ಆತ ಟಿ20 ಕ್ರಿಕೆಟ್‌ನ ಸರ್ವಶ್ರೇಷ್ಠ ಬೌಲರ್ ಎಂದು ಭಾರತೀಯನನ್ನು ಪ್ರಶಂಸಿಸಿದ ಶೇನ್ ಬಾಂಡ್

ಟಿ20 ಕ್ರಿಕೆಟ್ ಬ್ಯಾಟ್ಸ್‌ಮನ್‌ಗಳ ಆಟ ಎಂದೇ ಖ್ಯಾತವಾಗಿದೆ. ಈ ಮಾದರಿಯಲ್ಲಿ ಬೌಲರ್‌ಗಳು ಅತಿ ಹೆಚ್ಚು ದಂಡನೆಗೆ ಒಳಗಾಗುತ್ತಾರೆ. ಆದರೆ ಕೆಲ ಬೌಲರ್‌ಗಳು ಮಾತ್ರ ಈ ಮಾದರಿಯಲ್ಲೂ ಅದ್ಭುತ ಯಶಸ್ಸನ್ನು ಸಾಧಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲೂ ಇದು ಸಾಭೀತಾಗಿದೆ. ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿರುವ ಶೇನ್ ಬಾಂಡ್ ಭಾರತೀಯ ವೇಗಿಯನ್ನು ಟಿ20 ಕ್ರಿಕೆಟ್‌ನ ಶ್ರೇಷ್ಠ ಬೌಲರ್ ಎಂದಿದ್ದಾರೆ.
ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಬೌಲರ್ ಮುಂಬೈ ಇಂಡಿಯನ್ಸ್ ಪರವಾಗಿ ಶ್ರೇಷ್ಠ ಪ್ರದರ್ಶನವನ್ನು ನೀಡಿರುವ ಜಸ್ಪ್ರೀತ್ ಬೂಮ್ರಾ ಬಗ್ಗೆ. 'ಬೂಮ್ರಾ ಆಟವನ್ನು ನೋಡುವುದು ಸೌಭಾಗ್ಯವಾಗಿದೆ. ಆತ ಟಿ20 ಕ್ರಿಕೆಟ್‌ನಲ್ಲಿ ವಿಶ್ವದ ಶ್ರೇಷ್ಠ ಬೌಲರ್' ಎಂದು ಬಾಂಡ್ ಬಣ್ಣಿಸಿದ್ದಾರೆ.

ಡೆಲ್ಲಿ ವಿರುದ್ಧ ಮಾರಕ ದಾಳಿ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬೂಮ್ರಾ ಮಾರಕ ದಾಳಿಯನ್ನು ಸಂಘಟಿಸಿದರು. ನಾಲ್ಕು ಓವರ್‌ಗಳಲ್ಲಿ ಬೂಮ್ರಾ 1 ಮೇಡನ್ ಓವರ್ ಸಹಿತ ಕೇವಲ 14 ರನ್ ನೀಡಿ 4 ವಿಕೆಟ್ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಶ್ರೇಷ್ಠ ಪ್ರದರ್ಶನದ ಕಾರಣದಿಂದಾಗಿ ಬೂಮ್ರಾ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಬೂಮ್ರಾ 13 ಪಂದ್ಯಗಳಲ್ಲಿ 27 ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿದ್ದ ಕಗಿಸೋ ರಬಡಾ 2ನೇ ಸ್ಥಾನಕ್ಕೆ ಜಾರಿದ್ದಾರೆ.

ಟ್ರೆಂಟ್ ಬೋಲ್ಟ್ ಬಗ್ಗೆಯೂ ಪ್ರಶಂಸೆ
ಇನ್ನು ಇದೇ ಸಂದರ್ಭದಲ್ಲಿ ಶೇನ್ ಬಾಂಡ್ ಮುಂಬೈ ಇಂಡಿಯನ್ಸ್ ತಂಡದ ಇನ್ನೋರ್ವ ವೇಗಿ ನ್ಯೂಜಿಲೆಂಡ್ ಮೂಲದವರೇ ಆದ ಟ್ರೆಂಟ್ ಬೋಲ್ಟ್ ಪ್ರದರ್ಶನದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2012 ರಿಂದ ಬೋಲ್ಡ್ ಜೊತೆಗೆ ನಾನು ಕರ್ತವ್ಯ ನಿರ್ವಹಿಸುತ್ತಿದ್ದು ಅದನ್ನು ಇಷ್ಟಪಡುತ್ತೇನೆ. ಆತನ ಅತ್ಯುನ್ನತ ಪ್ರದರ್ಶನವನ್ನೂ ನಾನು ಕಂಡಿದ್ದೇನೆ. ಆತ ನಮ್ಮ ತಂಡದಲ್ಲಿರುವುದರಿಂದ ನಾನು ಉತ್ಸಾಹಿತನಾಗಿದ್ದೇನೆ. ಯಾಕೆಂದರೆ ಆತನೋರ್ವ ಎಂತಾ ಭಯಾನಕ ಬೌಲರ್ ಎಂಬುದು ತಿಳಿದಿದೆ ಎಂದಿದ್ದಾರೆ ಶೇನ್ ಬಾಂಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications