Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯುಎಇಗೆ ಬಂದಿಳಿದ ಫಾಫ್ ಡು ಪ್ಲೆಸಿಸ್, ಲುಂಗಿ ಎನ್‌ಗಿಡಿ, ಕಾಗಿಸೊ ರಬಾಡ

IPL 2020: South Africans Du Plessis, Ngidi and Rabada reach UAE

ದುಬೈ: ನಗದು ಶ್ರೀಮಂತ ಟಿ20 ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸುವ ಸಲುವಾಗಿ ದಕ್ಷಿಣ ಆಫ್ರಿಕಾದ ಕ್ರಿಕೆಟಿಗರಾದ ಫಾಫ್ ಡು ಪ್ಲೆಸಿಸ್, ಕಾಗಿಸೊ ರಬಾಡ ಮತ್ತು ಲುಂಗಿ ಸಾನಿ ಎನ್‌ಗಿಡಿ ಮಂಗಳವಾರ (ಸೆಪ್ಟೆಂಬರ್ 1) ಯುನೈಟೆಡ್ ಅರಬ್ ಎಮಿರೇಟ್ಸ್‌ ತಲುಪಿದ್ದಾರೆ.

ಕೊರೊನಾವೈರಸ್ ಕಾರಣ ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್ ಅನ್ನು ಯುಎಇಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಹೀಗಾಗಿ 13ನೇ ಆವೃತ್ತಿಯ ಐಪಿಎಲ್ ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ದುಬೈ, ಶಾರ್ಜಾ ಮತ್ತು ಅಬುಧಾಬಿ ತಾಣಗಳಲ್ಲಿ ನಡೆಯಲಿವೆ.

ಯುಎಗೆ ಬಂದಿಳಿದಿರುವ ದಕ್ಷಿಣ ಆಫ್ರಿಕಾ ಆಟಗಾರರಲ್ಲಿ ಮಾಜಿ ನಾಯಕ ಡು ಪ್ಲೆಸಿಸ್ ಮತ್ತು ವೇಗಿ ಲುಂಗಿ ಎನ್‌ಗಿಡಿ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಂಪ್ ಸೇರಿಕೊಂಡರೆ, ಮತ್ತೊಬ್ಬ ವೇಗಿ ಕಾಗಿಸೊ ರಬಾಡ ಡೆಲ್ಲಿ ತಂಡದ ಹೋಟೆಲ್‌ನಲ್ಲಿ ಸಹ ಆಟಗಾರರ ಜೊತೆಗಿದ್ದಾರೆ.

ಮೂರೂ ಆಟಗಾರರು 6 ದಿನಗಳ ಐಸೊಲೇಶನ್ ಪಾಲಿಸಲಿದ್ದಾರೆ. ಈ ವೇಳೆ 1, 3 ಮತ್ತು 6ನೇ ದಿನಕ್ಕೊಮ್ಮೆ ಕೊರೊನಾವೈರಸ್ ಪರೀಕ್ಷೆ ಮಾಡಿಕೊಳ್ಳಲಿದ್ದಾರೆ. ಮೂರೂ ಟೆಸ್ಟ್‌ಗಳು ಪಾಸ್ ಆದ ಬಳಿಕವೇ ಮೂವರು ಟೂರ್ನಿ ನಡೆಯುವ ಬಯೋ ಬಬಲ್ ಒಳಗೆ ಪ್ರವೇಶಿಸಲು ಅರ್ಹರಾಗಲಿದ್ದಾರೆ.

Story first published: Wednesday, September 2, 2020, 9:56 [IST]
Other articles published on Sep 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+