ಕಾಮೆಂಟೆಟರ್ಸ್ ಡ್ರೀಮ್11 ಫ್ಯಾಂಟಸಿ ತಂಡ, ಕೊಹ್ಲಿಯೇ ಮಿಸ್ಸಿಂಗ್!
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಮೊದಲಾರ್ಧ ಮುಗಿಯುತ್ತಿದ್ದಂತೆ ಪ್ರಮುಖ ಕಾಮೆಂಟೆಟರ್ಸ್ ತಮ್ಮ ನೆಚ್ಚಿನ ಡ್ರೀಮ್11 ಫ್ಯಾಂಟಸಿ ತಂಡವನ್ನು ಹೆಸರಿಸಿದ್ದಾರೆ. ಪ್ರತಿ ಪಂದ್ಯಕ್ಕೂ ಫ್ಯಾಂಟಸಿ ಹನ್ನೊಂದು ಆಟಗಾರರನ್ನುಳ್ಳ ತಂಡ ರಚಿಸುವ ಅವಕಾಶವನ್ನು ಐಪಿಎಲ್ ಅಧಿಕೃತ ವೆಬ್ ತಾಣದಲ್ಲಿ ನೀಡಲಾಗಿದೆ.
ಕ್ರಿಕೆಟ್ ತಜ್ಞರಿಂದ ಹಿಡಿದು ಫ್ಯಾನ್ಸ್ ತನಕ ಪ್ರತಿ ದಿನದ ಪಂದ್ಯಕ್ಕೆ ಡ್ರಿಮ್11 ತಂಡವನ್ನು ಆಯ್ಕೆ ಮಾಡಬಹುದು. ಪ್ರತಿ ಆಟಗಾರನ ಪ್ರದರ್ಶನದ ಮೇಲೆ ಅಂಕಗಳು ಲಭಿಸಲಿದೆ. ಹೆಚ್ಚು ಅಂಕಗಳಿಸಿದವರಿಗೆ ವಿಶೇಷ ಕೊಡುಗೆಗಳು ಲಭ್ಯವಾಗಲಿವೆ.
ಪ್ರತಿ ತಂಡಗಳು 7 ಪಂದ್ಯಗಳನ್ನು ಮುಗಿಸಿದ ಬಳಿಕ ಕಾಮೆಂಟೆಟರ್ಸ್ ತಮ್ಮ ಆಯ್ಕೆಯ 11 ಆಟಗಾರರನ್ನು ಹೆಸರಿಸಿದ್ದಾರೆ. ಸದ್ಯಕ್ಕೆ ಇಲ್ಲಿ 7 ಪಂದ್ಯಗಳಲ್ಲಿ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಕಾಮೆಂಟೆಟರ್ಸ್ ಇಯಾನ್ ಬಿಷಪ್, ಮೈಕಲ್ ಸ್ಲೇಟರ್ ಹಾಗೂ ಸೈಮನ್ ಡೌಲ್ ನೀಡಿರುವ ತಂಡಗಳನ್ನು ನಿಮ್ಮ ಮುಂದಿಡಲಾಗುತ್ತಿದೆ. ನೀವು ನಿಮ್ಮ ಆಯ್ಕೆಯ ತಂಡವನ್ನು ನಮಗೆ ತಿಳಿಸಿ [email protected]

ಮೂವರು ಕಾಮೆಂಟೆಟರ್ಸ್ ಆಯ್ಕೆಯ ತಂಡ
ನ್ಯೂಜಿಲೆಂಡಿನ ಮಾಜಿ ಆಟಗಾರ ಸೈಮನ್ ಡೌಲ್, ಮಾಜಿ ವೆಸ್ಟ್ ಇಂಡೀಸ್ ಬೌಲರ್ ಇಯಾನ್ ಬಿಷಪ್ ಹಾಗೂ ಮಾಜಿ ಆಸ್ಟೇಲಿಯಾ ಆಟಗಾರ ಮೈಕಲ್ ಸ್ಲೇಟರ್ ಅವರು ಕಾಮೆಂಟ್ರಿ ಮಾಡುತ್ತಾ ನೇರ ವರದಿ ನೀಡುತ್ತಿದ್ದಾರೆ. ಜೊತೆಗೆ ಐಪಿಎಲ್ ಅಧಿಕೃತ ವೆಬ್ ತಾಣದಲ್ಲಿ ಡ್ರೀಮ್11 ಫ್ಯಾಂಟಸಿ ತಂಡವನ್ನು ಪ್ರಕಟಿಸಿದ್ದಾರೆ. ಮೊದಲ 7 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ಅವರನ್ನು ಈ ಮೂವರು ತಮ್ಮ ತಂಡದಲ್ಲಿ ಆಯ್ಕೆ ಮಾಡಿಲ್ಲ. ಮೂವರ ತಂಡದಲ್ಲೂ ಆರ್ ಸಿಬಿಯ ಯಜುವೇಂದ್ರ ಚಾಹಲ್ ಆಯ್ಕೆಯಾಗಿದ್ದಾರೆ.

ಸೈಮನ್ ಡೌಲ್ ಆಯ್ಕೆ
ಆರ್ ಸಿಬಿಯ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿ ವಿಲಿಯರ್ಸ್ ಸಿಕ್ಸರ್ ಸುರಿಮಳೆ ನೋಡಿದ ಬಳಿಕ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡು ನಾಯಕರನ್ನಾಗಿಸಿದ್ದಾರೆ. ಮುಂಬೈ ಆಲ್ ರೌಂಡರ್ ಕಿರಾನ್ ಪೊಲ್ಲಾರ್ಡ್ ಅವರನ್ನು ಉಪ ನಾಯಕರನ್ನಾಗಿ ಮಾಡಿದ್ದಾರೆ.
ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ
ಡೌಲ್ ಆಯ್ಕೆಯ ಹನ್ನೊಂದು ಮಂದಿ: ಎಬಿ ಡಿ ವಿಲಿಯರ್ಸ್ (ನಾಯಕ), ಮಯಾಂಕ್ ಅಗರವಾಲ್, ಶ್ರೇಯಸ್ ಅಯ್ಯರ್, ಶುಭ್ಮನ್ ಗಿಲ್, ರಿಷಬ್ ಪಂತ್ (ವಿಕೆಟ್ ಕೀಪರ್), ಕಿರಾನ್ ಪೊಲ್ಲಾರ್ಡ್ (ಉಪ ನಾಯಕ), ಮಾರ್ಕಸ್ ಸ್ಟೋಯಿನಿಸ್, ಯಜುವೇಂದ್ರ ಚಾಹಲ್, ವರುಣ್ ಚಕ್ರವರ್ತಿ, ಜಸ್ ಪ್ರೀತ್ ಬೂಮ್ರಾ, ಕಾಗಿಸೋ ರಬಾಡಾ.

ಇಯಾನ್ ಬಿಷಪ್ ಆಯ್ಕೆಯ ತಂಡ
ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಆಯ್ಕೆಯ ಡ್ರಿಮ್11 ತಂಡದಲ್ಲಿ ಮುಂಬೈ ಆಲ್ ರೌಂಡರ್ ಕಿರಾನ್ ಪೊಲ್ಲಾರ್ಡ್ ರನ್ನು ನಾಯಕ ಹಾಗೂ ಡೆಲ್ಲಿ ಡೇರ್ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಕ್ಯಾಪ್ಟನ್ ಮಾಡಿದ್ದಾರೆ.
ಬಿಷಪ್ ಆಯ್ಕೆಯ ಹನ್ನೊಂದು ಮಂದಿ: ಕಿರಾನ್ ಪೊಲ್ಲಾರ್ಡ್ (ನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಫಾಫ್ ಡು ಪ್ಲೆಸಿಸ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರಶೀದ್ ಖಾನ್, ಮೊಹಮ್ಮದ್ ಶಮಿ, ಕಾಗಿಸೋ ರಬಾಡಾ, ಜಸ್ ಪ್ರೀತ್ ಬೂಮ್ರಾ, ಯಜುವೇಂದ್ರ ಚಾಹಲ್.

ಮೈಕಲ್ ಸ್ಲೇಟರ್ ಆಯ್ಕೆಯ ತಂಡ
ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್ ಮೈಕಲ್ ಸ್ಲೇಟರ್ ಅವರು ಕೂಡಾ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ನಾಯಕರಾಗಿ ಆಯ್ಕೆ ಮಾಡಿದ್ದರೆ, ಆರ್ ಸಿಬಿಯ ಎಬಿ ಡಿ ವಿಲಿಯರ್ಸ್ ರನ್ನು ಉಪ ನಾಯಕರನ್ನಾಗಿ ಹೆಸರಿಸಿದ್ದಾರೆ.ಹಾರ್ದಿಕ್ ಬದಲಿಗೆ ಕೃನಾಲ್ ಆಯ್ಕೆ ಮಾಡಿದ್ದಾರೆ ಜೊತೆಗೆ ಆರ್ ಸಿಯ ದೇವದತ್ ಪಡಿಕ್ಕಲ್ ಕೂಡಾ ಸ್ಥಾನ ನೀಡಿದ್ದಾರೆ.
ಸ್ಲೇಟರ್ ಆಯ್ಕೆಯ ತಂಡ: ಶ್ರೇಯಸ್ ಅಯ್ಯರ್ (ನಾಯಕ), ದೇವದತ್ ಪಡಿಕ್ಕಲ್, ಮಯಾಂಕ್ ಅಗರವಾಲ್, ಇಶಾನ್ ಕಿಶಾನ್, ಎಬಿ ಡಿ ವಿಲಿಯರ್ಸ್ (ಉಪ ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ಯಜುವೇಂದ್ರ ಚಾಹಲ್, ರಶೀದ್ ಖಾನ್, ಟ್ರೆಂಟ್ ಬೌಲ್ಟ್ ಹಾಗೂ ಕಾಗಿಸೋ ರಬಾಡಾ
ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications