲೆ ಈವರೆಗೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು ಎಂದರೆ ನಂಬುತ್ತೀರಾ?
ವಿಶ್ವಕ್ರಿಕೆಟ್‌ನಲ್ಲಿ ಅತ್ಯುನ್ನತ ದಾಖಲೆಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಐಪಿಎಲ್‌ನ ಕೆಟ್ಟ ದಾಖಲೆ ಯಾವುದು? ಈಗ ರಾವಿನ್ ಉತ್ತಪ್ಪ ಹೇಗೆ ಅದನ್ನು ತಮ್ಮ ಹೆಸರಿಗೆ ಬರೆದುಕೊಂಡರು ಮುಂದೆ ಓದಿ..

ರಾಜಸ್ಥಾನ್ ಸೋಲು, ಉತ್ತಪ್ಪಗೆ ಬೇಡದ ದಾಖಲೆ
ರಾಜಸ್ಥಾನ್ ರಾಯಲ್ಸ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲುವ ಮೂಲಕ ಆರ್‌ಆರ್ ತಂಡದ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಕೆಟ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಈ ಬೇಡದ ದಾಖಲೆ ಈಗ ರಾಬಿನ್ ಉತ್ತಪ್ಪ ಮುಡಿಗೇರಿದೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಸೋಲು
ಹೌದು, ಕೆಕೆಆರ್ ತಂಡಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ ಶರಣಾಗುವ ಮೂಲಕ ಆರ್‌ಆರ್ ತಂಡದ ಆಟಗಾರ ರಾಬಿನ್ ಉತ್ತಪ್ಪ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸೋಲು ಕಂಡ ಆಟಗಾರ ಎಂಬ ಅಪಕೀರ್ತಿಗೆ ಒಳಗಾಗಿದ್ದಾರೆ. 13ನೇ ಆವೃತ್ತಿಯಲ್ಲಿ ಪಾಲ್ಗೊಂಡಿರುವ ರಾಬಿನ್ ಉತ್ತಪ್ಪ ಸದ್ಯ ಎಲ್ಲಾ ತಂಡಗಳ ಆಟಗಾರರ ಪೈಕಿ ಅತಿ ಹೆಚ್ಚು ಸೋಲು ಕಂಡ ಆಟಗಾರನಾಗಿದ್ದಾರೆ.

ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು ಈ ದಾಖಲೆ
ಐಪಿಎಲ್‌ನ ಈ ಅತಿ ಕೆಟ್ಟ ದಾಖಲೆ ಈ ಹಿಂದೆ ಇದ್ದಿದ್ದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿ. ವಿರಾಟ್ ಕೊಹ್ಲಿ ಕೂಡ ಐಪಿಎಲ್‌ನ ಆರಂಭಿಕ ಟೂರ್ನಿಯಿಂದಲೂ ಕಣಕ್ಕಿಳಿಯುತ್ತಿದ್ದಾರೆ. ಆರಂಭದಿಂದಲೂ ಆರ್‌ಸಿಬಿ ತಂಡದಲ್ಲೇ ಗುರುತಿಸಿಕೊಂಡಿರುವ ಕೊಹ್ಲಿ ಈಗ ಈ ಕೆಟ್ಟ ದಾಖಲೆಯಿಂದ ಸದ್ಯಕ್ಕೆ ಪಾರಾಗಿದ್ದಾರೆ.

90 ಪಂದ್ಯಗಳಲ್ಲಿ ಕೊಹ್ಲಿ ಸೋಲು
ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಈವರೆಗೆ 90 ಸೋಲು ಕಂಡಿದ್ದಾರೆ. ಈ ಮೂಲಕ ಅತಿ ಹೆಚ್ಚು ಸೋತವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ಆದರೆ ರಾಜಸ್ಥಾನ್ ರಾಯಲ್ಸ್ ತಂಡ ಕೆಕೆಆರ್ ತಂಡಕ್ಕೆ ಟೂರ್ನಿಯಲ್ಲಿ ಮೊದಲ ಬಾರಿಗೆ ಶರಣಾಗುವ ಮೂಲಕ ಈ ದಾಖಲೆಯನ್ನು ಉತ್ತಪ್ಪ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಡಿಕೆ, ಶರ್ಮಾ ಕೂಡ ಈ ಪಟ್ಟಿಯಲ್ಲಿದ್ದಾರೆ
ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಇದ್ದರೆ ನಾಲ್ಕನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಇದ್ದಾರೆ. ದಿನೇಶ್ ಕಾರ್ತಿಕ್ 87 ಸೋಲಿಗೆ ಸಾಕ್ಷಿಯಾಗಿದ್ದರೆ ರೋಹಿತ್ 85 ಸೋಲನ್ನು ಕಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications