ಸಾರಾ-ಶುಬ್‌ಮನ್ ಡೇಟಿಂಗ್ ಗುಸುಗುಸುಗೆ ಕಿಡಿ ಹಚ್ಚಿದ ಸಾರಾ ಪೋಸ್ಟ್

ನವದೆಹಲಿ: ಭಾರತದ ಯುವ ಬ್ಯಾಟ್ಸ್‌ಮನ್ ಶುಬ್‌ಮನ್ ಗಿಲ್ ಮತ್ತು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಮಧ್ಯೆ ಡೇಟಿಂಗ್ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳು ಹರಿದಾಡುತ್ತಿವೆ. ಸಾರಾ ಮತ್ತು ಶುಬ್‌ಮನ್ ಮಧ್ಯೆ ಏನೋ ನಡೆಯುತ್ತಿದೆ ಎಂದು ಅಭಿಮಾನಿಗಳು ಈ ಮೊದಲೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ಈಗ ಸಾರಾ ಮಾಡಿರುವ ಒಂದು ಪೋಸ್ಟ್ ಇಬ್ಬರ ನಡುವಿನ ಡೇಟಿಂಗ್ ಗುಸುಗುಸುಗೆ ಕಿಡಿ ಹಚ್ಚಿದೆ.
ಈ ಮೊದಲು ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವಾಗ ಶುಬ್‌ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಇಬ್ಬರೂ ಒಂದೇ ರೀತಿಯ ಚಿತ್ರ ಮತ್ತು ತಲೆಬರಹ ನೀಡಿ ಜಾಲತಾಣಿಗರ ಗಮನ ಸೆಳೆದಿದ್ದರು.
ಇದೀಗ ಸಾರಾ ಮಾಡಿರುವ ಪ್ರತಿಕ್ರಿಯೆಯೊಂದು ವೈರಲ್ ಆಗಿದೆ. ಇಬ್ಬರ ಮಧ್ಯೆಯೂ ಏನೋ ಇದೆ ಅಂತ ನೆಟ್ಟಿಗರು ಮತ್ತೆ ಮಾತನಾಡಿಕೊಳ್ಳುತ್ತಿದ್ದಾರೆ.

ಒಂದೇ ರೀತಿಯ ಪೋಸ್ಟ್
ಈ ಮೊದಲೂ ಕೂಡ ಸಾರಾ ಮತ್ತು ಶುಬ್‌ಮನ್ನೆಟ್ಟಿಗರಿಗೆ ಆಹಾರವಾಗಿದ್ದರು ಅಂದೆವಲ್ಲ? ಆಗ ಸಾರಾ ಮತ್ತು ಶುಬ್‌ಮನ್ ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ತಮ್ಮ ಚಂದದ ಚಿತ್ರ ಹಾಕಿ ಅದಕ್ಕೆ 'ಐ ಸ್ಪೈ' ಎಂದು ಬರೆದುಕೊಂಡಿದ್ದರು.

ಒಂದೇ ರೀತಿಯ ಇಮೋಜಿ ಬಳಕೆ
ಆವತ್ತಿನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ನಲ್ಲಿ ಶುಬ್‌ಮಾನ್ ಮತ್ತು ಸಾರ ಇಬ್ಬರೂ ತಮ್ಮ ತಮ್ಮ ಫೋಟೋಗಳಿಗೆ ಒಂದೇ ರೀತಿಯ ಶೀರ್ಷಿಕೆ ಹಾಕಿದ್ದಷ್ಟೇ ಅಲ್ಲ, ಒಂದೇ ರೀತಿಯ ಇಮೋಜಿ ಕೂಡ ಬಳಸಿದ್ದರು. ಅಷ್ಟೇ ಅಲ್ಲ, ಇನ್‌ಸ್ಟಾಗ್ರಾಮ್ ಆ ಚಿತ್ರಗಳಲ್ಲಿ ಇಬ್ಬರೂ ಒಂದೇ ದಿಕ್ಕಿಗೆ ಮುಖ ತಿರುಗಿಸಿದ್ದು ಕಾಣಿಸಿತ್ತು.

ಕುತೂಹಲಕಾರಿ ಪೋಸ್ಟ್
ಸಾರಾ ತೆಂಡೂಲ್ಕರ್ ಬುಧವಾರ ಐಪಿಎಲ್ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದ್ದಾಗಲೂ ಒಂದು ಕುತೂಹಲಕಾರಿ ಇನ್‌ಸ್ಟಾಗ್ರಾಮ್ ಪೋಸ್ಟ್ ಹಂಚಿಕೊಂಡಿದ್ದರು. ಇದರಲ್ಲೂ ಶುಬ್‌ಮನ್ ಗಿಲ್ ಕಾಣಿಸಿಕೊಂಡಿದ್ದರು.

ಸಾರಾಳಿಂದ 'ಹಾರ್ಟ್' ರಿಪ್ಲೇ
ಬುಧವಾರ ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್ ವೇಳೆ ಸೂರ್ಯಕುಮಾರ್ ಹೊಡೆತ ಬೌಂಡರಿ ಲೈನ್ ದಾಡುವುದರಲ್ಲಿತ್ತು. ಆದರೆ ಶುಬ್‌ಮನ್ ಆ ಚೆಂಡನ್ನು ಡೈವ್ ಹೊಡೆಯುವ ಮೂಲಕ ತಡೆದಿದ್ದರು. ಗಿಲ್ ಈ ಪ್ರಯತ್ನಕ್ಕೆ ಸಾರಾ ಇನ್‌ಸ್ಟಾಗ್ರಾಮ್ ಸ್ಟೋರಿ ಹಾಕಿಕೊಂಡಿದ್ದರು. ಮತ್ತಿದಕ್ಕೆ ಹಾರ್ಟ್ ಸಿಂಬಲ್ ಮೂಲಕ ರಿಪ್ಲೇ ಮಾಡಿದ್ದರು. ಸಾರಾಳ ಈ ಪೋಸ್ಟ್ ವೈರಲ್ ಆಗಿದೆ. ಅಂದ್ಹಾಗೆ ಪಂದ್ಯದಲ್ಲಿ ಎಂಐ 49 ರನ್ ಗೆಲುವನ್ನಾಚರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications