Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ಆಟದಲ್ಲಿ ಅಪಾರ್ಥ, ರನೌಟ್‌ ಆದ ಶಿಖರ್ ಧವನ್: ವಿಡಿಯೋ

IPL 2020: Shikhar Dhawan pays the price after misunderstanding with Prithvi Shaw

ದುಬೈ: ಆಟದಲ್ಲಿನ ಅಪಾರ್ಥದಿಂದಾಗಿ ಶಿಖರ್ ಧವನ್ ವಿಕೆಟ್ ಒಪ್ಪಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ದ್ವಿತೀಯ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಧವನ್ ಸೊನ್ನೆಗೆ ರನ್ ಔಟ್ ಆಗಿ ನಿರಾಸೆ ಅನುಭವಿಸಿದ್ದರು.

ಭಾನುವಾರ (ಸೆಪ್ಟೆಂಬರ್ 20) ಐಪಿಎಲ್ ದ್ವಿತೀಯ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ಧವನ್ ಅವರು ಕನ್ನಡಿಗ ಕೃಷ್ಣಪ್ಪ ಗೌತಮ್ ಓವರ್‌ನಲ್ಲಿ ರನ್‌ ಔಟ್ ಆದರು.

ಪಂದ್ಯದ ಆರಂಭಿಕ ಓವರ್‌ನಲ್ಲಿ ಕೆ ಗೌತಮ್ ಎಸೆತಕ್ಕೆ ಬ್ಯಾಟ್ ಬೀಸಿದ ಧವನ್ ರನ್‌ಗಾಗಿ ಕ್ರೀಸ್ ಬಿಟ್ಟರು. ಆದರೆ ಫೀಲ್ಡರ್‌ಗಳು ಬೇಗನೆ ಬಾಲ್ ಕಲೆಕ್ಟ್ ಮಾಡಿದ್ದು ಮತ್ತು ಆಚೆ ಕ್ರೀಸ್‌ನಲ್ಲಿದ್ದ ಪೃಥ್ವಿ ಶಾ ರನ್‌ಗೆ ಹಿಂಜರಿದಿದ್ದು ನೋಡಿ ಅರ್ಧದಿಂದಲೇ ವಾಪಸ್ ಓಡಲೆತ್ನಿಸಿದರು. ಆದರೆ ಅಷ್ಟರಲ್ಲಾಗಲೇ ಕೀಪರ್ ರಾಹುಲ್ ಚೆಂಡನಿಂದ ಬೇಲ್ಸ್ ಉರುಳಿಸಿದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್, ಮಾರ್ಕಸ್ ಸ್ಟೋಯ್ನಿಸ್ ಅದ್ಭುತ ಬ್ಯಾಟಿಂಗ್‌ನೊಂದಿಗೆ (21 ಎಸತಕ್ಕೆ 53 ರನ್) 20 ಓವರ್‌ಗೆ 8 ವಿಕೆಟ್ ಕಳೆದು 157 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್, ಮಯಾಂಕ್ ಅಗರ್ವಾಲ್ 89 (60 ಎಸತ) ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 157 ರನ್ ಬಾರಿಸಿ ಪಂದ್ಯ ಸರಿದೂಗಿಸಿತ್ತು. ಸೂಪರ್‌ ಓವರ್‌ನಲ್ಲಿ ಕೆXIಪಿ 2 ರನ್ ಬಾರಿಸಿದ್ದರಿಂದ ಡೆಲ್ಲಿ 3 ರನ್ ಬಾರಿಸಿ ಪಂದ್ಯ ಗೆದ್ದಿತು.

Story first published: Monday, September 21, 2020, 11:17 [IST]
Other articles published on Sep 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+