Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ಸಿ.ಎಸ್.ಕೆ.ಗೆ ಮರಳಲಿದ್ದಾರೆ ಋತುರಾಜ್ ಗಾಯಕ್ವಾಡ್

IPL 2020: Ruturaj Gaikwad is back in practice with the CSK team after testing negative in COVID-19

ದುಬೈ: ಕೊರೊನಾವೈರಸ್ ಸೋಂಕಿಗೆ ತುತ್ತಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಅವರು ಶೀಘ್ರ ತಂಡ ಸೇರಿಕೊಳ್ಳಲಿದ್ದಾರೆ.

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ತೆರಳಿದ್ದ ಸಿ.ಎಸ್.ಕೆ. ತಂಡದಲ್ಲಿ ದೀಪಕ್ ಚಹಾರ್ ಮತ್ತು ಋತುರಾಜ್ ಗಾಯಕ್ವಾಡ್ ಸೇರಿ ಒಟ್ಟು 13 ಮಂದಿಗೆ ಕೋವಿಡ್-19 ತಗುಲಿತ್ತು.

ಸೋಂಕು ತಗುಲಿದ್ದವರಲ್ಲಿ 12 ಮಂದಿ ಮೊದಲೇ ಚೇತರಿಸಿಕೊಂಡಿದ್ದರು. ಋತುರಾಜ್ ಎರಡೆರಡು ಪರೀಕ್ಷೆಯ ವರದಿಯೂ ಪಾಸಿಟಿವ್ ಎಂದೇ ಬಂದಿತ್ತು. ಇತ್ತೀಚೆಗೆ ನಡೆಸಿದ ಪರೀಕ್ಷೆಯಲ್ಲಿ ಗಾಯಕ್ವಾಡ್ ಗೆ ಕೊರೊನಾ ನೆಗೆಟಿವ್ ಬಂದಿದೆ.

ಅಭ್ಯಾಸ ನಡೆಸುವ ಮುನ್ನ ಮತ್ತು ತಂಡ ಸೇರುವ ಮುನ್ನ ಋತುರಾಜ್ ಮತ್ತೊಂದು ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸೆಪ್ಟೆಂಬರ್ 22ರಂದು ಐಪಿಎಲ್ 4ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಕಾದಾಡಲಿವೆ.

Story first published: Monday, September 21, 2020, 13:43 [IST]
Other articles published on Sep 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+