ಬೆಂಗಳೂರು, ಸೆ. 6: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ನಡೆಯಲಿದೆ. ಐಪಿಎಲ್ 2020 ಅಧಿಕೃತ ವೇಳಾಪಟ್ಟಿ ಇಂದು ಪ್ರಕಟವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ದುಬೈನಲ್ಲಿ ಕ್ವಾರಂಟೈನ್ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸದ್ಯ ಅಭ್ಯಾಸದಲ್ಲಿ ತೊಡಗಿದೆ. ಆಸ್ಟ್ರೇಲಿಯಾದ ಕೇನ್ ರಿಚರ್ಡನ್ಸ್ ಬದಲಿಗೆ ಸ್ಪಿನ್ ಬೌಲರ್ ಆ್ಯಡಂ ಜಂಪಾ ಆರ್ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಮಿಕ್ಕಂತೆ ತಂಡದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಹರಾಜಿನ ನಂತರ ಆರ್ ಸಿಬಿ ತಂಡ: ಕೇನ್, ಫಿಂಚ್, ಮೋರಿಸ್ ಬಲ
ಐಪಿಎಲ್ 2020 ಮೊದಲ ಪಂದ್ಯ ಸೆ. 19(ಶನಿವಾರ) ರಂದು ಅಬುಧಾಬಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದ್ದು ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೊದಲ ಪಂದ್ಯವನ್ನು ಸೆ.21(ಸೋಮವಾರ)ರಂದು ದುಬೈನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಪಂದ್ಯ ಕೂಡಾ ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.
ಐಪಿಎಲ್: ಎಲ್ಲಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಪ್ರಕಟ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು-
ಹೊಸದಾಗಿ ಬಂದವರು
* ಅರೋನ್ ಫಿಂಚ್(ವಿದೇಶಿ)
* ಕ್ರಿಸ್ ಮೋರಿಸ್(ವಿ)
* ಕೇನ್ ರಿಚರ್ಡ್ಸನ್(ವಿ)(ಬದಲಿಯಾಗಿ ಆಡಂ ಝಂಪಾ)
* ಶಹಬಾಜ್ ಅಹ್ಮದ್(ವಿ)
* ಪವನ್ ದೇಶಪಾಂಡೆ
* ಜೋಶುವ ಫಿಲಿಫೆ(ವಿ)
* ಡೇಲ್ ಸ್ಟೈನ್ (ವಿ)
* ಇಶುರು ಉದಾನ(ವಿ)
* ವಿರಾಟ್ ಕೊಹ್ಲಿ
* ಮೊಯೀನ್ ಅಲಿ(ವಿದೇಶಿ)
* ಯಜುವೇಂದ್ರ ಚಾಹಲ್
* ಎಬಿ ಡಿ ವಿಲಿಯರ್ಸ್(ವಿದೇಶಿ)
* ಪಾರ್ಥಿವ್ ಪಟೇಲ್
* ಮೊಹಮ್ಮದ್ ಸಿರಾಜ್
* ಪವನ್ ನೇಗಿ
* ಉಮೇಶ್ ಯಾದವ್
* ಗುರ್ ಕೀರತ್ ಮನ್
* ದೇವದತ್ ಪಡಿಕ್ಕಲ್
* ಶಿವಮ್ ದುಬೆ
* ವಾಷಿಂಗ್ಟನ್ ಸುಂದರ್
* ನವದೀಪ್ ಸೈನಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಗಳ ವೇಳಾಪಟ್ಟಿ | |||
---|---|---|---|
ದಿನಾಂಕ/ದಿನ | ಮೈದಾನ | ಎದುರಾಳಿ ತಂಡ | ಪಂದ್ಯ ಆರಂಭ ಸಮಯ |
ಸೆಪ್ಟೆಂಬರ್ 21, ಸೋಮವಾರ | ದುಬೈ | ಸನ್ ರೈಸರ್ಸ್ ಹೈದರಾಬಾದ್ | 7:30 IST |
ಸೆಪ್ಟೆಂಬರ್ 24, ಗುರುವಾರ | ದುಬೈ | ಕಿಂಗ್ಸ್ ಎಲೆವನ್ ಪಂಜಾಬ್ | 7:30 IST |
ಸೆಪ್ಟೆಂಬರ್ 28, ಸೋಮವಾರ | ದುಬೈ | ಮುಂಬೈ ಇಂಡಿಯನ್ಸ್ | 7:30 IST |
ಅಕ್ಟೋಬರ್ 03, ಶನಿವಾರ | ಅಬು ಧಾಬಿ | ರಾಜಸ್ಥಾನ್ ರಾಯಲ್ಸ್ | 3:30 IST |
ಅಕ್ಟೋಬರ್ 05, ಸೋಮವಾರ | ದುಬೈ | ದೆಹಲಿ ಕ್ಯಾಪಿಟಲ್ಸ್ | 7:30 IST |
ಅಕ್ಟೋಬರ್ 10, ಸೋಮವಾರ | ದುಬೈ | ಚೆನ್ನೈ ಸೂಪರ್ ಕಿಂಗ್ಸ್ | 7:30 IST |
ಅಕ್ಟೋಬರ್ 12, ಸೋಮವಾರ | ಶಾರ್ಜಾ | ಕೋಲ್ಕತಾ ನೈಟ್ ರೈಡರ್ಸ್ | 7:30 IST |
ಅಕ್ಟೋಬರ್ 15, ಗುರುವಾರ | ಶಾರ್ಜಾ | ಕಿಂಗ್ ಎಲೆವನ್ ಪಂಜಾಬ್ | 7:30 IST |
ಅಕ್ಟೋಬರ್ 17, ಶನಿವಾರ | ದುಬೈ | ರಾಜಸ್ಥಾನ್ ರಾಯಲ್ಸ್ | 3:30 IST |
ಅಕ್ಟೋಬರ್ 21, ಬುಧವಾರ | ಅಬು ಧಾಬಿ | ಕೋಲ್ಕತಾ ನೈಟ್ ರೈಡರ್ಸ್ | 7:30 IST |
ಅಕ್ಟೋಬರ್ 25, ಭಾನುವಾರ | ದುಬೈ | ಚೆನ್ನೈ ಸೂಪರ್ ಕಿಂಗ್ಸ್ | 3:30 IST |
ಅಕ್ಟೋಬರ್ 28, ಬುಧವಾರ | ಅಬು ಧಾಬಿ | ಮುಂಬೈ ಇಂಡಿಯನ್ಸ್ | 7:30 IST |
ಅಕ್ಟೋಬರ್ 31, ಶನಿವಾರ | ಶಾರ್ಜಾ | ಸನ್ ರೈಸರ್ಸ್ ಹೈದರಾಬಾದ್ | 7:30 IST |
ನವೆಂಬರ್ 02, ಸೋಮವಾರ | ಅಬು ಧಾಬಿ | ದೆಹಲಿ ಕ್ಯಾಪಿಟಲ್ಸ್ | 7:30 IST |