Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಫೈನಲ್: ವಿಶಿಷ್ಠ ದಾಖಲೆ ಬರೆಯಲಿದ್ದಾರೆ 'ಗಬ್ಬರ್' ಶಿಖರ್ ಧವನ್

Delhi Capitals opening batsman Shikhar Dhawan will be featuring for a third side in IPL final

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಮಂಗಳವಾರ ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ. ಈ ಪಂದ್ಯದಲ್ಲಿ ಡೆಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ವಿಶೇಷ ದಾಖಲೆ ನಿರ್ಮಿಸಲಿದ್ದಾರೆ.

ದುಬೈನಲ್ಲಿ ಮೈದಾನಕ್ಕಿಳಿಯುತ್ತಲೇ ಐಪಿಎಲ್ ಫೈನಲ್‌ ಪಂದ್ಯದಲ್ಲಿ ಬೇರೆ ಬೇರೆ ಮೂರು ತಂಡಗಳನ್ನು ಪ್ರತಿನಿಧಿಸಿದ ದಾಖಲೆ ಶಿಖರ್ ಧವನ್‌ ಹೆಸರಿಗೆ ಸೇರಿಕೊಳ್ಳಲಿದೆ. ಈ ದಾಖಲೆ ಸದ್ಯ ಇಬ್ಬರ ಹೆಸರಿನಲ್ಲಿದೆ. ಶೇನ್ ವಾಟ್ಸನ್ ಮತ್ತು ಯೂಸುಫ್ ಪಠಾಣ್ ಈ ದಾಖಲೆಗಾಗಿ ಗುರುತಿಸಿಕೊಂಡಿದ್ದರು. ಈಗ ಮೂರನೇ ಆಟಗಾರರಾಗಿ ಧವನ್ ಗಮನ ಸೆಳೆದಿದ್ದಾರೆ.

ಶಿಖರ್ ಧವನ್ 2010ರಲ್ಲಿ ಮುಂಬೈ ಇಂಡಿಯನ್ಸ್, 2016, 2018ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಈಗ ಡೆಲ್ಲಿ ಕ್ಯಾಪಿಟಲ್ಸ್ ಪರ ಫೈನಲ್‌ನಲ್ಲಿ ಆಡುತ್ತಿದ್ದಾರೆ. ಮೂರು ತಂಡಗಳಲ್ಲಿ ಹೈದರಾಬಾದ್ ಮತ್ತು ಮುಂಬೈ ಟ್ರೋಫಿ ಗೆದ್ದಿದೆ. ಡೆಲ್ಲಿ ಇನ್ನಷ್ಟೇ ಗೆಲ್ಲಬೇಕಿದೆ.

ಧವನ್‌ಗಿಂತ ಮೊದಲು ಐಪಿಎಲ್‌ನಲ್ಲಿ ಮೂರು ಬೇರೆ ಬೇರೆ ತಂಡಗಳ ಪರ ಫೈನಲ್‌ ಆಡಿರುವ ವಿಶಿಷ್ಠ ದಾಖಲೆಗಾಗಿ ಗುರುತಿಸಿಕೊಂಡಿರುವ ಶೇನ್ ವಾಟ್ಸನ್ ಅವರು ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದಾರೆ. ಇನ್ನು ಯೂಸುಫ್ ಪಠಾಣ್ ಅವರು ರಾಜಸ್ಥಾನ್, ಕೋಲ್ಕತ್ತಾ ಮತ್ತು ಹೈದರಾಬಾದ್ ಪರ ಆಡಿದ್ದರು.

Story first published: Tuesday, November 10, 2020, 17:30 [IST]
Other articles published on Nov 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+