ಐಪಿಎಲ್ 2020: ಹೈದರಾಬಾದ್‌ನ ಸಂದೀಪ್ ಶರ್ಮಾಗೆ 100 ವಿಕೆಟ್

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್‌ನ ಸಂದೀಪ್ ಶರ್ಮಾ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ 100 ವಿಕೆಟ್‌ಗಳನ್ನು ಸಂದೀಪ್ ಪೂರೈಸಿದ್ದಾರೆ. ಶನಿವಾರ (ಅಕ್ಟೋಬರ್ 24) ನಡೆದ ಕಿಂಗ್ಸ್ 11 ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಶರ್ಮಾ ಈ ಸಾಧನೆ ಮಾಡಿದ್ದಾರೆ.
ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 43ನೇ ಪಂದ್ಯದಲ್ಲಿ ಸಂದೀಪ್ ಶರ್ಮಾಗೆ ಕಿಂಗ್ಸ್ 11 ಪಂಜಾಬ್ ಬ್ಯಾಟ್ಸ್‌ಮನ್ ಮನ್‌ದೀಪ್ ಸಿಂಗ್ ವಿಕೆಟ್ ಲಭಿಸಿತು. 4.6ನೇ ಓವರ್‌ನಲ್ಲಿ ಶರ್ಮಾ ಎಸೆತಕ್ಕೆ ಮನ್‌ದೀಪ್, ರಶೀದ್ ಖಾನ್‌ಗೆ ಕ್ಯಾಚಿತ್ತು 17 ರನ್‌ಗೆ ನಿರ್ಮಿಸಿದರು.
87 ಐಪಿಎಲ್ ಪಂದ್ಯಗಳನ್ನಾಡಿರುವ ಸಂದೀಪ್, 7.81 ಎಕಾನಮಿಯಲ್ಲಿ 100 ವಿಕೆಟ್ ಪಡೆದಿದ್ದಾರೆ. 2 ಟಿ20ಐ ಇನ್ನಿಂಗ್ಸ್‌ಗಳಲ್ಲಿ 2 ವಿಕೆಟ್ ಪಡೆದಿದ್ದಾರೆ. ಶನಿವಾರದ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಸನ್ ರೈಸರ್ಸ್ ಹೈದರಾಬಾದ್ ಬೌಲಿಂಗ್ ಆಯ್ದುಕೊಂಡಿತ್ತು.
ಪಂಜಾಬ್‌ನ ಪಾಟಿಯಾಲದವರಾದ ಸಂದೀಪ್, ಐಪಿಎಲ್‌ನಲ್ಲಿ ಕಿಂಗ್ಸ್ 11 ಪಂಜಾಬ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಪರ ಆಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications